ಟೆಲ್ ಅವೀವ್: ದಕ್ಷಿಣ ಲೆಬನಾನ್ ನಲ್ಲಿ ಹೆಜ್ಬೊಲ್ಲಾ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಇಸ್ರೇಲ್ ಸೇನೆ ಬುಧವಾರ ಮಹತ್ವದ ಮುನ್ನಡೆ ಸಾಧಿಸಿದ್ದು, ಹಿಜ್ಬುಲ್ಲಾ ಕಮಾಂಡರ್ ನನ್ನು ವಶಕ್ಕೆ ಪಡೆದಿದೆ.
ಎರಡು ವಾರಗಳ ಹಿಂದೆ ದಕ್ಷಿಣ ಲೆಬನಾನ್ನಲ್ಲಿನ ಅಯ್ತಾ ಆಶ್-ಶಾಬ್ನಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿದ್ದ ಇಸ್ರೇಲ್ ಸೇನೆ ಇದೀಗ ಹಿಜ್ಬುಲ್ಲಾದ ಕಮಾಂಡರ್ ಹಸನ್ ಅಕಿಲ್ ಜವಾದ್ ನನ್ನು ವಶಕ್ಕೆ ಪಡೆದಿದೆ.
ಅಂತೆಯೇ ಇದೇ ಸುರಂಗದಲ್ಲಿ ಹಸನ್ ಅಕಿಲ್ ಜವಾದ್ ಗೆ ರಕ್ಷಣೆ ನೀಡುತ್ತಿದ್ದ ಬಂಡುಕೋರರನ್ನೂ ಕೂಡ ಇಸ್ರೇಲ್ ನ ಗೋಲಾನಿ ಬ್ರಿಗೇಡ್ ಪಡೆಗಳು ವಶಪಡಿಸಿಕೊಂಡಿದೆ ಎಂದು Iಆಈ ಘೋಷಿಸಿದೆ.
ಗುಪ್ತಚರ ವರದಿಯನ್ನು ಅನುಸರಿಸಿ ಇಸ್ರೇಲ್ ಸೇನೆ ಈ ಕಾರ್ಯಾಚರಣೆ ನಡೆಸಿದ್ದು, ಸೈನಿಕರು ಜವಾದ್ ಮತ್ತು ಇತರ ಕಾರ್ಯಕರ್ತರನ್ನು ಹೆಜ್ಬುಲ್ಲಾ ಕಮಾಂಡ್ ಸೆಂಟರ್ನ ಸುರಂಗದಲ್ಲಿ ವಶಕ್ಕೆ ಪಡೆಯುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದೆ. ಹೆಜ್ಬೊಲ್ಲಾ ಆಪರೇಟಿವ್ಗಳು ಶರಣಾಗುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ವೇಳೆ ಗುಪ್ತಚರ ನಿರ್ದೇಶನಾಲಯದ ಘಟಕ ೫೦೪ರಲ್ಲಿ ವಿಚಾರಣೆಗೊಳಪಡಿಸಿ ಹೆಚ್ಚಿನ ವಿಚಾರಣೆಗಾಗಿ ಇಸ್ರೇಲ್ಗೆ ಕರೆತರಲಾಯಿತು. ಅಂತೆಯೇ ದಕ್ಷಿಣ ಲೆಬನಾನ್ನಲ್ಲಿ ಇತ್ತೀಚಿನ ಕಾರ್ಯಾಚರಣೆಗಳಲ್ಲಿ ಹಲವಾರು ಇತರ ಹಿಜ್ಬುಲ್ಲಾ ಕಾರ್ಯಕರ್ತರನ್ನು ಸಹ ಬಂಧಿಸಲಾಗಿದೆ. ಅಲ್ಲದೆ ಸುರಂಗದಲ್ಲಿದ್ದ ಸುಮಾರು ಅರ್ಧ ಟನ್ ಸ್ಫೋಟಕಗಳನ್ನು ನಿಷ್ಕಿçಯಗೊಳಿಸಲಾಗಿದೆ ಎಂದು ಐಡಿಎಫ್ ಹೇಳಿದೆ.