ಭಾರತದ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟೇರಿಯಟ್ ನಲ್ಲಿ (Cabinet Secretariat) 160 ಮಂದಿಗೆ ಡೆಪ್ಯುಟಿ ಫೀಲ್ಡ್ ಆಫೀಸರ್ (Deputy Field Officer -Technical) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ಮತ್ತು ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 2024ರಲ್ಲಿ ಬಿಡುಗಡೆಗೊಂಡ ಅಧಿಕೃತ ಅಧಿಸೂಚನೆ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇದು ಗ್ರೂಪ್ ಬಿ, ನಾನ್ ಗೆಜೆಟೆಡ್ ವರ್ಗದ್ದಾಗಿರುತ್ತದೆ (Group ‘B’, non-gazetted category).
ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಲೇಖನದಲ್ಲಿ ಸೂಚಿಸಿರುವ ವಿದ್ಯಾರ್ಹತೆ (Qualification), ವಯೋಮಿತಿ (Age Limit), ಶೈಕ್ಷಣಿಕ ಅರ್ಹತೆ ಮತ್ತಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆಯನ್ನು ಓದಿ, ಹಾಗೆ ಇನ್ನಷ್ಟು ಮಾಹಿತಿಯನ್ನು ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.
ಇನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 21 -2024 ರಿಂದ ಪ್ರಾರಂಭಗೊಳ್ಳಲಿದ್ದು ಅಕ್ಟೋಬರ್-21 2024 ರಂದು ಕೊನೆಗೊಳ್ಳುತ್ತದೆ. ಅರ್ಜಿ ಸಲ್ಲಿಸಲು ಫಾರ್ಮ್ ಗಾಗಿ ಅಧಿಕೃತ https://cabsec.gov.in/more/vacancies/ website ಭೇಟಿ ನೀಡಿ.
ಈ ಹುದ್ದೆಗೆ ವಿದ್ಯಾರ್ಹತೆ ಹೀಗಿದೆ ; ಕ್ಯಾಬಿನೆಟ್ ಸೆಕ್ರೆಟೇರಿಯಟ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, BE/B.Tech, ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ಇನ್ನು ವಯೋಮಿತಿಯ ವಿಚಾರಕ್ಕೆ ಬಂದ್ರೆ ; ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ವಯಸ್ಸು 30 ವರ್ಷ ದಾಟಿರಬಾರದು.
ಈ ವಂದು ಅರ್ಜಿ ಫಾರ್ಮ್ ಸಲ್ಲಿಸುವ ವಿಳಾಸ: ಪೋಸ್ಟ್ ಬ್ಯಾಗ್ ಸಂಖ್ಯೆ 001, ಲೋಧಿ ರಸ್ತೆ, ಹೆಡ್ ಪೋಸ್ಟ್ ಆಫೀಸ್, ನವದೆಹಲಿ -110003
ಹೆಚ್ಚಿನ ವಿವರಗಳಿಗಾಗಿ ಅಧಿಕೃತ website ಗೆ ಭೇಟಿ ನೀಡಿ.