ಶಿವಕುಮಾರ ಮಹಾಸ್ವಾಮೀಜಿ ರವರ ಪ್ರತಿಮೆಯನ್ನ ಕಿಡಿಗೇಡಿಗಳು ಹೊಡೆದು, ವಿರೂಪಗೊಳಿಸಿದ ಘಟನೆ ಖಂಡಸಿ ಪ್ರತಿಭಟನೆ

ಶಿವಕುಮಾರ ಮಹಾಸ್ವಾಮೀಜಿ ರವರ ಪ್ರತಿಮೆಯನ್ನ ಕಿಡಿಗೇಡಿಗಳು ಹೊಡೆದು, ವಿರೂಪಗೊಳಿಸಿದ ಘಟನೆ ಖಂಡಸಿ ಪ್ರತಿಭಟನೆ

ಬೆಂಗಳೂರು: ಗಿರಿನಗರ, ವೀರಭದ್ರನಗರ ವೃತ್ತದಲ್ಲಿ ನಡೆದಾಡುವ ದೇವರು, ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿರವರ ಪ್ರತಿಮೆಯನ್ನು ಯಾರೋ ಕಿಡಿಗೇಡಿಗಳು, ವಿಕೃತ ಮನಸ್ಸಿನವರು ಪ್ರತಿಮೆ ಧ್ವಂಸ ಮಾಡಿ ವಿರೂಪಗೊಳಿಸಿರುತ್ತಾರೆ ಇಂತಹ ಕೃತ್ಯ ಖಂಡಿಸಿ ಅಖಿಲ ಭಾರತ ವೀರಶೈವ ಮಹಾಸಭಾ, ಬೆಂಗಳೂರುನಗರ ಘಟಕದಿಂದ ಬೃಹತ್ ಪ್ರತಿಟನೆಯನ್ನು ಕೃತ್ಯ ನಡೆದ ಸ್ಥಳದ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದರು.

ಮಾಜಿ ಉಪ ಮಹಾಪೌರರಾದ ಬಿ.ಎಸ್.ಪುಟ್ಟರಾಜು, ವೀರಶೈವ ಸಮುದಾಯದ ಮುಖಂಡರಾದ ಮಲ್ಲಿಕಾರ್ಜುನ್, ಬಿಜೆಪಿ ಮುಖಂಡರಾದ ಹೆಚ್.ಆರ್.ಮಲ್ಲಿಕಾರ್ಜುನ್ ,ಅಖಿಲ ಭಾರತ ವೀರಶೈವ ಮಹಸಭಾ ಬೆಂಗಳೂರು ಘಟಕದ ಅಧ್ಯಕ್ಷರಾದ ಬಿ.ಆರ್. ನವೀನ್ ಕುಮಾರ್ ಉಪಾಧ್ಯಕ್ಷರುಗಳು

ಗುರುಮೂರ್ತಿ ಎಂ ವಿಜಯ್ ಕುಮಾರ್ ಪಿ ಸ್ವರ್ಣ ಗೌರಿ ಹೆಚ್ ಆರ್ ಪ್ರಧಾನ ಕಾರ್ಯದರ್ಶಿ

ಶಿವಕುಮಾರ್ ಬಿ ಎಂ ಕೋಶಾಧ್ಯಕ್ಷ

ವಿಜಯಕುಮಾರ್ ಎಂ ಗುಡದಿನ್ನಿ

ಕಾರ್ಯದರ್ಶಿಗಳುಮಂಜುನಾಥ್ ಎಸ್.ಕೆ ಸಿ ಅಶೋಕ್,ಕುಶಾಲ ಜಿ ಎಸ್ ರವರು ವೀರಶೈವ ಮುಖಂಡರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತುಮಕೂರು ಸಿದ್ದಗಂಗಾ ಮಠದ ಶ್ರೀ  ಶಿವಕುಮಾರ ಮಹಾಸ್ವಾಮೀಜಿರವರು ಜಾತಿ, ಮತ ಮತ್ತು ಪಂಥ ಭೇದವಿಲ್ಲದೇ ಎಲ್ಲರಿಗೂ ಅನ್ನ, ಅಕ್ಷರ, ಆಶ್ರಯ ನೀಡಿದರು, ಅವರ ನಿಸ್ವಾರ್ಥ ಸೇವೆಯನ್ನ ನೋಡಿದ ಭಕ್ತರೇ ಅವರಿಗೆ ನಡೆದಾಡುವ ದೇವರು ಎಂಬ ಬಿರುದು ನೀಡಿದರು.

ಸಮಾಜದಲ್ಲಿ ಅಶಾಂತಿ ಮೂಡಬೇಕು ಎಂದು ಕೆಲವು ಕಿಡಿಗೇಡಿಗಳು ಇಂತಹ ಕೃತ್ಯ ಮಾಡುತ್ತಿದ್ದಾರೆ, ಇಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು, ಇಂತಹ ಘಟನೆ ನಡೆಯದಂತೆ ಎಚ್ಚರವಹಿಸಬೇಕು.

ವಿಶ್ವದ ಮಹಾನ್ ಸಂತ ಎಂಬ ಖ್ಯಾತಿ ಪಾತ್ರರಾಗಿರುವ ಶಿವಕುಮಾರ ಮಹಾಸ್ವಾಮೀಜಿರವರ ಪ್ರತಿಮೆಯನ್ನು ಹೊಡೆದು, ವಿರೂಪಗೊಳಿಸಿದ ಕಿಡಿಗೇಡಿಯನ್ನ ಬಂಧಿಸಿರುವ ಪೊಲೀಸ್ ಇಲಾಖೆಗೆ ಅಭನಂದನೆಗಳು

ಶಿವಕುಮಾರ ಮಹಾಸ್ವಾಮೀಜಿರವರ ಪ್ರತಿಮೆಗೆ ಸೂಕ್ತಬಂದೂಬಸ್ತು ಒದಗಿಸಬೇಕು ಎಂಬುದು ನಮ್ಮ ಅಗ್ರಹ.

ಪ್ರತಿಭಟನಾ ನಿರತರಾದ ವೀರಶೈವ ಸಮುದಾಯದ ಮುಖಂಡರುಗಳನ್ನು ಬಂಧಿಸಿ, ಬಿಡುಗಡೆ ಮಾಡಿದರು

Leave a Reply

Your email address will not be published. Required fields are marked *