ಈಗಾಗಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಆರ್ಭಟಿಸಿ ಅವಾಂತರಗಳನ್ನು ಸೃಷ್ಟಿಸಿದ್ದಾಬನೆ. ಇನ್ನು ಇದೀಗ ಚಳಿ ನಡುವೆಯೂ ಹಲವೆಡೆ ಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ 3 ದಿನಗಳ ಕಾಲ ಈ ಭಗಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ವರುಣ ಅಬ್ಬರಿಸಲಿದ್ದಾರೆ
ಮುಂದಿನ ಏಳು ದಿನಗಳ ಕಾಲ ವಾಯುವ್ಯ ಭಾರತದಲ್ಲಿ ಚಳಿಯ ಪ್ರಮಾಣ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ . ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಡಿಸೆಂಬರ್ 20ರಂದು ಕರಾವಳಿ ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಎಲ್ಲೆಲ್ಲಿ ಭಾರೀ ಮಳೆ?: ಇಂದು ಕರಾವಳಿ ಆಂಧ್ರಪ್ರದೇಶ, ಪುದುಚೇರಿ, ಉತ್ತರ ತಮಿಳುನಾಡಿನ ಹಲವೆಡೆ ಮತ್ತು ರಾಯಲಸೀಮಾದ ಹಲವು ಸ್ಥಳಗಳಲ್ಲಿ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಡಿಸೆಂಬರ್ 20 ಮತ್ತು ಡಿಸೆಂಬರ್ 21ರಂದು ಕರಾವಳಿ ಪಶ್ಚಿಮ ಬಂಗಾಳ ಮತ್ತು ಕರಾವಳಿ ಒಡಿಶಾ, ಡಿಸೆಂಬರ್ 20ರಿಂದ ಡಿಸೆಂಬರ್ 24ರ ವರೆಗೆ ತ್ರಿಪುರ, ಮಣಿಪುರ, ಮಿಜೋರಾಂ ಮತ್ತು ನಾಗಾಲ್ಯಾಂಡ್, ಡಿಸೆಂಬರ್ 21 ರಿಂದ 23ರ ವರೆಗೆ ಮೇಘಾಲಯ ಮತ್ತು ಅಸ್ಸಾಂನಲ್ಲಿ ಇದೇ ರೀತಿಯ ವಾತಾವರಣ ಇರಲಿದೆ ಎಂದು ಮುನ್ಸೂಚನೆ ನೀಡಿದೆ. ಎಲ್ಲೆಲ್ಲಿ ಹೆಚ್ಚು ಚಳಿ?: ಹವಾಮಾನ ಮುನ್ಸೂಚನೆಯ ಪ್ರಕಾರ, ಮುಂದಿನ 7 ದಿನಗಳವರೆಗೆ ವಾಯುವ್ಯ ಭಾರತದಲ್ಲಿ ಚಳಿಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹಿಮಾಚಲ ಪ್ರದೇಶದಲ್ಲಿ ಡಿಸೆಂಬರ್ 20ರಿಂದ 25ರ ವರೆಗೆ ಚಳಿಯ ಪ್ರಮಾಣ ಹೆಚ್ಚಿರಲಿದೆ. ಡಿಸೆಂಬರ್ 20ರಿಂದ 23ರ ವರೆಗೆ ಪಶ್ಚಿಮ ರಾಜಸ್ಥಾನ, ಡಿಸೆಂಬರ್ 20ರಿಂದ 22ರ ವರೆಗೆ ಪಂಜಾಬ್, ಡಿಸೆಂಬರ್ 20ರಿಂದ 25ರ ವರೆಗೆ ಲಡಾಖ್, ಜಮ್ಮು-ಕಾಶ್ಮೀರ, ಬಾಲ್ಟಿಸ್ತಾನ್, ಗಿಲ್ಗಿಟ್, ಮುಜಫರಾಬಾದ್, ಡಿಸೆಂಬರ್ 20 ರಿಂದ 21ರ ವರೆಗೆ ಚಂಡೀಗಢ ಮತ್ತು ಹರಿಯಾಣದಲ್ಲಿ ಇದೇ ರೀತೀಯ ವಾತಾವರಣ ಇರಲಿದೆ ಎಂದು ತಿಳಿಸಿದೆ.
ಎಲ್ಲೆಲ್ಲಿ ದಟ್ಟ ಮಂಜು?: ಡಿಸೆಂಬರ್ 21ರಂದು ಹರಿಯಾಣ, ಡಿಸೆಂಬರ್ 20, ಡಿಸೆಂಬರ್ 22ರಂದು ಚಂಡೀಗಢ, ಡಿಸೆಂಬರ್ 24ರಂದು ಉತ್ತರ ಪ್ರದೇಶದಲ್ಲಿ ರಾತ್ರಿ ಮತ್ತು ಮುಂಜಾನೆ ವೇಳೆ ದಟ್ಟವಾದ ಮಂಜು ಕವಿಯುವ ಸಾಧ್ಯತೆಯಿದೆ. ಡಿಸೆಂಬರ್ 20 ರಿಂದ ಡಿಸೆಂಬರ್ 22ರ ವರೆಗೆ ಜಾರ್ಖಂಡ್, ಪೂರ್ವ ರಾಜಸ್ಥಾನ, ಡಿಸೆಂಬರ್ 21 ರಿಂದ ಡಿಸೆಂಬರ್ 22ರ ವರೆಗೆ ಬಿಹಾರ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಇದೇ ರೀತಿಯ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯ ಪ್ರಕಾರ, ಡಿಸೆಂಬರ್ 27ರಿಂದ ಪಶ್ಚಿಮ ಹಿಮಾಲಯ ಪ್ರದೇಶ ಮತ್ತು ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಮ ಹೆಚ್ಚಾಗಿರಲಿದೆ. ಡಿಸೆಂಬರ್ 27 ಮತ್ತು ಡಿಸೆಂಬರ್ 2 ರಿಂದ ಹಿಮಾಚಲ ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗುವ ಸಾಧ್ಯತೆಯಿದೆ ಅಂತಲೂ ಹವಾಮಾನ ಇಲಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.