ಅಕ್ಟೋಬರ್ ಮೊದಲ ದಿನವೇ ಗ್ರಾಹಕರಿಗೆ ತೈಲ ಕಂಪನಿಗಳು ಶಾಕ್ ನೀಡಿವೆ. ದೇಶದಲ್ಲಿ ವಿವಿಧ ವಸ್ತುಗಳ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಲ್ಲೇ ಇವೆ. ಇದರ ನುಡುವೆ ಇದೀಗ ಅಡುಗೆ ಅನಿಲ ಸಿಲಿಂಡರ್ ಹೆಚ್ಚಳ ಮಾಡಲಾಗಿದ್ದು, ಶಾಕ್ ನೀಡಲಾಗಿದೆ.
ಸಾಮಾನ್ಯವಾಗಿ ತಿಂಗಳ ಮೊದಲ ದಿನದಂದು ತೈಲ ಕಂಪನಿಗಳು ಪೆಟ್ರೋಲ್,ಡೀಸೆಲ್ ಹಾಗೂ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸುತ್ತದೆ. ಅದರಂತೆ ಮಂಗಳವಾರವೂ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 48.50 ರೂಪಾಯಿ ಹೆಚ್ಚಿಸಲಾಗಿದ್ದು, ಪರಿಷ್ಕೃತ ದರವು ಮಂಗಳವಾರದಿಂದಲೇ ಜಾರಿಗೆ ಬರಲಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದಲ್ಲಿನ ಬದಲಾವಣೆಗೆ ಅನುಸಾರವಾಗಿ ಸಿಲಿಂಡರ್, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗುತ್ತದೆ. ಅದರಂತೆ ಮಂಗಳವಾರವೂ ಕಚ್ಚಾ ತೈಲ ಕಂಪನಿಗಳು ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿದೆ. ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ. 19 ಕೆ.ಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಮಂಗಳವಾರದಿಂದ ಒಮ್ಮೆಗೆ 48.50 ರೂಪಾಯಿ ಹೆಚ್ಚಿಸಲಾಗಿದೆ. ಈ ಮೂಲಕ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯು ಇದೀಗ ವಾಣಿಜ್ಯ ಸಿಲಿಂಡರ್ 19 ಕೆಜಿಯ ಬೆಲೆಯು.
ದೇಶದ ರಾಜಧಾನಿ ದೆಹಲಿಯಲ್ಲಿ 1,691.50 ರೂಪಾಯಿಯಿಂದ 1,740 ರೂಪಾಯಿಗೆ ಜಿಗಿತ ಕಂಡಿದೆ. 19 ಕೆ.ಜಿಯ ವಾಣಿಜ್ಯ ಸಿಲಿಂಡರ್ ಬೆಲೆ ಮಾತ್ರವಲ್ಲದೇ ಇದರೊಂದಿಗೆ, 5 ಕೆಜಿಯ ಫ್ರೀ ಟ್ರೇಡ್ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲೂ ಹೆಚ್ಚಳವಾಗಿದ್ದು, ಇದರ ಬೆಲೆಯನ್ನು 12 ರೂಪಾಯಿ ಹೆಚ್ಚಿಸಲಾಗಿದೆ.
ಸಮಾಧಾನಕರ ಸಂಗತಿ ಎಂದರೆ ಸಾಮಾನ್ಯ ಬಳಕೆಯ (ಮನೆಯಲ್ಲಿ ಬಳಸುವ) ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಇದರಿಂದ ಗೃಹಿಣಿಯರು ತುಸು ನಿರಾಳರಾಗಿದ್ದಾರೆ. ಆದರೆ, ಹೋಟೆಲ್ ಊಟ ಮಾಡುವವರಿಗೆ ಈ ಬೆಲೆ ಏರಿಕೆ ಖಂಡಿತವಾಗಿಯೂ ಬಿಸಿ ತುಪ್ಪವಾಗಲಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಹೋಟೆಲ್ ಮಾಲೀಕರಿಗೆ ಬಿಸಿ: ಬೆಲೆ ಏರಿಕೆಯ ಆತಂಕ
ಇದೀಗ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಏಕಾಏಕಿ ಹೆಚ್ಚಳ ಮಾಡಿರುವುದು ಹೋಟೆಲ್ ಮಾಲೀಕರಿಗೆ ಶಾಕ್ ನೀಡಿದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಯೂ ಹೆಚ್ಚಳವಾಗುತ್ತಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ. ಹಾಲು, ಮೊಸರು ಹಾಗೂ ತುಪ್ಪದ ಬೆಲೆಯೂ ಹೆಚ್ಚಳವಾಗಿದೆ. ಇದೀಗ 50 ರೂಪಾಯಿನಷ್ಟು ಬೆಲೆ ಏರಿಕೆ ಮಾಡಲಾಗಿದೆ. ಸಿಲಿಂಡರ್ ಬೆಲೆ ಏರಿಕೆ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಹೋಟೆಲ್ ಮಾಲೀಕರು ಹೋಟೆಲ್ನ ತಿನಿಸುಗಳ ಬೆಲೆಯನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಈ ಬೆಲೆ ಏರಿಕೆಯ ಬಿಸಿಯು ಪರೋಕ್ಷವಾಗಿ ಗ್ರಾಹಕರ ಜೋಬನ್ನೇ ಸುಡಲಿದೆ.
ಹಬ್ಬದ ಸಮಯದಲ್ಲಿ ಬೆಲೆ ಏರಿಕೆ: ದೇಶದಲ್ಲಿ ಇದೀಗ ಸಾಲು ಸಾಲು ಹಬ್ಬಗಳು ನಡೆಯುತ್ತಿವೆ. ನವರಾತ್ರಿ, ದಸರಾ, ದೀಪಾವಳಿ, ಕ್ರಿಸ್ಮಸ್ ನಂತರ ಹೊಸ ವರ್ಷ. ಮುಂದಿನ ಎರಡು ತಿಂಗಳು ಹಬ್ಬಗಳದ್ದೇ ದರ್ಬಾರು ಇರಲಿದೆ. ಆದರೆ, ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿರುವುದು ಹೋಟೆಲ್ ಮಾಲೀಕರಿಗೆ ಬಿಸ್ನೆಸ್ಗೆ ಹೊಡೆತ ಬಿದ್ದಂತಾಗುತ್ತದೆ. ಹೋಟೆಲ್ ಮಾಲೀಕರು ಈ ಬೆಲೆ ಏರಿಕೆಯ ಹೊರೆಯನ್ನು ಅನಿವಾರ್ಯವಾಗಿ ಗ್ರಾಹಕರ ಮೇಲೆ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.