CBSE ಬೋರ್ಡ್ ಎಕ್ಸಾಂ ವರ್ಷಕ್ಕೆ ಎರಡು ಬಾರಿ ನಡೆಸಲು ಯೋಜನೆ

CBSE ಬೋರ್ಡ್ ಎಕ್ಸಾಂ ವರ್ಷಕ್ಕೆ ಎರಡು ಬಾರಿ ನಡೆಸಲು ಯೋಜನೆ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಅನುಗುಣವಾಗಿ ವರ್ಷಕ್ಕೆ ಎರಡು ಬಾರಿ 10 ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ನಡೆಸಲು ಯೋಜಿಸಿದೆ. ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಕುರಿತು ಕರಡು ನೀತಿಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲಾಗಿದೆ. ಈ ಬಗ್ಗೆ ಎಲ್ಲರಿಂದ ಅಭಿಪ್ರಾಯ ಕೇಳಲಾಗಿದೆ. ಈ ಕರಡು ನೀತಿಯನ್ನು CBSE ಮಂಗಳವಾರ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ.

ಮಾರ್ಚ್ 9 ರೊಳಗೆ ಕರಡು ನೀತಿಯ ಬಗ್ಗೆ ಎಲ್ಲಾ ಪಾಲುದಾರರಿಂದ ಪ್ರತಿಕ್ರಿಯೆ ಕೇಳಲಾಗಿದೆ ಎಂದು ಶಿಕ್ಷಣ ತಜ್ಞ ದೇವ್ ಶರ್ಮಾ ಹೇಳಿದ್ದಾರೆ. ಸಿಬಿಎಸ್ಇ ಸ್ವೀಕರಿಸುವ ಸಲಹೆಗಳ ಆಧಾರದ ಮೇಲೆ ಕರಡು ನೀತಿಯನ್ನು ಜಾರಿಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಈಗಿರುವ ಕರಡು ನೀತಿಯ ಪ್ರಕಾರ ಫೆಬ್ರವರಿ 15 ರ ನಂತರ ಬೋರ್ಡ್ ಪರೀಕ್ಷೆಗಳು ಪ್ರಾರಂಭವಾಗುತ್ತವೆ.

ಹೇಗಿರುತ್ತವೆ ಪರೀಕ್ಷೆಗಳು?: 10ನೇ ತರಗತಿ ಪರೀಕ್ಷೆಯನ್ನು ಎರಡು ಬಾರಿ ನಡೆಸಲು ವಿಷಯವಾರು ವರ್ಗೀಕರಣ ಮಾಡಲಾಗಿದೆ ಎಂದು ತಜ್ಞ ಶರ್ಮಾ ತಿಳಿಸಿದ್ದಾರೆ. ಇದರ ಪ್ರಕಾರ ಹಿಂದಿ, ಇಂಗ್ಲಿಷ್, ಐಚ್ಛಿಕ (3 ವಿಷಯಗಳು), ಪ್ರಾದೇಶಿಕ ಮತ್ತು ವಿದೇಶಿ ಭಾಷೆಗಳನ್ನು ಹೊರತುಪಡಿಸಿ, ವಿಷಯಗಳನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದೆ. NEP-2020 ರ ಪ್ರಕಾರ, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳನ್ನು ಒತ್ತಡದಿಂದ ಹೊರಗಿಡಲು ಈ ಪ್ರಯತ್ನವನ್ನು ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *