Male River: ಭಾರತದಲ್ಲಿ, ನದಿಗಳನ್ನು ದೇವತೆಗಳೆಂದು ಪೂಜಿಸಲಾಗುತ್ತದೆ. ಎಷ್ಟೋ ಭಕ್ತರು ನದಿಯ ದಡದಲ್ಲಿ ಪೂಜೆ ಸಲ್ಲಿಸುತ್ತಾರೆ. ನದಿಯಲ್ಲಿ ಸ್ನಾನ ಮಾಡಿದ್ರೆ ಎಲ್ಲಾ ಪಾಪಗಳು ಕಳೆಯುತ್ತೆ. ಪುಣ್ಯ ಸಿಗುತ್ತೆ ಅನ್ನೋ ನಂಬಿಕೆ ಇದೆ.
ಭಾರತ ನದಿಗಳ ದೇಶ. ವಿವಿಧ ದೇಶಗಳ ನದಿಗಳು ಇಲ್ಲಿ ಹರಿಯುತ್ತವೆ. ಗಂಗಾ, ಸರಸ್ವತಿ, ಯಮುನಾ, ನರ್ಮದಾ, ತಾಪಿ ಮುಂತಾದ ನದಿಗಳು ನಮ್ಮ ದೇಶದಲ್ಲಿವೆ. ಇದರಿಂದ ರೈತರಿಗೆ ಅನುಕೂಲವಾಗಿದೆ.
ಭಾರತದ ನದಿಗಳ ಇತಿಹಾಸ ಬಹಳ ಹಳೆಯದು. ನದಿಗಳು ಶತಮಾನಗಳಿಂದಲೂ ತಮ್ಮ ಶುದ್ಧತೆಯನ್ನು ಕಾಯ್ದುಕೊಂಡಿವೆ. ನಿರಂತರವಾಗಿ ಆಯಾ ದಿಕ್ಕುಗಳಲ್ಲಿ ಹರಿಯುತ್ತಿವೆ. ಗಂಗೆಯಂತಹ ಪವಿತ್ರ ನದಿ ಉಲ್ಲೇಖ ಧರ್ಮಗ್ರಂಥಗಳಲ್ಲಿ ಇದೆ.
ಪುರಾಣಗಳಲ್ಲಿ ಯಮುನೆಯ ಶುದ್ಧತೆಗಾಗಿ ಪೂಜಿಸಲಾಗುತ್ತದೆ. ಗಂಗೆ, ಗೋದಾವರಿ, ನರ್ಮದಾ, ಸಿಂಧು, ತುಂಗಭದ್ರಾ ಹೀಗೆ ಭಾರತದಲ್ಲಿ ಹರಿಯುವ ಎಲ್ಲ ನದಿಗಳ ಹೆಸರು ಮಹಿಳೆಯ ಹೆಸರಾಗಿದೆ. ಇದೇ ಕಾರಣಕ್ಕೆ ಭಾರತದ ನದಿಗಳನ್ನು ಸ್ತ್ರೀಗೆ ಹೋಲಿಕೆ ಮಾಡಲಾಗುತ್ತದೆ. ನದಿಯನ್ನು ತಾಯಿ, ಪವಿತ್ರವಾದವಳೆಂದು ಪೂಜೆ ಮಾಡಲಾಗುತ್ತದೆ.
ಭಾರತದಲ್ಲಿ, ನದಿಗಳನ್ನು ದೇವತೆಗಳೆಂದು ಪೂಜಿಸಲಾಗುತ್ತದೆ. ಎಷ್ಟೋ ಭಕ್ತರು ನದಿಯ ದಡದಲ್ಲಿ ಪೂಜೆ ಸಲ್ಲಿಸುತ್ತಾರೆ. ನದಿಯಲ್ಲಿ ಸ್ನಾನ ಮಾಡಿದ್ರೆ ಎಲ್ಲಾ ಪಾಪಗಳು ಕಳೆಯುತ್ತೆ. ಪುಣ್ಯ ಸಿಗುತ್ತೆ ಅನ್ನೋ ನಂಬಿಕೆ ಇದೆ.
ಮಹಾ ಕುಂಭ ಮೇಳದಲ್ಲೂ ಸಾಗರೋಪಾದಿಯಲ್ಲಿ ಜನ ನದಿಯಲ್ಲಿ ಸ್ನಾನ ಮಾಡಿ ತಮ್ಮ ತಮ್ಮ ಪಾಪಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಒಂದು ಪ್ರಶ್ನೆ ಬಂದಿದೆ. ಅದೇನಂದ್ರೆ ಭಾರತದಲ್ಲಿ ಒಂದೇ ಒಂದು ನದಿ ಮಾತ್ರ ಪುರುಷ ನದಿಯಾಗಿದೆ. ಇದರ ಬಗ್ಗೆ ಸಂರ್ಪೂಣ ಮಾಹಿತಿ ಇಲ್ಲಿದೆ ನೋಡಿ.
ಈ ಪ್ರಶ್ನೆಯನ್ನು ಓದಿದರೆ ನಿಮಗೆ ಆಶ್ಚರ್ಯವಾಗಬಹುದು. ಇದು ಯಾವ ನದಿ ಅಂತ ಗೊತ್ತಾದ್ರೂ ನೀವು ಆಶ್ಚರ್ಯ ಪಡಬಹುದು?. ಇದರ ಬಗ್ಗೆ ಯಾರಿಗೂ ತಿಳಿದಿಲ್ಲ. ಸರ್ಕಾರಿ ಅಥವಾ ಬ್ಯಾಂಕ್ ಪರೀಕ್ಷೆಗಳಿಗಳಲ್ಲಿ ಇಂಥ ಪ್ರಶ್ನೆಗಳನ್ನು ಕೇಳಲಾಗುತ್ತೆ. ಈ ಪ್ರಶ್ನೆಗೆ ಉತ್ತರವನ್ನು ತಿಳಿದುಕೊಳ್ಳುವುದು ಅವಶ್ಯಕ.
ಈ ನದಿ ಬೇರೆ ಯಾವುದು ಅಲ್ಲ, ಅದೇ ಬ್ರಹ್ಮಪುತ್ರ ನದಿ. ಈ ನದಿಯನ್ನು ಪುರುಷ ನದಿ ಎಂದು ಕರೆಯಲಾಗುತ್ತದೆ. ಬ್ರಹ್ಮಪುತ್ರ ನದಿಯು ಪುರಾಣದೊಂದಿಗೆ ಸಂಬಂಧಿಸಿದೆ. ಇದರಲ್ಲಿ ಹಿಂದೂ ದೇವರು ಬ್ರಹ್ಮ ನದಿಗೆ ಜನ್ಮ ನೀಡಿದನು. ಬ್ರಹ್ಮಪುತ್ರ ಎಂಬ ಹೆಸರು ಸಂಸ್ಕೃತದಲ್ಲಿ “ಬ್ರಹ್ಮನ ಮಗ” ಎಂದರ್ಥ. ಅದಕ್ಕಾಗಿಯೇ ಇದನ್ನು ಪುರುಷ ನದಿ ಎಂದು ಕರೆಯಲಾಗುತ್ತದೆ.
ವೇದಗಳು ಮತ್ತು ಪುರಾಣಗಳ ಪ್ರಕಾರ, ಬ್ರಹ್ಮಪುತ್ರ ನದಿಯು ಬ್ರಹ್ಮ ದೇವರ ಮಗ ಮತ್ತು ಅಮೋಘ ಋಷಿ ಎಂದು ನಂಬಲಾಗಿದೆ. ಅಮೋಘ ಋಷಿ, ಶಾಂತನುವಿನ ಪತ್ನಿ. ಬ್ರಹ್ಮ ಆಕೆ ಸೌಂದರ್ಯಕ್ಕೆ ಮರುಳಾಗಿದ್ದನು. ಇದು ಗಂಡು ಮಗುವಿನ ಜನನಕ್ಕೆ ಕಾರಣವಾಗಿತ್ತು. ಇದು ಅಮೋಘ ಋಷಿಯನ್ನು ನಿರಾಸೆಗೊಳಿಸಿತ್ತು.
ಇದ್ರಿಂದ ಮಗ ನೀರಿನಂತೆ ಕೆಳಗೆ ಇಳಿಯಿತು ಎಂದು ನಂಬಲಾಗಿದೆ. ಬ್ರಹ್ಮನಿಂದ ಜನಿಸಿದ ಮಗುವಾದ ಕಾರಣ ಅದಕ್ಕೆ ಬ್ರಹ್ಮಪುತ್ರ ಎಂದು ಹೆಸರಿಡಲಾಯಿತು. ಬ್ರಹ್ಮಪುತ್ರ ಭಾರತದಲ್ಲಿ ಗಂಡು ನದಿಯಾಗಿರುವ ಏಕೈಕ ನದಿಯಾಗಿದೆ. ಭಾರತದಲ್ಲಿ ಈ ನದಿಯ ಉದ್ದ 2900 ಕಿಲೋಮೀಟರ್. ಟಿಬೆಟ್‌ನಲ್ಲಿರುವ ಮಾನಸ ಸರೋವರ ಈ ನದಿಯ ಮೂಲವಾಗಿದೆ. ಇದನ್ನು ಟಿಬೆಟ್‌ನಲ್ಲಿ ತ್ಸಾಂಗ್ಪೋ ಎಂದೂ ಕರೆಯುತ್ತಾರೆ.
ಬ್ರಹ್ಮಪುತ್ರ ನದಿಯು ವಿಶ್ವದ ಒಂಬತ್ತನೇ ಅಗಲವಾದ ನದಿಯಾಗಿದೆ. ದೇಶದ ಮೂರನೇ ಅತಿ ದೊಡ್ಡ ನದಿಯಾಗಿದೆ. ಅಸ್ಸಾಂನಲ್ಲಿ ಈ ನದಿಯ ಮಂಜುಲಿ ಎಂಬ ದೊಡ್ಡ ದ್ವೀಪವನ್ನು ಸೃಷ್ಟಿಸಿದೆ. ಬ್ರಹ್ಮಪುತ್ರ ನದಿಯನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಅರುಣಾಚಲ ಪ್ರದೇಶದಲ್ಲಿ ಈ ನದಿಯನ್ನು ದಿಹ್ ಮತ್ತು ಅಸ್ಸಾಂನಲ್ಲಿ ಬ್ರಹ್ಮಪುತ್ರ ಎಂದು ಕರೆಯಲಾಗುತ್ತದೆ. ಇನ್ನು ಚೀನಾದಲ್ಲಿ ಈ ನದಿಯನ್ನು ಯಾ-ಲು-ತ್ಸಾಂಗ್-ಪು, ಚಿಯಾಂಗ್ ಮತ್ತು ಯರ್ಲುಂಗ್ ಜಗಂಬೋ ಜಿಯಾಂಗ್ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ.