ಹುಡುಗಿಯಾಗಿ ಬದಲಾದ ಟೀಮ್ ಇಂಡಿಯಾ ಕ್ರಿಕೆಟಿಗನ ಪುತ್ರ

ಹುಡುಗಿಯಾಗಿ ಬದಲಾದ ಟೀಮ್ ಇಂಡಿಯಾ ಕ್ರಿಕೆಟಿಗನ ಪುತ್ರ

ಸಂಜಯ್ ಬಂಗಾರ್ ಟೀಮ್ ಇಂಡಿಯಾ ಪರ 12 ಟೆಸ್ಟ್, 15 ಏಕದಿನ ಪಂದ್ಯಗಳನ್ನಾಡಿದ್ದಾರೆ. ಹಾಗೆಯೇ ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ ಆರ್ಸಿಬಿ ಸೇರಿದಂತೆ ಒಂದಷ್ಟು ತಂಡಗಳ ಮುಖ್ಯ ಕೋಚ್ ಹುದ್ದೆಯಲ್ಲಿಯೂ ಕಾಣಿಸಿಕೊಂಡಿದ್ದಾರೆ

ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಅವರ ಪುತ್ರ/ಪುತ್ರಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಅದು ಸಹ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಬಹಿರಂಗಪಡಿಸುವಿಕೆಯೊಂದಿಗೆ ಎಂಬುದೇ ವಿಶೇಷ.

ಸಂಜಯ್ ಬಂಗಾರ್ ಅವರ ಹಿರಿಯ ಮಗ ಆರ್ಯನ್ ತಾನು ಹಾರ್ಮೋನ್ ಪರಿವರ್ತಿಸಿಕೊಂಡಿದ್ದು, ಇದೀಗ ಹುಡುಗನಿಂದ ಹುಡುಗಿಯಾಗಿ ರೂಪಾಂತರಗೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಇನ್ಮುಂದೆ ನನ್ನ ಹೆಸರು ಆರ್ಯನ್ ಅಲ್ಲ, ಬದಲಾಗಿ ಅನಯಾ ಎಂದಿದ್ದಾರೆ.

ಅಂದಹಾಗೆಯೇ ಅನಯಾ ಕಳೆದ 10 ತಿಂಗಳಿಂದ ಹಾರ್ಮೋನ್ ಬದಲಾವಣೆಗಾಗಿ ಚಿಕಿತ್ಸೆ ಪಡೆದಿದ್ದಾರೆ. ಇದೀಗ 10 ತಿಂಗಳ ಶಸ್ತ್ರಚಿಕಿತ್ಸೆಯ ನಂತರ ಹುಡುಗಿಯಾಗಿ ರೂಪಾಂತರಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ ಇದಕ್ಕಾಗಿ ನನ್ನ ಕ್ರಿಕೆಟ್ ಕೆರಿಯರ್ ಅನ್ನು ತ್ಯಾಗ ಮಾಡಿರುವುದಾಗಿ ಅನಯಾ ಹೇಳಿದ್ದಾರೆ.

ಆರ್ಯನ್ ಬಂಗಾರ್ ಕೂಡ ತಂದೆಯಂತೆ ಕ್ರಿಕೆಟಿಗನಾಗಬೇಕೆಂದು ಕನಸು ಕಂಡಿದ್ದರು. ಅದರಂತೆ ಬಾಲ್ಯದಿಂದಲೇ ಕ್ರಿಕೆಟ್ ಅಭ್ಯಾಸವನ್ನು ಸಹ ಶುರು ಮಾಡಿದ್ದರು. ಎಡಗೈ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಆರ್ಯನ್ ಲೀಸೆಸ್ಟರ್‌ಶೈರ್‌ನ ಹಿಂಕ್ಲೆ ಕ್ರಿಕೆಟ್ ಕ್ಲಬ್‌ ಪರ ಆಡಿದ್ದಾರೆ.

ಆದರೆ ಆ ಬಳಿಕ ದೇಹದಲ್ಲಾದ ಪರಿವರ್ತನೆಯಿಂದಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಆರ್ಯನ್ ಆಗಿದ್ದ ಬಂಗಾರ್ ಪುತ್ರ ಇದೀಗ ಅನಯಾ ಆಗಿ ಬದಲಾಗಿದ್ದಾರೆ. ಅಲ್ಲದೆ ನನ್ನ ಈ ನಿರ್ಧಾರದ ಬಗ್ಗೆ ತುಂಬಾ ತೃಪ್ತಿಯಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಅನಯಾ ಬಂಗಾರ್ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ವಾಸಿಸುತ್ತಿದ್ದಾರೆ. ಇದೀಗ ಹುಡುಗಿಯಾಗಿ ರೂಪಾಂತರಗೊಂಡಿರುವ ಅವರು ಮುಂಬರುವ ದಿನಗಳಲ್ಲಿ ಕ್ರಿಕೆಟ್ ಕೆರಿಯರ್ ಮುಂದುವರೆಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *