ಚಳಿಗಾಲಕ್ಕೆ ಮುಚ್ಚಿದ ಪವಿತ್ರ ದೇಗುಲ ಕೇದಾರನಾಥ ದ್ವಾರ

ಚಳಿಗಾಲಕ್ಕೆ ಮುಚ್ಚಿದ ಪವಿತ್ರ ದೇಗುಲ ಕೇದಾರನಾಥ ದ್ವಾರ

ಕೇದಾರನಾಥ: ಚಳಿಗಾಲ ಆರಂಭವಾದ ಹಿನ್ನೆಲೆಯಲ್ಲಿ ಪವಿತ್ರ ದೇಗುಲ ಕೇದಾರನಾಥದ ದ್ವಾರಗಳನ್ನು ಭಾನುವಾರ ತಾತ್ಕಾಲಿಕವಾಗಿ ಮುಚ್ಚಲಾಯಿತು. ದೇವಾಲಯಕ್ಕೆ ಬಾಗಿಲು ಹಾಕುವ ಇಂದಿನ ಕಾರ್ಯಕ್ರಮವನ್ನು ವೀಕ್ಷಿಸಲು 18,000 ಕ್ಕೂ ಹೆಚ್ಚು ಯಾತ್ರಿಕರು ಹಿಮಾಲಯ ತಪ್ಪಲಿನಲ್ಲಿ ಸೇರಿದ್ದರು.

ದೇವಾಲಯದ ದ್ವಾರಗಳನ್ನು ಮುಚ್ಚುವ ಮುನ್ನ ಇಂದು ನಸುಕಿನ ಜಾವ 4 ಗಂಟೆಗೆ ಕಾರ್ಯಕ್ರಮಗಳು ಆರಂಭವಾದವು. ಬೆಳಗ್ಗೆ 8.30 ಕ್ಕೆ ಪೋರ್ಟಲ್‌ಗಳನ್ನು ಮುಚ್ಚಲಾಯಿತು ಎಂದು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯ ಮಾಧ್ಯಮ ಉಸ್ತುವಾರಿ ಹರೀಶ್ ಗೌರ್ ಹೇಳಿದ್ದಾರೆ.

ದೇವಾಲಯಕ್ಕೆ ಬಾಗಿಲು ಹಾಕುವ ಸಮಾರಂಭವನ್ನು ವೀಕ್ಷಿಸಲು 18,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ವೀಕ್ಷಿಸಿದರು. ಇಡೀ ಯಾತ್ರೆಯ ಋತುವಿನಲ್ಲಿ ಹದಿನಾರೂವರೆ ಲಕ್ಷಕ್ಕೂ ಹೆಚ್ಚು ಯಾತ್ರಿಕರು ಪ್ರಾರ್ಥನೆ ಸಲ್ಲಿಸಲು ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ ಎಂದು ಬಿಕೆಟಿಸಿ ಅಧ್ಯಕ್ಷ ಅಜೇಂದ್ರ ಅಜಯ್ ಹೇಳಿದ್ದಾರೆ.

ಗರ್ವಾಲ್ ಹಿಮಾಲಯ ಭಾಗದಲ್ಲಿ 11,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿರುವ ಕೇದಾರನಾಥವು ದೇಶದ ವಿವಿಧ ಭಾಗಗಳಲ್ಲಿ ನೆಲೆಗೊಂಡಿರುವ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಗಟ್ಟಲೆ ಯಾತ್ರಿಕರು ಭೇಟಿ ನೀಡುವ ಜನಪ್ರಿಯ ಯಾತ್ರಾ ಸ್ಥಳವಾಗಿದ್ದು, ಚಳಿಗಾಲದಲ್ಲಿ ಹಿಮದಿಂದ ಆವೃತವಾಗಿರುವಾಗ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತದೆ.

Leave a Reply

Your email address will not be published. Required fields are marked *