ಟಾಕ್ಸಿಕ್ ಸಿನಿಮಾಗಾಗಿ ಯಶ್‌ ‘ಪಾಂಪಡೋರ್’ ಹೇರ್‌ಸ್ಟೈಲ್‌

ಅಭಿನಯ, ಸ್ಟಾರ್​ಡಮ್​ ಸುಲಭದ ಮಾತಲ್ಲ. ತೆರೆಮರೆಯ ಕಲಾವಿದರ ಪರಿಶ್ರಮ ನೋಡಿದರೆ ಇದು ತಿಳಿಯುತ್ತದೆ. ಪಾತ್ರಕ್ಕಾಗಿ ದೇಹ ತೂಕ ಹೆಚ್ಚು ಕಡಿಮೆ ಮಾಡಿಕೊಳ್ಳುವುದು, ಫಿಟ್ನೆಸ್​​ ಕಾಪಾಡಿಕೊಳ್ಳುವುದು ತಾರೆಯರ ವೃತ್ತಿಜೀವನದ ಬಹಳ ಮುಖ್ಯ ವಿಚಾರ. ಇದರ ಜೊತೆಗೆ, ತಮ್ಮ ಹೇರ್ ಸ್ಟೈಲ್​​ನಿಂದಲೂ ಟ್ರೆಂಡ್ ಕ್ರಿಯೇಟ್ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ.

ರಾಕಿ ಭಾಯ್​ ಹೊಸ ಹೇರ್ ಸ್ಟೈಲ್: ಇತ್ತೀಚೆಗೆ ಯಶ್‌ ಅವರ ಹೊಸ ಹೇರ್ ಸ್ಟೈಲ್ ಬೆಂಗಳೂರಿನ ಗಾಂಧಿನಗರನಿಂದ ಬಾಲಿವುಡ್ ಮಟ್ಟದಲ್ಲೂ ಸುದ್ದಿಯಾಗಿತ್ತು. ಅಷ್ಟಕ್ಕೂ ಉದ್ದ ಕೇಶರಾಶಿಗೆ ಅವರು ಹೊಸ ಟಚ್ ಕೊಟ್ಟಿದ್ದೇಕೆ?, ಈ ಹಿಂದೆ ‘ರಾಮಾಚಾರಿ’ ಯಾವೆಲ್ಲಾ ಸಿನಿಮಾಗಳಿಗೆ ವಿಭಿನ್ನ​​ ಹೇರ್ ಸ್ಟೈಲ್ ಮಾಡಿಸಿ ಟ್ರೆಂಡ್ ಸೆಟ್​ ಮಾಡಿದ್ದರು ಎಂಬುದನ್ನು ನೋಡೋಣ.

ಲಕ್ಕಿ ಸಿನಿಮಾ: ಮೊಗ್ಗಿನ ಮನಸ್ಸಿನ ಲವರ್ ಬಾಯ್​​ ಆಗಿದ್ದ ಯಶ್ 2012ರಲ್ಲಿ ಬಂದ ‘ಲಕ್ಕಿ’ ಸಿನಿಮಾದಲ್ಲಿ ತಮ್ಮ ಪಾತ್ರಕ್ಕಾಗಿ ಮೊದಲ ಬಾರಿ ಕೂದಲಿಗೆ ಹೊಸ ರೂಪ ಕೊಟ್ಟಿದ್ದರು. ಮೋಹಕ ತಾರೆ ರಮ್ಯಾ ಜೊತೆ ರೊಮ್ಯಾನ್ಸ್ ಮಾಡಿದ್ದ ನಟ, ತಮ್ಮ ಕೂದಲಿಗೆ ಕಲರಿಂಗ್​ ಮಾಡಿಸುವುದರೊಂದಿಗೆ, ಟ್ರೆಂಡಿ ಗಡ್ಡದಿಂದಲೂ ಗಮನ ಸೆಳೆದಿದ್ದರು‌.

ಮಾಸ್ಟರ್ ಪೀಸ್ ಸಿನಿಮಾ: ಯಶ್ ಉದ್ದ ಕೂದಲು ಬಿಟ್ಟು ಔಟ್ ಆ್ಯಂಡ್​ ಔಟ್ ಮಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದ ಚಿತ್ರ ‘ಮಾಸ್ಟರ್ ಪೀಸ್’.‌ 2015ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್​​ನಲ್ಲಿ ಕೊಳ್ಳೆ ಹೊಡೆದ ಈ ಚಿತ್ರದಲ್ಲಿ ತಮ್ಮ ಕೂದಲಿಗೆ ಗೋಲ್ಡನ್ ಕಲರಿಂಗ್ ಮಾಡಿಸಿ, ಉದ್ದ ಕೂದಲಿನಿಂದ ಟ್ರೆಂಡ್ ಆಗಿದ್ದರು.

ಸಂತು ಸ್ಟ್ರೈಟ್ ಫಾರ್ವರ್ಡ್: ನಟ ಮತ್ತೆ ತಮ್ಮ ಕೂದಲಿಗೆ ಹೊಸ ರೂಪ ಕೊಟ್ಟಿದ್ದು ‘ಸಂತು ಸ್ಟ್ರೇಟ್ ಫಾರ್ವರ್ಡ್’ ಚಿತ್ರದಲ್ಲಿ. ಸ್ವಲ್ಪ ಕೂದಲು ಕತ್ತರಿಸಿ, ಸ್ಪೈಕ್ ಹೇರ್ ಸ್ಟೈಲ್​ನಿಂದ ಸೆನ್ಸೇಷನ್​​ ಕ್ರಿಯೇಟ್ ಮಾಡಿದ್ದರು. ಯಶ್ ಹೊಸ ಸ್ಪೈಕಿ ಹೇರ್ ಸ್ಟೈಲ್ ಅಂದಿನ ದಿನಗಳಲ್ಲಿ ಕಾಲೇಜು ಹುಡುಗರ ಹಾಟ್ ಫೇವರೆಟ್ ಆಗಿತ್ತು.

ಕೆಜಿಎಫ್: ಹೀಗೆ ಸಿನಿಮಾದಿಂದ ಸಿನಿಮಾಕ್ಕೆ ಸ್ಯಾಂಡಲ್​ವುಡ್​ನಲ್ಲಿ ಟ್ರೆಂಡ್ ಆಗುತ್ತಿದ್ದ ಯಶ್ ಜಾಗತಿಕ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದು ಕೆಜಿಎಫ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ. ಈ ಸಿನಿಮಾಗಳಲ್ಲಿ ಉದ್ದ ಕೂದಲು ಹಾಗೂ ಗಡ್ಡ ಬಿಟ್ಟು ಹೊಸ ಟ್ರೆಂಡ್ ಶುರು ಮಾಡ್ತಾರೆ. ಕೆಜಿಎಫ್ ಸಿನಿಮಾ ನೋಡಿ ಅದೆಷ್ಟೋ ಮಂದಿ ಉದ್ದ ಕೂದಲು ಹಾಗೂ ಗಡ್ಡ ಬಿಡಲು ಶುರು ಮಾಡಿದ್ದರು.

Leave a Reply

Your email address will not be published. Required fields are marked *