ಬೆಂಗಳೂರು: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಶುಲ್ಕ ಸಂಗ್ರಹ ನಿಯಮಗಳಲ್ಲಿ ಬದಲಾವಣೆಯನ್ನು ತಂದಿದೆ. 2008ರ ನಿಯಮವನ್ನು ತಿದ್ದುಪಡಿ ಮಾಡಲಾಗಿದ್ದು, ಹೊಸ ನಿಯಮಗಳ ಕುರಿತು ಅಧಿಸೂಚನೆ ಹೊರಡಿಸಿದೆ.
ಈ ಹೊಸ ನಿಯಮ ಕರ್ನಾಟಕದಲ್ಲಿ ಬೆಂಗಳೂರು-ಮೈಸೂರು ರಸ್ತೆಗೆ ಮಾತ್ರ ಸದ್ಯಕ್ಕೆ ಅಳವಡಿಕೆಯಾಗಲಿದೆ. ಹಂತ-ಹಂತವಾಗಿ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಾರಿಗೆ ಬರಲಿದೆ.
ಸದ್ಯ, ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ನಿಯಮಗಳಿಗೆ ಅನುಗುಣವಾಗಿ ಹೆದ್ದಾರಿಯ ಬಳಕೆದಾರರ ಶುಲ್ಕವನ್ನು ಟೋಲ್ ಪ್ಲಾಜಾಗಳಲ್ಲಿ ವಿಧಿಸಲಾಗುತ್ತಿದೆ. ಆದರೆ ಹೊಸ ನಿಯಮಗಳ ಪ್ರಕಾರ ಗ್ಲೋಬಲ್ ನೇವಿಗೇಶನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್ಎಸ್ಎಸ್) ವ್ಯವಸ್ಥೆ ಅನ್ವಯ ಟೋಲ್ ಸಂಗ್ರಹ ಮಾಡಲಾಗುತ್ತದೆ. ರಾಜ್ಯದಲ್ಲಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಈ ಮಾದರಿ ಜಾರಿಗೆ ಬರಲಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಧಿಸೂಚನೆಯ ಅನ್ವಯ ಜಿಎನ್ಎಸ್ಎಸ್ ವ್ಯವಸ್ಥೆ ಅಳವಡಿಕೆ ಮಾಡಿದ ವಾಹನಗಳಿಗೆ 20 ಕಿ. ಮೀ. ಪ್ರಯಾಣದ ಬಳಿಕ ಮಾತ್ರ ಟೋಲ್ ಪಾವತಿಸಬೇಕು. ಮೊದಲ 20 ಕಿ. ಮೀ. ಪ್ರಯಾಣಕ್ಕೆ ಯಾವುದೇ ಶುಲ್ಕವನ್ನು ಪಾವತಿಸಬೇಕಿಲ್ಲ. ಇದರಿಂದಾಗಿ ವಾಹನ ಸವಾರರಿಗೆ ಬಹುದೊಡ್ಡ ರಿಲೀಫ್ ಸಿಕ್ಕಿದಂತಾಗಿದೆ.
ಜಿಎನ್ಎಸ್ಎಸ್ ವ್ಯವಸ್ಥೆ ಅಳವಡಿಕೆ ಮಾಡಿಕೊಂಡಿರುವ ಖಾಸಗಿ ವಾಹನಗಳಿಗೆ 20 ಕಿ. ಮೀ. ತನಕದ ಪ್ರಯಾಣಕ್ಕೆ ಟೋಲ್ ಶುಲ್ಕ ಸಂಗ್ರಹ ಮಾಡದಿರಲು ಸಚಿವಾಲಯ ಹೊಸ ನಿಯಮದಲ್ಲಿ ಬದಲಾವಣೆ ತಂದಿದೆ. ಇದಕ್ಕಾಗಿ 2008ರ ರಾಷ್ಟ್ರೀಯ ಹೆದ್ದಾರಿ ಶುಲ್ಕ ಕಾಯ್ದೆಗೆ ತಿದ್ದುಪಡಿಯನ್ನು ತರಲಾಗಿದೆ. ವಾಹನ 20 ಕಿ. ಮೀ. ದಾಟಿದ ಬಳಿಕ ಪ್ರಯಾಣಿಸಿದ ದೂರಕ್ಕೆ ಮಾತ್ರ ಅನ್ವಯವಾಗುವಂತೆ ಟೋಲ್ ಶುಲ್ಕವನ್ನು ಕಟ್ ಮಾಡಲಾಗುತ್ತದೆ.
ಪ್ರಾಯೋಗಿಕವಾಗಿ ಜಾರಿ: ಗ್ಲೋಬಲ್ ನೇವಿಗೇಶನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್ಎಸ್ಎಸ್) ವಾಹನ ಸವಾರರ ಸ್ನೇಹಿಯಾಗಿದೆ, ಇದನ್ನು ಪ್ರಾಯೋಗಿಕವಾಗಿ ದೇಶದಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವಾಲಯ ಹೇಳಿತ್ತು. ದೇಶದ ವಿವಿಧ ಆಯ್ದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
ಕರ್ನಾಟಕದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ (ಎನ್ಹೆಚ್-275), ಪಾಣಿಪತ್-ಹಿಸ್ಸಾರ್ (ಎನ್ಹೆಚ್-709) ರಸ್ತೆಯಲ್ಲಿ ಫಾಸ್ಟ್ ಟ್ಯಾಗ್ ಬದಲು ಜಿಎನ್ಎಸ್ಎಸ್ ಮೂಲಕ ಪ್ರಾಯೋಗಿಕವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿತ್ತು. ಈ ಕುರಿತ ಅಧ್ಯಯನ ವರದಿಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪರಿಶೀಲಿಸಿದ್ದರು. ಈ ಹೊಸ ನಿಯಮದ ಅನ್ವಯ ರಾಷ್ಟ್ರೀಯ ಪರವಾನಗಿ ವಾಹನವಲ್ಲದ ಮೆಕ್ಯಾನಿಕಲ್ ವಾಹನದ ಚಾಲಕ, ಮಾಲೀಕ ಅಥವಾ ವ್ಯಕ್ತಿ ಅದೇ ರಾಷ್ಟ್ರೀಯ ಹೆದ್ದಾರಿ, ಸೇತುವೆ, ಬೈಪಾಸ್ ಅಥವಾ ಸುರಂಗ