ಅಭಿನಯ, ಸ್ಟಾರ್ಡಮ್ ಸುಲಭದ ಮಾತಲ್ಲ. ತೆರೆಮರೆಯ ಕಲಾವಿದರ ಪರಿಶ್ರಮ ನೋಡಿದರೆ ಇದು ತಿಳಿಯುತ್ತದೆ. ಪಾತ್ರಕ್ಕಾಗಿ ದೇಹ ತೂಕ ಹೆಚ್ಚು ಕಡಿಮೆ ಮಾಡಿಕೊಳ್ಳುವುದು, ಫಿಟ್ನೆಸ್ ಕಾಪಾಡಿಕೊಳ್ಳುವುದು ತಾರೆಯರ ವೃತ್ತಿಜೀವನದ ಬಹಳ ಮುಖ್ಯ ವಿಚಾರ. ಇದರ ಜೊತೆಗೆ, ತಮ್ಮ ಹೇರ್ ಸ್ಟೈಲ್ನಿಂದಲೂ ಟ್ರೆಂಡ್ ಕ್ರಿಯೇಟ್ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ.
ರಾಕಿ ಭಾಯ್ ಹೊಸ ಹೇರ್ ಸ್ಟೈಲ್: ಇತ್ತೀಚೆಗೆ ಯಶ್ ಅವರ ಹೊಸ ಹೇರ್ ಸ್ಟೈಲ್ ಬೆಂಗಳೂರಿನ ಗಾಂಧಿನಗರನಿಂದ ಬಾಲಿವುಡ್ ಮಟ್ಟದಲ್ಲೂ ಸುದ್ದಿಯಾಗಿತ್ತು. ಅಷ್ಟಕ್ಕೂ ಉದ್ದ ಕೇಶರಾಶಿಗೆ ಅವರು ಹೊಸ ಟಚ್ ಕೊಟ್ಟಿದ್ದೇಕೆ?, ಈ ಹಿಂದೆ ‘ರಾಮಾಚಾರಿ’ ಯಾವೆಲ್ಲಾ ಸಿನಿಮಾಗಳಿಗೆ ವಿಭಿನ್ನ ಹೇರ್ ಸ್ಟೈಲ್ ಮಾಡಿಸಿ ಟ್ರೆಂಡ್ ಸೆಟ್ ಮಾಡಿದ್ದರು ಎಂಬುದನ್ನು ನೋಡೋಣ.
ಲಕ್ಕಿ ಸಿನಿಮಾ: ಮೊಗ್ಗಿನ ಮನಸ್ಸಿನ ಲವರ್ ಬಾಯ್ ಆಗಿದ್ದ ಯಶ್ 2012ರಲ್ಲಿ ಬಂದ ‘ಲಕ್ಕಿ’ ಸಿನಿಮಾದಲ್ಲಿ ತಮ್ಮ ಪಾತ್ರಕ್ಕಾಗಿ ಮೊದಲ ಬಾರಿ ಕೂದಲಿಗೆ ಹೊಸ ರೂಪ ಕೊಟ್ಟಿದ್ದರು. ಮೋಹಕ ತಾರೆ ರಮ್ಯಾ ಜೊತೆ ರೊಮ್ಯಾನ್ಸ್ ಮಾಡಿದ್ದ ನಟ, ತಮ್ಮ ಕೂದಲಿಗೆ ಕಲರಿಂಗ್ ಮಾಡಿಸುವುದರೊಂದಿಗೆ, ಟ್ರೆಂಡಿ ಗಡ್ಡದಿಂದಲೂ ಗಮನ ಸೆಳೆದಿದ್ದರು.
ಮಾಸ್ಟರ್ ಪೀಸ್ ಸಿನಿಮಾ: ಯಶ್ ಉದ್ದ ಕೂದಲು ಬಿಟ್ಟು ಔಟ್ ಆ್ಯಂಡ್ ಔಟ್ ಮಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದ ಚಿತ್ರ ‘ಮಾಸ್ಟರ್ ಪೀಸ್’. 2015ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆದ ಈ ಚಿತ್ರದಲ್ಲಿ ತಮ್ಮ ಕೂದಲಿಗೆ ಗೋಲ್ಡನ್ ಕಲರಿಂಗ್ ಮಾಡಿಸಿ, ಉದ್ದ ಕೂದಲಿನಿಂದ ಟ್ರೆಂಡ್ ಆಗಿದ್ದರು.
ಸಂತು ಸ್ಟ್ರೈಟ್ ಫಾರ್ವರ್ಡ್: ನಟ ಮತ್ತೆ ತಮ್ಮ ಕೂದಲಿಗೆ ಹೊಸ ರೂಪ ಕೊಟ್ಟಿದ್ದು ‘ಸಂತು ಸ್ಟ್ರೇಟ್ ಫಾರ್ವರ್ಡ್’ ಚಿತ್ರದಲ್ಲಿ. ಸ್ವಲ್ಪ ಕೂದಲು ಕತ್ತರಿಸಿ, ಸ್ಪೈಕ್ ಹೇರ್ ಸ್ಟೈಲ್ನಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಯಶ್ ಹೊಸ ಸ್ಪೈಕಿ ಹೇರ್ ಸ್ಟೈಲ್ ಅಂದಿನ ದಿನಗಳಲ್ಲಿ ಕಾಲೇಜು ಹುಡುಗರ ಹಾಟ್ ಫೇವರೆಟ್ ಆಗಿತ್ತು.
ಕೆಜಿಎಫ್: ಹೀಗೆ ಸಿನಿಮಾದಿಂದ ಸಿನಿಮಾಕ್ಕೆ ಸ್ಯಾಂಡಲ್ವುಡ್ನಲ್ಲಿ ಟ್ರೆಂಡ್ ಆಗುತ್ತಿದ್ದ ಯಶ್ ಜಾಗತಿಕ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದು ಕೆಜಿಎಫ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ. ಈ ಸಿನಿಮಾಗಳಲ್ಲಿ ಉದ್ದ ಕೂದಲು ಹಾಗೂ ಗಡ್ಡ ಬಿಟ್ಟು ಹೊಸ ಟ್ರೆಂಡ್ ಶುರು ಮಾಡ್ತಾರೆ. ಕೆಜಿಎಫ್ ಸಿನಿಮಾ ನೋಡಿ ಅದೆಷ್ಟೋ ಮಂದಿ ಉದ್ದ ಕೂದಲು ಹಾಗೂ ಗಡ್ಡ ಬಿಡಲು ಶುರು ಮಾಡಿದ್ದರು.