ಕೆಪಿಸಿಸಿ ಕಚೇರಿಯಲ್ಲಿ ಸಚಿವ ಸುಧಾಕರ್ ವಿರುದ್ಧ ಟೇಬಲ್ ಕುಟ್ಟಿ ಕಾರ್ಯಕರ್ತರ ಗಲಾಟೆ

ಕೆಪಿಸಿಸಿ ಕಚೇರಿಯಲ್ಲಿ ಸಚಿವ ಸುಧಾಕರ್ ವಿರುದ್ಧ ಟೇಬಲ್ ಕುಟ್ಟಿ ಕಾರ್ಯಕರ್ತರ ಗಲಾಟೆ

ಕೆಪಿಸಿಸಿ ಕಚೇರಿಯಲ್ಲಿ ಸಚಿವ ಸುಧಾಕರ್ ವಿರುದ್ಧ ಟೇಬಲ್ ಕುಟ್ಟಿ ಕಾರ್ಯಕರ್ತರ ಗಲಾಟೆ

ಬೆಂಗಳೂರು : ಯುನಿವರ್ಸಿಟಿಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕದಲ್ಲಿ ಅನ್ಯಾಯ ಆಗಿದೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರ ಆಕ್ರೋಶ ಹೊರಹಾಕಿದ್ದಾರೆ. ಸಿಂಡಿಕೇಟ್ ಸದಸ್ಯರ ನೇಮಕದಲ್ಲಿ ಸಚಿವರ ವಿರುದ್ದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಂಡಿಕೆಟ್ ಸದಸ್ಯರ ನೇಮಕಾತಿ ವೇಳೆ RSS ಬಿಜೆಪಿ ಸದಸ್ಯರಿಗೆ ಮಣೆ ಹಾಕಲಾಗಿದೆ ಎಂದು ಆರೋಪ ಮಾಡಿದ್ದಾರೆ.

ಕಾರ್ಯಕರ್ತರ ಅಹವಾಲು ಆಲಿಸಲು ಕೆಪಿಸಿಸಿಗೆ ಕಚೇರಿಗೆ ಸಚಿವ ಡಾ. ಎಂಸಿ ಸುಧಾಕರ್ ಹಾಗೂ ಮಧು ಬಂಗಾರಪ್ಪ ಆಗಮಿಸಿದ್ದರು. ಈ ವೇಳೆ ಸಚಿವ ಸುಧಾಕರ್ ಎದುರು ಗದ್ದಲ ಎಬ್ಬಿಸಿದ ಕಾರ್ಯಕರ್ತರು ಸಮುವುಲ್ಲಾ ಎಂಬುವವರು ಬಹಿರಂಗ ಆಕ್ರೋಶ ಹೊರಹಾಕಿದರು. ಈ ವೇಳೆ ಸಮಾಜಾಯಿಷಿ ಕೊಡಲು ಮುಂದಾದ ಸಚಿವ ಸುಧಾಕರ್ ಮಾತಿಗೆ ಮತ್ತಷ್ಟು ಕಾಂಗ್ರೆಸ್ ಕಾರ್ಯಕರ್ತರು ಕೆರಳಿದರು.

ನಾನು ಯಾವ ನೇಮಕಾತಿಯನ್ನು ನೇರವಾಗಿ ಮಾಡಿಲ್ಲ. ಮುಖ್ಯಮಂತ್ರಿಗಳ ಕಚೇರಿಯ ವಿವೇಚನೆಯ ಮೇಲೆಯೇ ತೀರ್ಮಾನ ಮಾಡಲಾಗಿದೆ. ನಿಮಗೆ ಸಂಶಯ ಇದ್ರೆ ನೇರವಾಗಿ ಮುಖ್ಯಮಂತ್ರಿಗಳಲ್ಲಿ ಮಾತನಾಡಿ ಏನಾಗಿದೆ ಎಂಬುದನ್ನು ಮುಖ್ಯಮಂತ್ರಿಗಳೇ ಉತ್ತರ ಕೊಡುತ್ತಾರೆ ಎಂದು ಸಚಿವ ಎಂಸಿ ಸುಧಾಕರ್ ಸಮಜಾಯಿಷಿ ನೀಡಿದ್ದಾರೆ.

ಸಚಿವರ ಮಾತಿಗೆ ಸಮಾಧಾನಗೊಳ್ಳದೇ ಟೇಬಲ್ ಕುಟ್ಟಿ ಆಕ್ರೋಶ ಹೊರ ಹಾಕಿದ ಸಮೀವುಲ್ಲಾ ಖಾನ್ ಮೂರು ವರ್ಷದಿಂದ ಪಾರ್ಟಿಯಲ್ಲಿದ್ದೇನೆ. ಸಿಂಡಿಕೇಟ್ ಲಿಸ್ಟ್ ಮಾಡಿದ್ದಾರೆ. ಎಲ್ಲ ಬಿಜೆಪಿ ಆರ್ ಎಸ್ ಎಸ್ ಅವರಿಗೆ ಮಾಡಿದ್ದಾರೆ. ಹೊಸ ಸಿಂಡಿಕೇಟ್ ಸದಸ್ಯರ ನೇಮಕ ಮಾಡಿ ಎಂದು ಟೇಬಲ್ ಕುಟ್ಟಿ ಆಕ್ರೋಶ ಹೊರಹಾಕಿದರು.

ಸಚಿವ ಎಂಸಿ ಸುಧಾಕರ್ ಸ್ಪಷ್ಟನೆ

ಸಿಂಡಿಕೇಟ್ ಸದಸ್ಯರ ನೇಮಕದ ಸಂದರ್ಭದಲ್ಲಿ 6 ಮಂದಿಗೆ ಮಾತ್ರ ಅವಕಾಶ ಇರುತ್ತದೆ. ಕೆಲವು ವಿವಿಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಎಲ್ಲಾದ್ರೂ ಒಂದು ಕಡೆ ನಮಗೆ ಅವಕಾಶ ನೀಡಬೇಕು ಎಂದು ಆಗ್ರಹ ಇದೆ. ರಾಜ್ಯಪಾಲರು ಹಿಂದೆ ಮಾಡಿದ ನೇಮಕವನ್ನು ನಾವು ಪ್ರಶ್ನೆ ಮಾಡಲು ಹೋಗಲ್ಲ. ನಮ್ಮ ಇಲಾಖೆ ಮೇಲೆ ಬಹಳಷ್ಟು ಒತ್ತಡವಿದೆ. ಸಿಎಂ ಮೇಲೆಯೂ ಕೂಡ ಸಾಕಷ್ಟು ಒತ್ತಡ ಇತ್ತು ಫೈಲ್ ಪೂರ್ತಿ ಸಿಎಂ ಕಚೇರಿಗೆ ರವಾನಿಸಿದ್ದೆವು. ಸಿಎಂ ಅಳೆದು ತೂಗಿ ಸಾಧ್ಯ ಆದಷ್ಟು ಸಿಂಡಿಕೇಟ್ ಸದಸ್ಯರ ನೇಮಕ ಮಾಡಿದ್ದಾರೆ. ಹೈಕಮಾಂಡ್ ಗೆ ದೂರು ಹೋಗಿರುವ ಬಗ್ಗೆ ನನಗೆ ಮಾಹಿತಿಯೂ ಇಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *