ಪ್ರಶಾಂತ್ ನೀಲ್-ಜೂನಿಯರ್ ಎನ್‌ಟಿಆರ್ ಚಿತ್ರಕ್ಕೆ ರಿಲೀಸ್ ದಿನಾಂಕ ಫಿಕ್ಸ್.

ಪ್ರಶಾಂತ್ ನೀಲ್-ಜೂನಿಯರ್ ಎನ್ಟಿಆರ್ ಚಿತ್ರಕ್ಕೆ ರಿಲೀಸ್ ದಿನಾಂಕ ಫಿಕ್ಸ್.

ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್‌ಟಿಆರ್ ಸಿನಿಮಾ ಘೋಷಣೆ ಆಗಿ ಕೆಲವು ವರ್ಷಗಳೇ ಕಳೆದು ಹೋಗಿವೆ. ಆದರೆ, ಸಿನಿಮಾ ಇಷ್ಟು ದಿನ ಸೆಟ್ಟೇರಿರಲಿಲ್ಲ. ಈಗ ಚಿತ್ರದ ಶೂಟ್ ಭರದಿಂದ ಸಾಗುತ್ತಿದೆ. ಈಗ ಸಿನಿಮಾದ ರಿಲೀಸ್ ದಿನಾಂಕದ ಬಗ್ಗೆಯೂ ಮಾಹಿತಿ ಹೊರ ಬಿದ್ದಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅಂದಹಾಗೆ ಈ ಸಿನಿಮಾ ವೀಕ್ಷಿಸಬೇಕು ಎಂದರೆ ಇನ್ನೂ ಒಂದು ವರ್ಷಗಳಿಗೂ ಅಧಿಕ ಕಾಲ ನೀವು ಕಾಯಲೇಬೇಕು.

ಪ್ರಶಾಂತ್ ನೀಲ್ ಅವರು ‘ಸಲಾರ್’ ಸಿನಿಮಾ ಬಳಿಕ ಒಂದು ಬ್ರೇಕ್ ಪಡೆದರು. ಅವರು ಮುಂಬರುವ ತಮ್ಮ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡರು. ಅವರು ‘ಸಲಾರ್ 2’ ಎತ್ತಿಕೊಳ್ಳುತ್ತಾರಾ ಅಥವಾ ‘ಕೆಜಿಎಫ್ 3’ ಮಾಡುತ್ತಾರ ಎನ್ನುವ ಪ್ರಶ್ನೆ ಇತ್ತು. ಆದರೆ, ಹಳೆಯ ಕಮಿಟ್‌ಮೆಂಟ್‌ಗಳಲ್ಲಿ ಒಂದಾದ ಜೂನಿಯರ್ ಎನ್‌ಟಿಆರ್ ಜೊತೆಗಿನ ಚಿತ್ರವನ್ನು ಅವರು ಘೋಷಣೆ ಮಾಡಿದರು. ಈ ಸಿನಿಮಾ ೨೦೨೬ರ ಜೂನ್ ೨೫ರಂದು ರಿಲೀಸ್ ಆಗಲಿದೆಈ ಸಿನಿಮಾದ ಟೈಟಲ್ ಏನೆಂಬುದು ಇನ್ನೂ ಬಹಿರಂಗ ಆಗಿಲ್ಲ. ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್‌ನ ಸಿನಿಮಾ ಆದ್ದರಿಂದ #NTRNeelಎಂದು ಚಿತ್ರಕ್ಕೆ ತಾತ್ಕಾಲಿಕವಾಗಿ ಟೈಟಲ್ ಇಡಲಾಗಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರ ಆಗಿರುವುದರಿಂದ ‘ಡ್ರ‍್ಯಾಗನ್’ ಎಂಬ ಇಂಗ್ಲಿಷ್ ಟೈಟಲ್ ಇಡಲಾಗಿದೆ ಎನ್ನುವ ಮಾತು ಕೂಡ ಇದೆ.

Leave a Reply

Your email address will not be published. Required fields are marked *