ಲೇಖನ : ಅಶ್ವಿನಿ ಸಂಜೆಸೂರ್ಯ, ತುಮಕೂರು
ಶಾಲೆಯಲ್ಲಿ ಹಲ್ಲಿಗೆ ಕ್ಲಿಪ್ ಹಾಕಿಸಿಕೊಂಡ ಹುಡುಗಿಯೊಬ್ಬಳು ನಗುವಾಗಲೆಲ್ಲಾ ಪದೇ ಪದೇ ಅಂಗೈಯನ್ನು ಅಡ್ಡ ಹಿಡಿದುಕೊಳ್ಳುತ್ತಿದ್ದಳು.ಅವಳ ವರ್ತನೆ ಗುಂಪಿನಲ್ಲಿ ತೀರಾ ವಿಚಿತ್ರವಾಗಿ ಕಾಣುತ್ತಿತ್ತು.ನಾ ಕರೆದು ಹೇಳಿದೆ ಆರಾಮಾಗಿ ನಗು ಅದ್ಯಾಕೆ ಮತ್ತೆ ಮತ್ತೆ ಕೈ ಅಡ್ಡ ಹಿಡಿಯುತ್ತೀ ಎಂದು. ಮಿಸ್ ನಕ್ಕರೆ ನಾ ಚೆಂದ ಕಾಣಲ್ಲ ಎಂದು ಹಾಗೆ ಮಾಡ್ತೀನೆಂದಳು.ನೀ ಕೈ ಅಡ್ಡ ಹಿಡಿದರೆ ಮತ್ತೂ ಕೆಟ್ಟದಾಗಿ ಕಾಣ್ತೀ ಎಂದು ನಕ್ಕೆ.ಅಲ್ಲಿಗೆ ಅವಳಿಗೆ ಕೊಂಚ ಧೈರ್ಯ ಬಂತು ಅನ್ಸುತ್ತೆ ಕೈ ಅಡ್ಡ ಹಿಡಿಯದೆ ಬಾಯ್ತುಂಬ ನಕ್ಕಳು.ಅಂದಿನಿAದ ನಾ ಅವಳಲ್ಲಿ ಆ ವರ್ತನೆ ನೋಡಿಲ್ಲ.
ಕೆಲವೊಂದಷ್ಟು ಜನ ನಾ ಕಪ್ಪಗಿದೀನಿ,ಅಕ್ಕಿ ಹಿಟ್ಟಿನ ಹಾಗೆ ತೀರಾ ಬೆಳ್ಳಗಿದೀನಿ,ನಾ ಕೆಂಗಿ, ಬಿಳಿಚಿಕೊಂಡಿದೀನಿ,ದಪ್ಪಗಿದೀನಿ,ಸಣ್ಣಗಿದೀನಿ,ರೋಗಿಷ್ಠೆಯ ತರ ಕಾಣ್ತೀನಿ,ಹಲ್ಲು ಉಬ್ಬಿದೆ,ಕೆನ್ನೆ ಊದಿಕೊಂಡಿವೆ,ತಲೆಕೂದಲು ಸರಿ ಇಲ್ಲ,ಐಬ್ರೋಸ್ ಕಾಣೋದೇ ಇಲ್ಲ,ರೆಪ್ಪೆಗಳ ಥಿಕ್ ನೆಸ್ ಕಡಿಮೆ,ಗೂನು ಬೆನ್ನಿನ ತರ ಕಾಣ್ತೀನಿ,ಕಣ್ಣುಗಳು ಒಳಕ್ಕೆ ಹೋಗಿವೆ,ಮೂಗು ಗಿಡ್ಡ,ತುಟಿ ದಪ್ಪ ಎಂದು ತಮಗೆ ತಾವೇ ಏನೇನೋ ಊಹಿಸಿಕೊಂಡು ಜಗತ್ತಿನಲ್ಲಿ ಇರುವವರೆಲ್ಲಾ ಪರಮ ಸುಂದರರು,ಸುAದರಿಯರು ನಾವು ಮಾತ್ರವೇ ಹೀಗಿದೀವಿ ನಾ ಒಂಚೂರೂ ಚನಾಗಿಲ್ಲ,ಯಾವ ಡ್ರಸ್ ಹಾಕಿದರೂ ನಂಗೆ ಸರಿಯಾಗಿ ಸೂಟ್ ಆಗಲ್ಲ,ಫಿಟ್ ಅನಿಸಲ್ಲ ನಾ ಹಾಗಿರಬೇಕಿತ್ತು ,ಹೀಗಿರಬೇಕಿತ್ತು ಅವರವತರ ಇರಬೇಕಿತ್ತು,ಇವರ ತರ ಇರಬೇಕಿತ್ತು ಎಂದು ತಮ್ಮ ತಮ್ಮಲ್ಲೇ ಕೀಳಿರಿಮೆ ಅಥವಾ ಇನ್ಫೀರಿಯಾರಿಟಿಯಲ್ಲಿ ಮುಳುಗಿ ಒದ್ದಾಡುತ್ತಿರುತ್ತಾರೆ.
ಅವರು ಯಾರೂ ಏಕಾಏಕಿ ಹೀಗೆ ಕೀಳಿರಿಮೆ ಬೆಳೆಸಿಕೊಂಡಿರುವುದಿಲ್ಲ. ತೀರಾ ಆಪ್ತವರ್ಗ,ಅಥವಾ ಅವರನ್ನು ಕಂಡರೆ ಹೊಟ್ಟೆಉರಿದು ಕೊಳ್ಳುವ ಮಂದಿ ಆ ರೀತಿಯ ಕಾಮೆಂಟ್ ಗಳನ್ನು ಪಾಸ್ ಮಾಡಿರುವುದನ್ನು ಕೇಳಿ ಕೀಳಿರಿಮೆಗೆ ಒಳಗಾಗಿರುತ್ತಾರೆ.
ಇನ್ಫೀರಿಯಾರಿಟಿ ಇಂದ ಬಳಲುತ್ತಿರುವವರು ಸಭೆ ಸಮಾರಂಭಗಳಿಗೆ ಆರಾಮಾಗಿ ಬರಲಾರರು,ತಮ್ಮನ್ನು ತಾವು ಕನ್ನಡಿಯಲ್ಲಿ ನೋಡಿಕೊಳ್ಳಲೂ ಹಿಂದು-ಮುAದು ನೋಡುತ್ತಾರೆ.ಹೆಚ್ಚು ಜನ ಸೇರಿದ ಕಡೆ ಯಾವುದೋ ಒಂದು ಮೂಲೆಯಲ್ಲಿ ಕೂತುಬಿಡುತ್ತಾರೆ.ಯಾರೊಂದಿಗೂ ಹೆಚ್ಚು ಮಾತನಾಡುವುದಿಲ್ಲ.ಅವರಿಗೆ ಸರಿಹೊಂದುವವರೊAದಿಗೆ ಮಾತ್ರ ಅವರ ಮಾತುಕತೆ ನಡೆಯುವುದು.ಮಿಕ್ಕಂತೆ ಅವರು ಮಹಾನ್ ಸೈಲೆಂಟ್.ಪೋಟೋ,ವೀಡಿಯೋ ಎಂದರೆ ಮಾರುದೂರ ಓಡುವ ಅವರು ಮುಜುಗರದ ವ್ಯಕ್ತಿತ್ವ ಹೊಂದಿರುತ್ತಾರೆ.ಕೀಳಿರಿಮೆ ಎಂಬುದು ಅವರ ಕಾನ್ಫಿಡೆನ್ಸ್ ಲೆವೆಲ್ ಅನ್ನು ತಗ್ಗಿಸಿಬಿಟ್ಟಿರುತ್ತದೆ.
ಕೀಳಿರಿಮೆ ಎಂಬುದು ಜೋರಾಗಿ ಹೇಳಲಾಗದ,ಮುಖಕ್ಕೆ ಹೊಡೆದ ಹಾಗೆ ಪ್ರತಿರೋಧಿಸಲಾಗದ,ಗುಂಪಿನಲ್ಲಿ ,ಸಭೆಗಳಲ್ಲಿ ಅಷ್ಟೇ ಅಲ್ಲದೇ ಒಬ್ಬರೇ ಇದ್ದಾಗಲೂ ಮನವನ್ನು ಹಿಂಡಿ ಹಿಪ್ಪೆ ಮಾಡುವ ಒಂದು ರೀತಿಯ ಅಸ್ವಸ್ಥತೆ. ಇದು ತೀವ್ರತರವಾಗಿ ಬೆಳೆದರೆ ಮನುಷ್ಯ ಎಲ್ಲೂ ಹೊರಗೆ ಓಡಾಡಲಾರ ಸುಮ್ಮನೆ ಒಂದೆಡೆಯೇ ಇದ್ದು ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯವನ್ನು ಹಾಳುಮಾಡಿಕೊಂಡು ಬಿಡುತ್ತಾನೆ.ಮನೆಮಂದಿಗೆ ತಲೆನೋವಾಗಿ, ಮನೋವೈಖಲ್ಯವನ್ನು ಅಂಗ ವೈಖಲ್ಯದ ರೇಂಜಿಗೆ ಬೆಳಸಿ ಖುಷಿಗಳನ್ನು ಹಾಳುಮಾಡುವ ತಾಕತ್ತು ಈ ಕೀಳಿರಿಮೆಗೆ ಇದೆ.
ನೀನು ಸೀರೆಯನ್ನೇ ಉಡು,ಜೀನ್ಸ್ ಲಿ ತೊಡೆ ದಪ್ಪ ಕಾಣ್ತದೆ ,ಜಡೆ ಹಾಕು ಪ್ರೀ ಹೇರ್ಸ್ ಬಿಡಬೇಡ,ಇಷ್ಟೊಂದು ಬಳೆ ಏಕೆ?ನಿಂಗೆ ಡ್ರಸ್ಸಿಂಗ್ ಸೆನ್ಸ್ ಕಡಿಮೆ,ಎಲ್ಲಿಗೆ ಹೇಗೆ ಬರಬೇಕು ಎಂಬುದರ ಅರಿವು ನಿನಗಿಲ್ಲ,ಟೇಬಲ್ ಮ್ಯಾನರ್ಸ್ ಕಡಿಮೆ ಈ ತರದ ಬಿಟ್ಟಿ ಸಲಹೆಗಳುನ್ನು ನಮ್ಮ ಸುತ್ತಮುತ್ತಲಿನವರು ಕೊಡುತ್ತಲೇ ಇರುತ್ತಾರೆ.ಅವಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.ನಾವು ಏನು?ಯಾರು!ಹೇಗಿದ್ದೇವೆ?ಎಂಬುದರ ಸೂಕ್ಷ÷್ಮ ಕಲ್ಪನೆ ನಮಗಿದ್ದರೆ ಸಾಕು ನೋಡುವವರ,ಆಡುವವರ ಮಾತುಗಳಿಗೆ,ನೋಟಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯ ಖಂಡಿತ ಇಲ್ಲ.
ಹೇಳುವವರು ಕೊಡುತ್ತಿರುವುದು ಸಲಹೆಯಾ?ಟೀಕೆ ಯಾ ?ಅವರು ನಮಗೆ ಏನಾಗಬೇಕು?ನಮಗೆಷ್ಟು ಅಗತ್ಯವಾಗಿದ್ದಾರೆ?ನೀಡುತ್ತಿರುವ ಸಲಹೆ ಸಖ್ಯವಾದುದೇ ಎಂಬುದನ್ನು ಮೊದಲು ಗಮನಿಸಬೇಕು.ಅದು ನಿಜವೇ ಆಗಿದ್ದರೆ ಅವರು ನಮ್ಮನ್ನು ಮತ್ತು ನಮ್ಮ ವ್ಯಕ್ತಿತ್ವವನ್ನು ಮತ್ತೂ ಉತ್ತಮವಾಗಿ ನೋಡಲು ಬಯಸುವವರು ಎಂದು ನಮಗೆ ಅನಿಸಿದರೆ ನಮ್ಮನ್ನು ನಾವು ಕೊಂಚ ಬದಲಾಯಿಸಿಕೊಳ್ಳುವುದರಲ್ಲಿ ತಪ್ಪಿಲ್ಲ.ಅಂತವರು ನಾವು ಕಷ್ಟದಲ್ಲಿ ಇದ್ದಾಗ ಮೇಲೆತ್ತುತ್ತಾರೆಯೇ ಹೊರತು ಮತ್ತೂ ಕಡು ಕಷ್ಟಕ್ಕೆ ನೂಕಲಾರರು .ಅವರ ಸಲಹೆಗಳು ಯಾವಾಗಲೂ ಆರೋಗ್ಯಪೂರ್ಣವಾಗಿಯೂ ಹಿತವಾಗಿಯೂ ಇರುತ್ತವೆ.
ಬೇಕೆಂದೇ ಹರ್ಟ್ ಮಾಡುವವರಿಗೆ ಡೋಂಟ್ ಕೇರ್ ಅವರಿಂದ ನಾವು ಮತ್ತೂ ಕೀಳಿರಿಮೆಗೆ ಒಳಗಾಗುತ್ತಿದ್ದೇವೆ ಎಂದಾದರೆ ಅಂತವರಿAದ ದೂರ ಇರುವುದೇ ಉತ್ತಮ.
ಮನುಷ್ಯ ಜಗತ್ತಿನ ಅತ್ಯದ್ಭುತ ಸೃಷ್ಟಿ. ನಿಸರ್ಗದಲ್ಲೇ ಕಂದಕಗಳಿವೆ,ಮರುಭೂಮಿಗಳಿವೆ,ಬರದ ನಾಡುಗಳಿವೆ ಇನ್ನು ಬರೀ ಐದರಿಂದ ಆರು ಅಡಿ ಇರುವ ಮನುಷ್ಯ ಯಾವುದೇ ಏರುಪೇರಿಲ್ಲದೆ ಇರಬೇಕೆಂಬುದು ಯಾವ ನ್ಯಾಯ.ದೇವರು ನೀಡಿರುವ ಈ ಜೀವನವನ್ನು ಖುಷಿಯಿಂದ ಕಳೆಯೋಣ.ಬೇರೆಯವರ ಎಡರು,ತೊಡರು,ನ್ಯೂನ್ಯತೆ ಹುಡುಕುವುದು ನಮ್ಮ ಕೆಲಸವಲ್ಲ.ಸಾಧ್ಯವಾದರೆ ಅಂತವರಿಗೆ ಧೈರ್ಯ ಹೇಳೋಣ,ಮನೋಸಾಮರ್ಥ ತುಂಬೋಣ.ಹೇ ಬಿಡು ಮಗ ಅದೇನ್ ಮಹಾ ಎಂದು ಬಿಡೋಣ.ವಿಶೇಷ ಚೇತನರು ಮಾಡುತ್ತಿರುವ ಸಾಧನೆಗಳ ಮುಂದೆ ಎಲ್ಲಾ ಚನ್ನಾಗಿದ್ದು ಸುಖಾಸುಮ್ಮನೆ ಕೀಳಿರಿಮೆ ಬೆಳೆಸಿಕೊಂಡವರಿಗೆ ಬೈದು ಬುದ್ದಿ ಹೇಳೋಣ.
ಆತ್ಮವಿಶ್ವಾಸ ಎಂಬುದು ನಮ್ಮಲ್ಲಿ ಧೃಡವಾಗಿದ್ದರೆ ಕೀಳಿರಿಮೆ ಎಂದೂ ನಮ್ಮ ಹತ್ತಿರಕ್ಕೆ ಬರಲಾರದು.ಹೆಚ್ಚು ಓದಿದವರು,ತಿಳಿದುಕೊಂಡವರು,ಲೋಕಾರೂಢಿಯಾಗಿ ಆರ್ಥಿಕವಾಗಿ ಸಭಲರಾಗಿರುವವರು,ಚೂರು ಬುದ್ದಿವಂತರು ಈ ಕೀಳಿರಿಮೆ ಎಂಬ ಸಂಕಟಕ್ಕೆ ಒಳಗಾಗುವುದು ಕಡಿಮೆ ಆದರೆ ಬೇಗ ಬೇರೆಯವರನ್ನು ಕೀಳಿರಿಮೆಗೆ ತಳ್ಳುವ ತಾಕತ್ತು ಇವರ ಮಾತುಗಳಿಗೆ ಇರುತ್ತದೆ .ಹಾಗಾಗಿ ಇಂತವರ ಹತ್ತಿರ ಎಚ್ಚರಿಕೆಯಿಂದ ಇರುವುದು ಉತ್ತಮ
ಇಲ್ಲಿ ಎಲ್ಲರೂ ಬಾಳಿ ಬದುಕಲು ಸರ್ವ ಸ್ವತಂತ್ರರು.ಯಾರಿಗೋ ನಾವು ಇಷ್ಟವಾಗಲಿ ಎಂದು ಬದುಕುವುದು ಜೀವನವಲ್ಲ.ನಮ್ಮ ಜೀವನವನ್ನು ನಾವು ಖುಷಿಯಿಂದ ಕಳೆಯಬೇಕು.ಕೆಲವೊಂದು ಜೀವಿಗಳಿಗೆ ಭೂಮಿಯ ಮೇಲೆ ಉದಯಿಸುವ ಯೋಗವೇ ಇರುವುದಿಲ್ಲ.ಅಂತದ್ದರಲ್ಲಿ ನಾವಿಲ್ಲಿ ಜೀವ ತಳೆದಿದ್ದೇವೆಂದರೆ ಅದನ್ನು ಸಂಭ್ರಮಿಸಲೇ ಬೇಕು.ಮೊದಲು ನಮ್ಮನ್ನು ನಾವು ಪ್ರೀತಿಸಬೇಕು,ಇಷ್ಟ ಪಡಬೇಕು.ನಮ್ಮ ದೇಹದ ಪ್ರತಿಯೊಂದು ಕಣಕಣವನ್ನೂ ನಾವು ಹೆಮ್ಮೆಯಿಂದ ಪ್ರೀತಿಯಿಂದ ಅಪ್ಪಿಕೊಳ್ಳಬೇಕು.ಹಾಗಾಗಿ ಕೀಳಿರಿಮೆಯನ್ನು ಹೊಡೆದೋಡಿಸಬೇಕು.ಕೀಳಿರಿಮೆ ಬೆಳಸಿಕೊಂಡಿರುವವರನ್ನು ಅದರಿಂದ ಆಚೆ ತರಬೇಕು.ಏನಂತೀರ?