ಕೇರಳದಲ್ಲಿ ಎರಡನೇ ಮಂಕಿಪಾಕ್ಸ್ ಪ್ರಕರಣ ಪತ್ತೆ

ಕೇರಳದಲ್ಲಿ ಎರಡನೇ ಮಂಕಿಪಾಕ್ಸ್ ಪ್ರಕರಣ ಪತ್ತೆ

ತಿರುವನಂತಪುರಂ: ಯುನೈಟೆಡ್ ಅರಬ್ ಎಮಿರೇಟ್ಸ್(UAE)ನಿಂದ ಬಂದಿದ್ದ ಕೇರಳದ ಎರ್ನಾಕುಲಂನ 26 ವರ್ಷದ ಯುವಕನಿಗೆ ಮಂಕಿಪಾಕ್ಸ್ ಶುಕ್ರವಾರ ದೃಢಪಟ್ಟಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರ ರಕ್ತದ ಮಾದರಿಗಳನ್ನು ಅಲಪ್ಪುಳರದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಲಾಗಿದೆ. ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಜೀನೋಮಿಕ್ ಸೀಕ್ವೆನ್ಸಿಂಗ್‌ಗಾಗಿ ಮಾದರಿಗಳನ್ನು ಕಳುಹಿಸಲಾಗಿದೆ.

ಇದು ಈ ವರ್ಷ ರಾಜ್ಯದಲ್ಲಿ ಎರಡನೇ ಮತ್ತು ದೇಶದಲ್ಲಿ ಮೂರನೇ ಮಂಕಿಪಾಕ್ಸ್ ಪ್ರಕರಣವಾಗಿದೆ.

ಈ ಹಿಂದೆ ಮಲಪ್ಪುರಂನ ಎಡವನ್ನಾ ಎಂಬ ಪ್ರದೇಶದ 38 ವರ್ಷದ ವ್ಯಕ್ತಿಗೆ ಸೆಪ್ಟೆಂಬರ್ 18 ರಂದು ಮಂಕಿಪಾಕ್ಸ್ ಕಂಡುಬಂದಿತ್ತು. ನಂತರ ಅವರ ಸೋಂಕಿಗೆ ವೈರಸ್‌ನ ಕ್ಲೇಡ್ 1 ಬಿ ಸ್ಟ್ರೈನ್ ಕಾರಣ ಎಂದು ತಿಳಿದುಬಂತು.

Leave a Reply

Your email address will not be published. Required fields are marked *