ಕ್ಯಾನ್ಸರ್ ಪೀಡಿತ ಮಕ್ಕಳ ಮುಖದಲ್ಲಿ ನಗು ಮೂಡಿಸಿದ ನಾಗ ಚೈತನ್ಯ-ಶೋಭಿತಾ

ಕ್ಯಾನ್ಸರ್ ಪೀಡಿತ ಮಕ್ಕಳ ಮುಖದಲ್ಲಿ ನಗು ಮೂಡಿಸಿದ ನಾಗ ಚೈತನ್ಯ-ಶೋಭಿತಾ

ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ಇತ್ತೀಚೆಗಷ್ಟೆ ವಿವಾಹವಾದರು. ಇದೀಗ ಈ ಜೋಡಿ ಕೆಲ ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಇತ್ತೀಚೆಗಷ್ಟೆ ಈ ನವ ದಂಪತಿ ಕ್ಯಾನ್ಸರ್ ಪೀಡಿತ ಮಕ್ಕಳೊಂದಿಗೆ ಸಮಯ ಕಳೆದರು. ಅವರ ಮುಖದಲ್ಲಿ ನಗು ಮೂಡುವಂತೆ ಮಾಡಿದರು.

ನಟ ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ. ಇವರ ವಿವಾಹ ಹಲವು ಬೇರೆ ಬೇರೆ ಕಾರಣಗಳಿಗಾಗಿ ಭಾರಿ ಸುದ್ದಿಯಾಗಿತ್ತು. ಇದೀಗ ಈ ಜೋಡಿ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ.

ಹೈದರಾಬಾದ್​ನಲ್ಲಿರುವ ಸೇಂಟ್ ಜೂಡ್ ಇಂಡಿಯಾ ಚಿಲ್ಡ್ರನ್ ಸೆಂಟರ್​ಗೆ ಭೇಟಿ ನೀಡಿದ್ದ ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ, ಅಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳೊಂದಿಗೆ ದಿನ ಕಳೆದರು.

ಕ್ಯಾನ್ಸರ್ ಪೀಡಿತ ಮಕ್ಕಳೊಡನೆ ಬೆರೆತ ಈ ದಂಪತಿಗಳು ಅವರೊಡನೆ ಆಟವಾಡಿದ್ದಾರೆ. ನಾಗ ಚೈತನ್ಯ ಅಂತೂ ಡ್ಯಾನ್ಸ್ ಮಾಡಿ ಮಕ್ಕಳನ್ನು ರಂಜಿಸಿದ್ದಾರೆ. ಹಾಡುಗಳನ್ನು ಹಾಡಿದ್ದಾರೆ. ಎಲ್ಲರೂ ಒಟ್ಟಿಗೆ ಸೇರಿ ಆಟ ಆಡಿ ಸಂಭ್ರಮಿಸಿದ್ದಾರೆ.

ಕ್ಯಾನ್ಸರ್ ಸೆಂಟರ್​ನ ಮಕ್ಕಳು ಸಹ ತಮ್ಮ ಪ್ರತಿಭೆಯನ್ನು ನಾಗ ಚೈತನ್ಯ ಮತ್ತು ಶೋಭಿತಾಗೆ ತೋರಿಸಿದ್ದಾರೆ. ನವ ದಂಪತಿ ಎದುರು ಡ್ಯಾನ್ಸ್ ಮಾಡಿದ್ದಾರೆ, ಹಾಡುಗಳನ್ನು ಹಾಡಿದ್ದಾರೆ. ಆಶುಭಾಷಣಗಳನ್ನು ಮಾಡಿದ್ದಾರೆ.

ಕ್ಯಾನ್ಸರ್ ಕೇಂದ್ರದ ಸಿಬ್ಬಂದಿ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಅವರನ್ನು ಪ್ರೀತಿಯಿಂದ ಸ್ವಾಗತಿಸಿ, ಅವರಿಗೆ ಕ್ಯಾನ್ಸರ್ ಪೀಡಿತ ಮಕ್ಕಳ ಕಷ್ಟಗಳ ಬಗ್ಗೆ ಮಾಹಿತಿ ನೀಡಿದರು. ಅವರ ಆರೈಕೆಯ ಬಗ್ಗೆ ಮಾಹಿತಿ ನೀಡಿದರು.

ಕ್ಯಾನ್ಸರ್ ಸೆಂಟರ್​ನ ಸಿಬ್ಬಂದಿಯೊಂದಿಗೂ ಮಾತುಕತೆ ನಡೆಸಿದ ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ. ಸೆಂಟರ್​ನ ಮಕ್ಕಳ ಬಗ್ಗೆ ಮಾಹಿತಿ ಪಡೆದಿದ್ದಲ್ಲದೆ, ಕ್ಯಾನ್ಸರ್ ಸೆಂಟರ್​ಗೆ ಹಣಕಾಸು ದೇಣಿಗೆಯನ್ನು ಸಹ ನಿಡಿದ್ದಾರೆ. ದಂಪತಿಯ ವಿಶಾಲ ಮನಸ್ಸನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

Leave a Reply

Your email address will not be published. Required fields are marked *