ಕೊರೊನಾ ವೈರಸ್‌ನಿಂದ ಇಡೀ ಜಗತ್ತು ನಲುಗಿ ಹೋಗಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಮತ್ತೊಂದು ಸಾಂಕ್ರಾಮಿಕ ರೋಗ ಬರುವುದು ಖಚಿತ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಮಹಾನಿರ್ದೇಶಕರಾದ ಟೆಟ್ರೊಸ್ ಅಧಾನೊಮ್ ಫೆಬ್ರೆಯೆಸಸ್ ಎಚ್ಚರಿಸಿದ್ದಾರೆ.

WHO ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಜಾಗತಿಕ ಆರೋಗ್ಯ ಬಿಕ್ಕಟ್ಟು ಯಾವುದೇ ಸಮಯದಲ್ಲಿ ಅಂದರೆ 20 ವರ್ಷಗಳ ನಂತರವಾಗಲಿ ಅಥವಾ ನಾಳೆಯೇ ಆಗಲಿ ಸಂಭವಿಸಬಹುದು.ಅದಕ್ಕೂ ನಾವು ಸಿದ್ಧರಾಗಿರಬೇಕು. ಇದು ಸೈದ್ಧಾಂತಿಕ ಅಪಾಯವಲ್ಲ; ಇದು ಸಾಂಕ್ರಾಮಿಕ ರೋಗಶಾಸ್ತ್ರದ ಖಚಿತತೆ ಎಂದು ಒತ್ತಿ ಹೇಳಿದರು.ಈಗಾಗಲೇ ಕೋವಿಡ್-19 ಸಾಂಕ್ರಾಮಿಕದಿಂದ ಏನೇನು ಆಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಮಹಾಮಾರಿಯಿಂದಾಗಿ ಬರೋಬ್ಬರಿ 7 ಮಿಲಿಯನ್ ಜನ ಸಾವನ್ನಪ್ಪಿದ್ದಾರೆ. ಆದರೆ ನಿಜವಾದ ಸಾವಿನ ಸಂಖ್ಯೆ 20 ಮಿಲಿಯನ್ ಎಂದು ನಾವು ಅಂದಾಜಿಸುತ್ತೇವೆ. ಜೊತೆಗೆ ಮಾನವನ ಜೀವಹಾನಿಯ ಜೊತೆಗೆ ಸಾಂಕ್ರಾಮಿಕವು ಜಾಗತಿಕ ಆರ್ಥಿಕತೆಯಿಂದ 10 ಟ್ರಿಲಿಯನ್ ಡಾಲರ್‌ಗಳಿಗಿಂತಲೂ ಹೆಚ್ಚು ನಷ್ಟವನ್ನುಂಟು ಮಾಡಿದೆ ಎಂದ್ಧಿದ್ಧಾರೆ.