ವಿಶ್ವದಾದ್ಯಂತ ಬಳಕೆದಾರರನ್ನು ಹೊಂದಿರುವ ಎಕ್ಸ್ಗೆ ಇದೀಗ ಸಂಕಷ್ಟ ಎದುರಾಗಿದೆ. ಎಕ್ಸ್ನ (ಹಳೆಯ ಟ್ವಿಟ್ಟರ್) ಮೇಲೆ ದಾಳಿ ಆಗುತ್ತಿರುವುದರಿಂದಲೇ ಇದು ಸ್ಲೋ ಆಗುತ್ತಿರುವುದಾಗಿ ಎಕ್ಸ್ನ ಮಾಲೀಕ ಹಾಗೂ ಬಿಲೇನಿಯರ್ ಎಲಾನ್ ಮಸ್ಕ್ ಅವರು ಹೇಳಿದ್ದಾರೆ. ಇದೇ ಕಾರಣಕ್ಕೆ ಪದೇ ಪದೇ ಎಕ್ಸ್ ಕೈಕೊಡುತ್ತಿರುವುದಾಗಿ ಮಸ್ಕ್ ಹೇಳಿದ್ದು. ಈ ವಿಚಾರವಾಗಿ ಮತ್ತೊಂದು ಶಾಕಿಂಗ್ ಹೇಳಿಕೆಯನ್ನೂ ಕೊಟ್ಟಿದ್ದಾರೆ. ಈಚೆಗೆ ಎಲಾನ್ ಮಸ್ಕ್ ಅವರ ಪ್ರಭಾವ ಹೆಚ್ಚಾಗುತ್ತಿದೆ. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಮೇಲೆ ಅಮೆರಿಕದಲ್ಲಿ ಇವರ ಪ್ರಭಾವ ಹೆಚ್ಚಾಗಿದೆ. ಈ ರೀತಿ ಇರುವಾಗಲೇ ಎಕ್ಸ್ ಅನ್ನು ಗುರಿಯಾಗಿಸಿಕೊಳ್ಳಲಾಗಿದೆ.
ಭಾರತವೂ ಸೇರಿದಂತೆ ವಿಶ್ವದಾದ್ಯಂತ ಕೋಟ್ಯಾಂತರ ಜನ ಎಕ್ಸ ಬಳಕೆ ಮಾಡುತ್ತಾರೆ. ಆದರೆ, ಎಕ್ಸ್ನಲ್ಲಿ ಏಕಕಾಲಕ್ಕೆ ಸಮಸ್ಯೆ ಎದುರಾಗಿದ್ದರಿಂದ ಅಡಚಣೆ ಉಂಟಾಗಿತ್ತು. ಇನ್ನು ಈ ನಡುವೆ ಉಕ್ರೇನ್ – ರಷ್ಯಾ ಯುದ್ಧ ಇನ್ನೇನು ಮುಕ್ತಾಯವಾಗಿದೆ ಎನ್ನುವಾಗಲೇ ಇನ್ನಷ್ಟು ಮುಂದಾಕ್ಕೆ ಹೋಗುತ್ತಿದೆ. ಈ ಬೆಳವಣಿಗೆ ನಡುವೆ ಎಕ್ಸ್ನ ಮೇಲೆ ದಾಳಿ ನಡೆದಿದೆ. ಈ ಬಗ್ಗೆ ಮಸ್ಕ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್ನ ಮೇಲೆ ಉಕ್ರೇನ್ ಪ್ರದೇಶದಿಂದ ಬೃಹತ್ ಸೈಬರ್ ದಾಳಿ ನಡೆಸಲಾಗಿದೆ.
ಇದೇ ಕಾರಣಕ್ಕೆ ಸೋಮವಾರ ಎಕ್ಸ್ ಮೂರು ಬಾರಿ ಡೌನ್ ಆಗಿತ್ತು ಎಂದು ಅವರು ವಿವರಿಸಿದ್ದಾರೆ. ಉಕ್ರೇನ್ – ರಷ್ಯಾ ಯುದ್ಧದಲ್ಲಿ ಅಮೆರಿಕ ಪ್ರಮುಖ ಪಾತ್ರ ವಹಿಸಿದೆ. ಇನ್ನು ದೊಡ್ಡಣ್ಣನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆತ್ಮೀಯ ಹಾಗೂ ಪ್ರಭಾವಿ ಎಲಾನ್ ಮಸ್ಕ್ ಅವರ ಪ್ರತಿಷ್ಠಿತ ಸಂಸ್ಥೆ ಎಕ್ಸ್ನ ಮೇಲೆ ಇದೀಗ ದಾಳಿ ಆಗುತ್ತಿದ್ದು ಒಂದಕ್ಕೊಂದು ಸಂಬಂಧವಿದೆ ಎಂದು ಹೇಳಲಾಗುತ್ತಿದೆ. ಸೋಮವಾರ ಟ್ವಿಟ್ಟರ್ (ಎಕ್ಸ್) ಹಲವು ಬಾರಿ ಕೈಕೊಟ್ಟಿತ್ತು. ಅಲ್ಲದೆ ಮಂಗಳವಾರ ಬೆಳಿಗ್ಗೆ ಸಹ ಸ್ಲೋ ಆಗಿತ್ತು. ಸೋಮವಾರ ಮೂರು ಬಾರಿ ಆಫ್ಲೈನ್ ಆಗಿದೆ. ಆಫ್ಲೈನ್ ಸರಿಪಡಿಸುತ್ತಿದ್ದಂತೆಯೇ ಕ್ರ್ಯಾಶ್ ಆಗಿತ್ತು. ಇದೀಗ ಎಕ್ಸ್ಗೆ ಏನು ಸಂಕಷ್ಟ ಎದುರಾಗಿದೆ ಎನ್ನುವ ಬಗ್ಗೆ ಎಲಾನ್ ಮಸ್ಕ್ ಅವರು ವಿವರಿಸಿದ್ದಾರೆ. ಏನಾಯಿತು ಎನ್ನುವ ಬಗ್ಗೆ ನಮಗೆ ನಿಖರವಾಗಿ ತಿಳಿಯಲಿಲ್ಲ. ಆದರೆ ಉಕ್ರೇನ್ನ IP ವಿಳಾಸದಿಂದ X ಅನ್ನು ಹಾಳು ಮಾಡುವ ಅಥವಾ ಮುಗಿಸುವ ಪ್ರಯತ್ನಗಳನ್ನು ಮಾಡಲಾಗಿದ್ದು. ಇದಕ್ಕಾಗಿ ಬೃಹತ್ ಸೈಬರ್ ದಾಳಿಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಎಕ್ಸ್ನ ಮೇಲೆ ಇತ್ತೀಚಿನ ದಿನಗಳಲ್ಲಿ ಸೈಬರ್ ದಾಳಿಗಳು ಹೆಚ್ಚಾಗುತ್ತಿವೆ. ಆದರೆ ಸೋಮವಾರ ಭಾರೀ ಪ್ರಮಾಣದಲ್ಲಿ ಸೈಬರ್ ದಾಳಿ ನಡೆಸಲಾಗಿದೆ. ಒಂದು ದೊಡ್ಡ ಸಂಘಟಿತ ಗುಂಪು ಇಲ್ಲವೇ ಹಲವರು ಏಕಕಾಲಕ್ಕೆ ಇದರಲ್ಲಿ ತೊಡಗಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಪರಿಸ್ಥಿತಿ ತಿಳಿಯಾಗಿದೆ ಎಂದು ಅವರು ಹೇಳಿದ್ದಾರೆ. ಟೆಲಿಗ್ರಾಮ್ ಚಾನೆಲ್ ವರದಿ ಮಾಡಿರುವಂತೆ ಪ್ಯಾಲೇಸ್ಟಿನಿಯನ್ ಪರ ಇರುವ ಹ್ಯಾಕರ್ ಗುಂಪು ಡಾರ್ಕ್ ಸ್ಟಾರ್ಮ್ ತಂಡವು X ಮೇಲಿನ ಸೈಬರ್ ದಾಳಿ ಮಾಡಿರುವುದಾಗಿ ಒಪ್ಪಿಕೊಂಡಿದೆ ಎಂದು ಹೇಳಲಾಗಿದೆ.