ಆಫ್ರಿಕಾದಲ್ಲಿ ನಮ್ಮ ಭಾರತೀಯರೊಬ್ಬರು ತಮ್ಮ ದೇಶವೆಂದು ಒಂದು ಭೂಭಾಗವನ್ನು ಡಿಕ್ಲೇರ್ ಮಾಡಿಕೊಂಡಿದ್ದಾರೆ. ‘ಬಿರ್ ತಾವಿಲ್’ ಇದು ಒಂದು ಆಫ್ರಿಕಾದಲ್ಲಿನ ಭೂಭಾಗವಾಗಿದೆ. ಇದು 2,೦6೦ ಕಿ.ಮೀ ಸ್ಕೇರ್ ಹಾಗೂ 795.4 ಚದರ ಮೈಲಿ ಈಜಿಪ್ಟ್ ಮತ್ತು ಸುಡಾಬಿಯ ನಡುವೆ ಇರುವ ಗಡಿ ಪ್ರದೇಶ. ಇದನ್ನು ‘ಎತ್ತರದ ನೀರಿನ ಬಾವಿ’ ಎಂದು ಹೇಳಲಾಗಿದ್ದು ಜಗತ್ತಿನ ಯಾವುದೇ ದೇಶವು ಈ ಭೂಭಾಗದಲ್ಲಿ ಹಕ್ಕು ಸಾಧಿಸಿಲ್ಲ. ಹೀಗಾಗಿ ನಮ್ಮ ಭಾರತದ ನಾಗರೀಕ ಇದನ್ನು “ದೀಕ್ಷಿತ್ ಸಾಮ್ರಾಜ್ಯ” ಅಥವಾ “ಕಿಂಗ್ ಡಮ್ ಆಫ್ ದೀಕ್ಷೀತ್” ಎಂದು ತಮ್ಮದೇ ಒಂದು ದೇಶವಾಗಿ ಡಿಕ್ಲೇರ್ ಮಾಡಿಕೊಂಡಿದ್ದಾರೆ. ಮತ್ತು ಒಂದು ಭಾವುಟವನ್ನು ಡಿಸೈನ್ ಮಾಡಿ, ಅಲ್ಲಿ ನೆಟ್ಟಿ ಬಂದಿದ್ದಾರೆ. ತನ್ನನ್ನು ತಾನು ಪ್ರಧಾನ ಮಂತ್ರಿ, ಮಿಲಿಟರಿ ಹೆಡ್ ಆಗಿ ಹಾಗೂ ಅವರ ತಂದೆಯನ್ನು ಆ ಭೂಭಾಗದ ಪ್ರಸಿಡೆಂಟ್ ಎಂದು ಹೇಳಿಕೊಂಡಿದ್ದಾರೆ. ಮತ್ತು ವಿಶ್ವಸಂಸ್ಥೆಯಿOದ ಮಾನ್ಯತೆಯನ್ನು ಸಹ ಕೋರಿದ್ದರು.
ನವೆಂಬರ್ 2017 ರಲ್ಲಿ, ಇಂದೋರ್ನ 24 ವರ್ಷದ ಭಾರತೀಯ ಉದ್ಯಮಿ ಸುಯಾಶ್ ದೀಕ್ಷಿತ್ ಅವರು ಬಿರ್ ತಾವಿಲ್ಗೆ ಪ್ರಯಾಣ ಬೆಳೆಸಿದ್ದರು.. ಕೈರೋದಿಂದ ಅಬು ಸಿಂಬೆಲ್ಗೆ ಹಾರುತ್ತಾ, ಅವರು ಬಾಡಿಗೆ ಕಾರಿನ ಮೂಲಕ ನವೆಂಬರ್ 4 ರಂದು ಬಿರ್ ತಾವಿಲ್ ತಲುಪಿದರು ಮತ್ತು ಮರುಭೂಮಿಯಲ್ಲಿ ಸೂರ್ಯಕಾಂತಿ ಬೀಜಗಳನ್ನು ನೆಟ್ಟರು. ಆದರೆ ಅಲ್ಲಿ ಶಾಶ್ವತ ನಾಗರೀಕನ್ನು ಹೊಂದದ, ಯಾವುದೇ ರಿಸೋರ್ಸ್ ಇಲ್ಲದ, ಹಾಗೂ ಕೃಷಿ ಮಾಡಲಾಗದ ಯಾವುದೇ ಪ್ರದೇಶವನ್ನು ದೇಶವಾಗಿ ಘೋಷಿಸಲು ಸಾಧ್ಯವಿಲ್ಲ.
1899 ರಲ್ಲಿ ಸ್ಥಾಪಿಸಲಾದ ಈಜಿಪ್ಟ್ ಮತ್ತು ಸುಡಾನ್ ನಡುವಿನ ನೇರ ರಾಜಕೀಯ ಗಡಿ ಮತ್ತು 19೦2 ರಲ್ಲಿ ಸ್ಥಾಪಿಸಲಾದ ಅನಿಯಮಿತ ಆಡಳಿತಾತ್ಮಕ ಗಡಿಯ ನಡುವಿನ ವ್ಯತ್ಯಾಸದಿಂದ ಇದರ ಹಕ್ಕು ಪಡೆಯದ ಸ್ಥಿತಿಯು ಉಂಟಾಗುತ್ತದೆ. ಈಜಿಪ್ಟ್ ರಾಜಕೀಯ ಗಡಿಯನ್ನು ಪ್ರತಿಪಾದಿಸುತ್ತದೆ ಮತ್ತು ಸುಡಾನ್ ಆಡಳಿತಾತ್ಮಕ ಗಡಿಯನ್ನು ಪ್ರತಿಪಾದಿಸುತ್ತದೆ. ಇದರ ಪರಿಣಾಮವಾಗಿ ಹಲೈಬ್ ತ್ರಿಕೋನವಾಗಿದೆ. ಆದರೆ ಬಿರ್ ತಾವಿಲ್ ಈ ಎರಡು ದೇಶಗಳು ಕ್ಲೇಮ್ ಮಾಡಿಲ್ಲ. 2014 ರಲ್ಲಿ, ಲೇಖಕ ಅಲಸ್ಟೈರ್ ಬಾನೆಟ್ ಬಿರ್ ತಾವಿಲ್ ಅನ್ನು ಭೂಮಿಯ ಮೇಲೆ ವಾಸಿಸಲು ಯೋಗ್ಯವಾದ ಏಕೈಕ ಸ್ಥಳವೆಂದು ವಿವರಿಸಿದರು ಆದರೆ ಯಾವುದೇ ಮಾನ್ಯತೆ ಪಡೆದ ಸರ್ಕಾರದಿಂದ ಹಕ್ಕು ಪಡೆಯಲಿಲ್ಲ.