ಹಳಿ ತಪ್ಪಿದ ಗೂಡ್ಸ್ ರೈಲು : 15 ಟ್ರೈನ್ ಗಳ ಸಂಚಾರದ ಮಾರ್ಗ ಬದಲು

ಹಳಿ ತಪ್ಪಿದ ಗೂಡ್ಸ್ ರೈಲು : 15 ಟ್ರೈನ್ ಗಳ ಸಂಚಾರದ ಮಾರ್ಗ ಬದಲು

ರಾಂಚಿ (ಜಾಖಂಡ್): ಕಳೆದೆರಡು ದಿನಗಳ ಹಿಂದೆಯಷ್ಟೇ ಗೂಡ್ಸ್ ರೈಲು ಹಳೆ ತಪ್ಪಿದ ಬೆನ್ನಲ್ಲೇ ಇದೀಗ ಅದೇ ರೀತಿಯಾದ ಘಟನೆ ಜಾರ್ಖಂಡ್ನಲ್ಲಿ ವರದಿಯಾಗಿದೆ. ರಾಜ್ಯದ ಬೊಕರೊದಲ್ಲಿ ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಇದರಿಂದ ಇತರೆ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, 15 ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೊಕರೊ ಜಿಲ್ಲೆಯಲ್ಲಿನ ತುಪಕದಿಹ್ ಸ್ಟೇಷನ್ ಬಳಿಕ ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಇದರಿಂದಾಗಿ 14 ಎಕ್ಸ್ಪ್ರೆಸ್ ರೈಲು ಸೇರಿದಂತೆ ಒಟ್ಟು 15 ರೈಲು ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ನೈರುತ್ಯ ರೈಲ್ವೆಯ ಅದ್ರಾ ವಿಭಾಗದ ವಿಭಾಗೀಯ ರೈಲ್ವೆ ಮ್ಯಾನೇಜರ್ ಸುಮಿತ್ ನರುಲಾ ತಿಳಿಸಿದ್ದಾರೆ.

ಹಳಿ ತಪ್ಪಿದ ರೈಲಿನಲ್ಲಿ ಬೊಕರೊ ಉಕ್ಕಿನ ಸ್ಥಾವರದಿಂದ ಉಕ್ಕಿನ ವಸ್ತುಗಳ ಸಾಗಣೆ ಮಾಡಲಾಗುತ್ತಿತ್ತು. ಅಪಘಾತದಿಂದ ಹಾನಿಗೊಂಡ ರೈಲು ಹಳಿಯನ್ನು ದುರಸ್ತಿಕರಣ ಕಾರ್ಯ ನಡೆಸಲಾಗುತ್ತಿದ್ದು, ಮತ್ತೊಂದು ಮಾರ್ಗದಲ್ಲಿ ಸರಾಗ ಸಂಚಾರಕ್ಕೆ ಅನುವು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಲು ಹಳಿ ತಪ್ಪಿದ ಹಿನ್ನೆಲೆ ವಾರಣಾಸಿ – ರಾಂಚಿ ವಂದೇ ಭಾರತ್ ಎಕ್ಸ್ಪ್ರೆಸ್, ರಾಂಚಿ – ಭಗಲ್ಪುರ್ ವನಂಚಲ್ ಎಕ್ಸ್ಪ್ರೆಸ್, ಹತಿಯಾ- ಪಾಟ್ನಾ-ರಾಂಚಿ- ಕಾಮಕ್ಯಾ, ರಾಂಚಿ- ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ ಹಾಗೂ ರಾಂಚಿ- ಧನ್ಬಾದ್ ಇಂಟರ್ಸಿಟಿ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

Leave a Reply

Your email address will not be published. Required fields are marked *