ಮುಂಬೈ || ದಕ್ಷಿಣದವರನ್ನು ಟೀಕಿಸಲು ಬಂದ ಹಿಂದಿಯವರನ್ನು ಅಲ್ಲೇ ತಡೆದ Genilia

ಮುಂಬೈ || ದಕ್ಷಿಣದವರನ್ನು ಟೀಕಿಸಲು ಬಂದ ಹಿಂದಿಯವರನ್ನು ಅಲ್ಲೇ ತಡೆದ Genilia

ಮುಂಬೈ: ನಟಿ ಜೆನಿಲಿಯಾ ಅವರು ಈಗ ಮುಂಬೈನಲ್ಲಿ ಸೆಟಲ್ ಆಗಿರಬಹುದು. ಹಿಂದಿಯಲ್ಲಿ ಅವರು ಕೆಲವು ಸಿನಿಮಾ ಮಾಡಿರಬಹುದು. ಆದರೆ, ದಕ್ಷಿಣ ಚಿತ್ರರಂಗವನ್ನು ಅವರು ಮರೆತಿಲ್ಲ ಎಂಬುದನ್ನು ನೀವು ಸ್ಪಷ್ಟವಾಗಿ ನೋಡಬಹುದು. ಜೆನಿಲಿಯಾ ಅವರು ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಈಗ ಹಿಂದಿಯ ‘ಸಿತಾರೇ ಜಮೀನ್ ಪರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಇಂದು ರಿಲೀಸ್ ಆಗಿದೆ. ಈ ಸಿನಿಮಾದ ಪ್ರಚಾರದ ವೇಳೆ ಕೆಲವರು ಅವರಿಗೆ ‘ನಿಮಗೆ ದಕ್ಷಿಣದಲ್ಲಿ ಒಳ್ಳೆಯ ಪಾತ್ರ ಸಿಕ್ಕಿಲ್ಲವಲ್ಲ’ ಎಂದು ಹೇಳಲು ಬಂದರು. ಆದರೆ, ಇದನ್ನು ಅವರು ತಳ್ಳಿ ಹಾಕಿದ್ದಾರೆ.

ಜೆನಿಲಿಯಾ ಹುಟ್ಟಿದ್ದು ಮುಂಬೈನಲ್ಲಿ. ಆದರೆ, ಅವರಿಗೆ ಹೆಚ್ಚು ಜನಪ್ರಿಯತೆ ನೀಡಿದ್ದು ದಕ್ಷಿಣದ ಚಿತ್ರರಂಗ. ಅವರು ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು. 2008ರಲ್ಲಿ ರಿಲೀಸ್ ಆದ ಶಿವರಾಜ್ಕುಮಾರ್ ನಟನೆಯ ‘ಸತ್ಯ ಇನ್ ಲವ್’ ಸಿನಿಮಾದಲ್ಲಿ ಬಣ್ಣ ಹಚ್ಚಿದರು. ಈ ಮೂಲಕ ಕನ್ನಡಕ್ಕೆ ಬಂದರು. ಈಗ ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾ ರಿಲೀಸ್ಗೆ ರೆಡಿ ಇದೆ. ಅವರಿಗೆ ದಕ್ಷಿಣದ ಬಗ್ಗೆ ಭಾರೀ ಗೌರವ ಇದೆ.

Leave a Reply

Your email address will not be published. Required fields are marked *