ಮರುಭೂಮಿಯಲ್ಲೊಂದು ಈಜುಗಾರರ ಗುಹೆ ; ಇದು ತುಂಬಾ ಫೇಮಸ್, ಯಾಕೆ ಗೊತ್ತಾ..?

ಮರುಭೂಮಿಯಲ್ಲೊಂದು ಈಜುಗಾರರ ಗುಹೆ ; ಇದು ತುಂಬಾ ಫೇಮಸ್, ಯಾಕೆ ಗೊತ್ತಾ..?

ವಿಶೇಷ ಮಾಹಿತಿ : ಈಜಿಪ್ಟ್ ನ ಪಶ್ಚಿಮ ಮರುಭೂಮಿ ಪ್ರದೇಶದಲ್ಲಿ ಈಜುಗಾರರ ಗುಹೆಯೊಂದಿದೆ. ಅಂದರೆ ಗುಹೆಗಳಲ್ಲಿ ಮಾಡಿದ ಕಲ್ಲಿನ ವರ್ಣಚಿತ್ರಗಳಿಂದಾಗಿ ಪ್ರಸಿದ್ಧವಾಗಿದೆ. ಈ ವರ್ಣಚಿತ್ರವನ್ನು ಆ ಕಾಲದ ಈಜುಗಾರರು ರಚಿಸಿದ್ದಾರೆ. ಇಲ್ಲಿ ಹಲವು ಪೇಂಟಿಂಗ್ಗಳಿವೆ ಆದರೆ ಒಂದು ವಿಶೇಷವಾದ ಪೇಂಟಿಂಗ್ನಲ್ಲಿ ಇಬ್ಬರು ಈಜುತ್ತಿರುವುದನ್ನು ಕಾಣಬಹುದು.

ಈ ವರ್ಣಚಿತ್ರವನ್ನು 6 ರಿಂದ 9 ಸಾವಿರ ವರ್ಷಗಳ ಹಿಂದೆ ಮಾಡಲಾಗಿದೆ ಎಂದು ನಂಬಲಾಗಿದೆ. ಆ ಸಮಯದಲ್ಲಿ ಸಹರಾ ಮರುಭೂಮಿ ಸಮುದ್ರವಾಗಿತ್ತು. ಅದು ಒಣಗಿರಲಿಲ್ಲ. ಅಲ್ಲಿ ಬರೀ ಮರಳು ಮಾತ್ರ ಇರಲಿಲ್ಲ. ತುಂಬಾ ಹಸಿರಿತ್ತು. ವಾಸ್ತವವಾಗಿ ಈ ವರ್ಣಚಿತ್ರವು ಮರಳುಗಲ್ಲಿನಿಂದ ತುಂಬಿದ ಗಿಲ್ಫ್ ಕಿಬರ್ ಪ್ರಸ್ಥಭೂಮಿಯ ಗುಹೆಯಲ್ಲಿದೆ. ಈ ಪ್ರಸ್ಥಭೂಮಿ ನೈಋತ್ಯ ಈಜಿಪ್ಟ್ನಿಂದ ಆಗ್ನೇಯ ಲಿಬಿಯಾದವರೆಗೆ ವ್ಯಾಪಿಸಿದೆ.

ಇದು ಈ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ನೀರು ಇತ್ತು ಎಂದು ತೋರಿಸುತ್ತದೆ. ಬರಡು ಮತ್ತು ಒಣ ಭೂಮಿಯಾಗಿರಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಈ ಸ್ಥಳವನ್ನು ಮೊದಲು 1926 ರಲ್ಲಿ ಯುರೋಪಿಯನ್ ಕಾರ್ಟೋಗ್ರಾಫರ್ ಲಾಸ್ಲೋ ಅಲ್ಮಾಸಿ ಕಂಡುಹಿಡಿದರು. ಅವರು ಈ ಪ್ರಸ್ಥಭೂಮಿಗಳಲ್ಲಿ ಎರಡು ಆಳವಿಲ್ಲದ ಗುಹೆಗಳನ್ನು ನೋಡಿದಾಗ. ಮನುಷ್ಯರು ಮತ್ತು ಪ್ರಾಣಿಗಳ ಮೇಲೆ ಚಿತ್ರಗಳನ್ನು ರಚಿಸಲಾಗಿರುವುದನ್ನು ಕಂಡುಕೊಂಡಿದ್ದರು.

ಆದರೆ ಒಂದೇ ಒಂದು ಪೇಂಟಿಂಗ್ ಎಲ್ಲರನ್ನೂ ಆಕರ್ಷಿಸಿತು. ಈ ಚಿತ್ರವು ಈಜುತ್ತಿದ್ದ ಜೋಡಿ ಮನುಷ್ಯರದ್ದಾಗಿತ್ತು. ತನಿಖೆಯ ನಂತರ ಈ ಚಿತ್ರಕಲೆ ಮಾಡಿದ ಸಮಯ ಕಂಡುಬಂದಿದೆ. ಆ ಸಮಯದಲ್ಲಿ ಸಹರಾ ಮರುಭೂಮಿಯಲ್ಲಿ ಸಾಗರವಿತ್ತು. ಅಥವಾ ಅನೇಕ ನೀರಿನ ಮೂಲಗಳು ಇದ್ದವು ಎನ್ನುವುದು ಸ್ಪಷ್ಟವಾಗಿದೆ.

Leave a Reply

Your email address will not be published. Required fields are marked *