ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ದಿನವೇ ಡೊನಾಲ್ಡ್ ಟ್ರಂಪ್ ಅವರು 8 ಪ್ರಮುಖ ನೀತಿಗಳಿಗೆ ಸಹಿ ಹಾಕಿದ್ದಾರೆ. ಈ ಎಂಟು ನೀತಿಗಳು ಅಮೆರಿಕದ ಮೇಲೆ ಹಾಗೂ ವಿಶ್ವದ ವಿವಿಧ ರಾಷ್ಟ್ರಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ವಿಚಾರವಾಗಿ ಭಾರೀ ಚರ್ಚೆ ನಡೆದಿದೆ. ತೆರಿಗೆ ನೀತಿಯ ಬಗ್ಗೆ ಡೊನಾಲ್ಡ್ ಟ್ರಂಪ್ ಅವರು ಮಾತನಾಡುತ್ತಿರುವುದು ಭಾರತ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಸಣ್ಣ ನಡುಕವನ್ನೂ ಸಹ ಸೃಷ್ಟಿ ಮಾಡಿದೆ. ಇಷ್ಟಕ್ಕೂ ಡೊನಾಲ್ ಟ್ರಂಪ್ ಯಾವುದಕ್ಕೆಲ್ಲ ಸಹಿ ಹಾಕಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿವೆ ಎನ್ನುವ ಪ್ರಮುಖ ಮಾಹಿತಿ ಇಲ್ಲಿದೆ.
47ನೇ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ಸ್ವೀಕರಿಸಿದ ಮೇಲೆ ಘರ್ಜನೆ ಶುರು ಮಾಡಿಕೊಂಡಿದ್ದಾರೆ. ಇದು ಅಮೆರಿಕಗೆ ಸುವರ್ಣ ಯುಗವಾಗಿದ್ದು. ಅಮೆರಿಕವನ್ನು ಅವನತಿಯಿಂದ ರಕ್ಷಿಸಲಾಗಿದೆ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. ಅವರ ಮೊದಲ ದಿನದ ಕೆಲಸವೇ ಕೋಟ್ಯಾಂತರ ಜನರಿಗೆ ಅಚ್ಚರಿಯನ್ನು ಉಂಟು ಮಾಡಿದರೆ. ಇಷ್ಟೇ ಜನರಿಗೆ ನಡುಕವನ್ನೂ ಉಂಟು ಮಾಡಿದೆ. ಹಾಗಾದರೆ ಡೊನಾಲ್ಡ್ ಟ್ರಂಪ್ ಅವರು ತೆಗೆದುಕೊಂಡಿರುವ ಪ್ರಮುಖ ನಿರ್ಧಾರಗಳು ಯಾವುವು, ಯಾಕೆ ಆ ನಿರ್ಧಾರಗಳ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ ಎನ್ನುವ ವಿವರ ನೋಡೋಣ..
ಅಮೆರಿಕವನ್ನು ವಿಶ್ವದ ದೊಡ್ಡಣ್ಣ ಅಂತಲೇ ಕರೆಯಲಾಗುತ್ತದೆ. ಈ ಸೂಪರ್ ಪವರ್ ರಾಷ್ಟ್ರಕ್ಕೆ ಇದೀಗ ಸೂಪರ್ ಪವರ್ ಅಧ್ಯಕ್ಷರು ಬಂದಿದ್ದು. ವಿಶ್ವದ ಕೆಲವು ರಾಷ್ಟ್ರಗಳು ಅಕ್ಷರಶಃ ಆತಂಕಕ್ಕೆ ಒಳಗಾಗಿವೆ. ಇದಕ್ಕೆ ಅಮೆರಿಕೆ ನೂತನ ಅಧ್ಯಕ್ಷ ಟ್ರಂಪ್ ಅವರ ತೆರಿಗೆ ನೀತಿ. ಟ್ರಂಪ್ ಅವರು ಅಮೆರಿಕದಲ್ಲಿ ವಲಸೆ ನೀತಿ ತಡೆ, ಇಂಧನ ನೀತಿ ಹಾಗೂ ರಾಷ್ಟ್ರೀಯ ಭದ್ರತೆಯಂತಹ ವಿಷಯಗಳನ್ನು ಆದ್ಯತೆಯ ವಿಷಯಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲು ಈ ವಿಷಯಗಳ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಮುಂದುವರಿದು ಅವರು ತೆರಿಗೆಯ ಮೇಲೂ ಕಣ್ಣಾಕಿದ್ದಾರೆ.
ಟ್ರಂಪ್ 8 ಆದೇಶಗಳಿಗೆ ಸಹಿ ಹಾಕಿದ್ದಾರೆ. ಇದರಲ್ಲಿ ಹಿಂದಿನ ಅಧ್ಯಕ್ಷ ಜೋ ಬೈಡನ್ ಅವರ ಅವಧಿಯಲ್ಲಿ ತೆಗೆದುಕೊಳ್ಳಲಾಗಿದ್ದ ಪ್ರಮುಖ ನಿರ್ಧಾರಗಳನ್ನು ಹಿಂಪಡೆದಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಓವಲ್ ಕಚೇರಿ (ಅಮೆರಿಕ ಸರ್ಕಾರಿ ಕಚೇರಿ)ಗೆ ಪ್ರವೇಶ ಮಾಡುತ್ತಿದ್ದಂತೆಯೇ 2021ರಲ್ಲಿ ಯುಎಸ್ ಕ್ಯಾಪಿಟಲ್ ಗಲಭೆಯಲ್ಲಿ ಆರೋಪಿಗಳಾಗಿರುವ 1,500 ಜನರಿಗೆ ಕೇಸ್ನಿಂದ ಮುಕ್ತಿ ನೀಡಲಾಗಿದೆ. ಈ ಗಲಭೆ ಟ್ರಂಪ್ ಈ ಹಿಂದೆ ಅಧಿಕಾರ ಕಳೆದುಕೊಂಡ ಸಂದರ್ಭದಲ್ಲಿ ನಡೆದಿತ್ತು.
ತೆರಿಗೆ ಭೀತಿ! ಭಾರತವೂ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಿಗೆ ಈಗ ಇರುವ ಪ್ರಮುಖ ಆತಂಕವೆಂದರೆ ಟ್ರಂಪ್ ಎಲ್ಲಿ ಹೊಸ ತೆರಿಗೆ ನೀತಿಯನ್ನು ಜಾರಿ ಮಾಡುತ್ತಾರೋ ಎನ್ನುವುದು. ಯಾಕೆಂದರೆ ಈಗಾಗಲೇ ಡೊನಾಲ್ಡ್ ಟ್ರಂಪ್ ಅವರು, ಫೆಬ್ರವರಿ 1ರ ಒಳಗೆ ಮೆಕ್ಸಿಕೊ ಹಾಗೂ ಕೆನಡಾದ ಮೇಲೆ ಬರೋಬ್ಬರಿ ಶೇ 25ರಷ್ಟರ ವರೆಗೆ ತೆರಿಗೆ ಹಾಕುವ ಸುಳಿವನ್ನ ಕೊಟ್ಟಿದ್ದಾರೆ. ಅಲ್ಲದೆ ಚೀನಾ, ಮೆಕ್ಸಿಕೊ ಹಾಗೂ ಕೆನಡಾ ದೇಶಗಳೊಂದಿಗೆ ತೆರಿಗೆ ಹಾಗೂ ವ್ಯಾಪಾರ ಪದ್ಧತಿಯನ್ನು ಪರಿಶೀಲನೆ ಮಾಡಿ ಅಂತ ರಾಜ್ಯಗಳಿಗೆ ನಿರ್ದೇಶನ ನೀಡಿದ್ದಾರೆ. ಇದು ಭಾರತದ ಆತಂಕಕ್ಕೂ ಕಾರಣವಾಗಿದೆ. ಭಾರತದ ತೆರಿಗೆ ನೀತಿಯ ಬಗ್ಗೆ ಟ್ರಂಪ್ ಮೊದಲಿನಿಂದಲೂ ಅಸಮಾಧಾನ ಇದೆ. ಟ್ರಂಪ್ ಪ್ರಮುಖ ನಿರ್ಧಾರಗಳ ವಿವರ: ಟ್ರಂಪ್ ಅವರು ಅಮೆರಿಕ – ಮೆಕ್ಸಿಕೋ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಅಲ್ಲದೆ ವಿದೇಶಿ ಕ್ರಿಮಿನಲ್ಗಳ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿಯೂ ಅವರು ಹೇಳಿದ್ದಾರೆ. ಅಮೆರಿಕದಲ್ಲಿ
ಶಾಶ್ವತವಾಗಿ ನೆಲಸದವರ ಮಕ್ಕಳಿಗೆ ಸಿಗುತ್ತಿದ್ದ ಜನ್ಮಸಿದ್ಧ ಪೌರತ್ವವ ತಡೆಗೆ ಸಹಿ ಹಾಕಿದ್ದಾರೆ. ಇನ್ನು ಎಲ್ಲರಿಗೂ ತಿಳಿದಿರುವಂತೆ ಅವರು ಅಕ್ರಮ ಹಾಗೂ ಯಾವುದೇ ದಾಖಲೆಗಳಿಲ್ಲದ ವಲಸಿಗರ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಅಮೆರಿಕದವರಿಗೆ ತೊಂದರೆ ಕೊಡುವ ಅಕ್ರಮ ವಲಸಿಗರಿಗೆ ಮರಣದಂಡನೆ ವಿಧಿಸುವ ನಿಟ್ಟಿನಲ್ಲೂ ಚರ್ಚೆ ನಡೆದಿದೆ. ಈ ಸಂಬಂಧ ಅವರು ನ್ಯಾಯ ಇಲಾಖೆಗೆ ನಿರ್ದೇಶನ ನೀಡಿದ್ದಾರೆ ಎಂದು ವರದಿಯಾಗಿದೆ.