ಲಾಡುವಿನ ವಿವಾದದ ನಂತರ, ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಕೈಗೊಂಡ ಮಹತ್ವದ ನಿರ್ಧಾರವೇನು ಗೊತ್ತಾ?

ಲಾಡುವಿನ ವಿವಾದದ ನಂತರ, ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಕೈಗೊಂಡ ಮಹತ್ವದ ನಿರ್ಧಾರವೇನು ಗೊತ್ತಾ?

ತಿರುಮಲ ಶ್ರೀವಾರಿ ಲಾಡುವಿನ ಕಲಬೆರಕೆ ವಿಚಾರದ ಕುರಿತು ದೇಶಾದ್ಯಂತ ವಿವಾದ ಭುಗಿಲೆದ್ದಿದೆ. ಹೀಗಿರುವಾಗ ಅಯೋಧ್ಯೆಯ ರಾಮಮಂದಿರ ನಿರ್ಹಹಣ ಮಂಡಳಿ ಪ್ರಸಾಧದ ವಿಚಾರದಲ್ಲಿ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಏನದು ನಿರ್ಧಾರಾ ಅನ್ನೊದನ್ನ ತಿಳಿಸಿಕೊಡ್ತಿನಿ ಅದಕ್ಕು ಮುಂಚೆ ನಮ್ಮ ಪೇಜ್ ನಾ ಫಾಲೋ ಮಾಡಿ.

ಪ್ರಪಂಚದಾದ್ಯಂತ ಇರುವ ಕೊಟ್ಯಂತರ ಹಿಂದೂ ಭಕ್ತರು ತಿರುಮಲದಲ್ಲಿ ನೆಲೆಸಿರುವ ವೈಕುಂಠಾಧಿಪತಿಯ ದರ್ಶನಕ್ಕೆ ಏಳು ಬೆಟ್ಟಗಳನ್ನು ಹತ್ತಿ ಬರುತ್ತಾರೆ. ತಿರುಮಲದ ದೇವಾಲಯದ ಮೇಲೆ ಮತ್ತು  ಶ್ರೀವಾರಿಯ ಮೇಲೆ ಬಕ್ತರಿಗೆ ಅಪಾರ ನಂಬಿಕೆ ಇತ್ತು. ಜನರಿಗೆ ಶ್ರೀವಾರಿ ಲಾಡುವಿನ ಮೇಲೆ ಅಪಾರ ಭಕ್ತಿ ಇರುವುದರ ಜೊತೆಗೆ ಪವಿತ್ರ ಪ್ರಸಾಧವೆಂದು ಪರಿಗಣಿಸಿ ಪ್ರಸಾಧದ ಮೇಲೇ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಲಾಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಕಲಬೆರಕೆಯಾಗಿದೆ, ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಸುದ್ದಿ ಭಕ್ತರ ಭಾವನೆಗೆ ಧಕ್ಕೆ ತಂದಿದೆ.

ಇದೇ ಕಾರಣಕ್ಕಾಗಿ ಅಯೋಧ್ಯೆಯ ಶ್ರೀರಾಮ ಮಂದಿರ ಮಹತ್ವದ ನಿರ್ಧಾರ ಕೈಗೊಂಡಿದೆ. ಮರ್ಯಾದಾ ಪುರುಶೊತ್ತಮನ ಸನ್ನಿಧಿಯಲ್ಲಿ ಹೊರಗಿನ ಸಂಘಟನೆಗಳು ಸಿದ್ಧಪಡಿಸಿದ ಪ್ರಸಾದವನ್ನು ನಿಷೇಧಿಸಲಾಗಿದೆ. ಮತ್ತು ಅರ್ಚಕರ ಸಮ್ಮುಖದಲ್ಲಿ ತಯಾರಿಸುದ ಪ್ರಸಾದವನ್ನು ಮಾತ್ರಾ ಶ್ರೀರಾಮನಿಗೆ ಅರ್ಪಿಸಲು ನಿರ್ಧರಿಸಲಾಗಿದೆ ಎಂದು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.

ಕೋಟ್ಯಂತರ ಭಕ್ತರಿಗೆ ದೇವರ ಪವಿತ್ರತೆಯ ಮೇಲಿನ ನಂಬಿಕೆಗೆ ಸಂಬಂಧಿಸಿದ ಅಂಶವಾಗಿರುವುದರಿಂದ ಅಯೋಧ್ಯೆಯಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಇರುವ ಎಲ್ಲಾ ದೇವಾಲಯಗಳಲ್ಲಿ ಕೂಡ ಹೊರಗಿನವರು ತಯಾರಿಸುವ ಅಥವಾ ಏಜೆನ್ಸಿಗಳು ತಯಾರಿಸುವ ಪ್ರಸಾದವನ್ನು ನಿಷೇಧಿಸಬೇಕು ಮತ್ತು ಖುದ್ದಾಗಿ ಅರ್ಚಕರು ತಯಾರಿಸುವ ಪ್ರಸಾಧವನ್ನು ಮಾತ್ರಾ ಅರ್ಪಿಸಬೇಕು ನಿರ್ಣಯ ತೆಗೆದುಕೊಂಡಿದ್ದಾರೆ. ಅದೇ ರೀತಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಣ್ಣೆ ಮತ್ತು ತುಪ್ಪದ ಗುಣಮಟ್ಟವನ್ನು ಪರಿಶೀಲಿಸುವಂತೆ ಸರ್ಕಾರಕ್ಕೆ ಮನವಿ ಕೂಡ ಮಾಡಲಾಗಿದೆ.

ತಿರುಪತಿಯ ಶ್ರೀವಾರಿ ಲಾಡುವಿನಂತ ದುಷ್ಪರಿಣಾಮಗಳು ಬೇರೆಲ್ಲೂ ಆಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *