ಡೋಪಿಂಗ್ ಪರೀಕ್ಷೆಗೆ ಗೈರು: ಕುಸ್ತಿಪಟು ವಿನೇಶ್ ಪೋಗಟ್ಗೆ ನೋಟಿಸ್

ಡೋಪಿಂಗ್ ಪರೀಕ್ಷೆಗೆ ಗೈರು: ಕುಸ್ತಿಪಟು ವಿನೇಶ್ ಪೋಗಟ್ಗೆ ನೋಟಿಸ್

ನವದೆಹಲಿ: ರಾಜಕೀಯ ದಂಗಲ್ ನಡೆಸುತ್ತಿರುವ ಕುಸ್ತಿಪಟು ವಿನೇಶ್ ಪೋಗಟ್, ತಮ್ಮ ಬಗ್ಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಪ್ರಾಧಿಕಾರ (ನಾಡಾ) ನೋಟಿಸ್ ಜಾರಿ ಮಾಡಿದೆ. 14 ದಿನಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿದೆ.

ಹರಿಯಾಣದ ಸೋನಿಪತ್ನಲ್ಲಿರುವ ವಿನೇಶ್ ಅವರ ನಿವಾಸಕ್ಕೆ ಡೋಪ್ ನಿಯಂತ್ರಣ ಅಧಿಕಾರಿಯನ್ನು ಸೆಪ್ಟೆಂಬರ್ 9 ರಂದು ಕಳುಹಿಸಲಾಗಿತ್ತು. ಆ ವೇಳೆ ಕುಸ್ತಿಪಟು ಮನೆಯಲ್ಲಿ ಇರಲಿಲ್ಲ. ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಪೋಗಟ್ ಅವರಿಗೆ ನಾಡಾ ನೋಟಿಸ್ ನೀಡಿದೆ.

ಎಡಿಆರ್ ಪ್ರಕಾರ, ತಾವು ಇರುವ ನಿವಾಸದ ಬಗ್ಗೆ ಮಾಹಿತಿ ನೀಡಲು ಕುಸ್ತಿಪಟು ವಿಫಲವಾಗಿದ್ದಾರೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ತಮ್ಮ ಅಭಿಪ್ರಾಯವನ್ನು ಕೋರಲಾಗಿದೆ. ಹೀಗಾಗಿ ನೋಟಿಸ್ ಜಾರಿಯಾದ ದಿನದಿಂದ 14 ದಿನಗಳ ಒಳಗೆ ಮಾಹಿತಿ ಹಂಚಿಕೊಳ್ಳಿ ಎಂದು ನೋಟಿಸ್ನಲ್ಲಿ ಸೂಚಿಸಲಾಗಿದೆ.

ಕುಸ್ತಿಪಟು ನೀಡಿದ ಮಾಹಿತಿಯಂತೆ ಸೆಪ್ಟೆಂಬರ್ 9 ರಂದು ನಾಡಾದ ಅಧಿಕಾರಿ ನಿವಾಸಕ್ಕೆ ಆಗಮಿಸಿದ್ದರು. ಆದರೆ, ಅಂದು ಕುಸ್ತಿಪಟು ಲಭ್ಯವಿರಲಿಲ್ಲ. ಆ ದಿನ ಮತ್ತು ನಿಗದಿ ಮಾಡಿದ ಸ್ಥಳದಲ್ಲಿ ನಿಮ್ಮನ್ನು ಪರೀಕ್ಷಿಸಲು ಡೋಪ್ ಕಂಟ್ರೋಲ್ ಅಧಿಕಾರಿ (DCO) ಮುಂದಾಗಿದ್ದರು. ನೀವು ಸ್ಥಳದಲ್ಲಿ ಇಲ್ಲದ ಕಾರಣ ಡಿಸಿಒ ನಿಮ್ಮನ್ನು ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ ಎಂದು ನಾಡಾ ಹೇಳಿದೆ.

Leave a Reply

Your email address will not be published. Required fields are marked *