ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟಿ ಸಾಯಿ ಪಲ್ಲವಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ತಂಡೆಲ್ ನಿರ್ದೇಶಕ ಚಂದೂ ಮೊಂಡೆಟಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಜನಪ್ರಿಯ ನಟಿ ಕೆಲ ಸಮಯದಿಂದ ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದರೂ ಕೂಡಾ, ಇತ್ತೀಚೆಗೆ ಮುಂಬೈನಲ್ಲಿ ನಡೆದ ಟ್ರೇಲರ್ ರಿಲೀಸ್ ಈವೆಂಟ್ಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಈ ವಿಷಯಕ್ಕೆ ನಿರ್ದೇಶಕರು ಪ್ರತಿಕ್ರಿಯಿಸಿದ್ದಾರೆ.
“ನಟಿ ಸಾಯಿ ಪಲ್ಲವಿ ಕಳೆದ ಕೆಲ ದಿನಗಳಿಂದ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದಾರೆ. ಅದಾಗ್ಯೂ, ಅವರು ಚಿತ್ರಕ್ಕೆ ಸಂಬಂಧಿಸಿದ ಹಲವು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ಅವರು ಮತ್ತಷ್ಟು ವೀಕ್ ಆಗಿದ್ದಾರೆ.
ವೈದ್ಯರು ಅವರಿಗೆ ಬೆಡ್ ರೆಸ್ಟ್ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಕನಿಷ್ಠ ಎರಡು ದಿನಗಳಾದರೂ ವಿಶ್ರಾಂತಿ ಪಡೆಯಲೇಬೇಕಿದೆ. ಹಾಗಾಗಿಯೇ ಅವರು ಮುಂಬೈನಲ್ಲಿ ನಡೆದ ಟ್ರೇಲರ್ ರಿಲೀಸ್ ಈವೆಂಟ್ಗೆ ಬರಲು ಸಾಧ್ಯವಾಗಲಿಲ್ಲ” ಎಂದು ತಂಡೆಲ್ ನಿರ್ದೇಶಕ ಚಂದು ಮೊಂಡೆಟಿ ಮಾಹಿತಿ ನೀಡಿದರು.