ಇಸ್ಲಾಮಾಬಾದ್: ಮೊನ್ನೆ ಮೊನ್ನೆಯಷ್ಟೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಪಾಕಿಸ್ತಾನವು ನೊಬೆಲ್ ಶಾಂತಿ ಪುರಸ್ಕಾರ ನೀಡುವುದಾಗಿ ಘೋಷಿಸಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಅಮೆರಿಕವು ಇರಾನ್ ಮೇಲೆ ದಾಳಿ ಮಾಡಿದಾಕ್ಷಣ ತನ್ನ ವರಸೆ ಬದಲಿಸಿ ಇರಾನ್ಗೆ ಬೆಂಬಲ ಸೂಚಿಸಿದೆ ಅಮೆರಿಕದ ಕ್ರಮ ತಪ್ಪು ಎಂದು ಹೇಳಿದೆ.

ಪಾಕಿಸ್ತಾನ ಹಾಗೂ ಭಾರತದ ನಡುವೆ ಉದ್ವಿಗ್ನತೆ ಇದ್ದು, ಅಮೆರಿಕವು ಹಲವು ಸಂದರ್ಭಗಳಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಿದೆ. ಮಧ್ಯಸ್ಥಿಕೆವಹಿಸಿ ಇಬ್ಬರ ನಡುವಿನ ವೈಮನಸ್ಸು ಕಡಿಮೆ ಮಾಡಲು ಸಹಕರಿಸಿದೆ. ಆದರೆ ಭಾರತವು ನಮ್ಮಿಬ್ಬರ ನಡುವೆ ಯಾರ ಮಧ್ಯಸ್ಥಿಕೆಯ ಅಗತ್ಯವೂ ಇಲ್ಲ ಎಂದು ಹೇಳುತ್ತಲೇ ಬಂದಿದೆ. ಆದರೆ ಪಾಕಿಸ್ತಾನ ಟ್ರಂಪ್ ಸಹಕಾರ ಪಡೆಯುತ್ತಲೇ ಇದೆ.
ಪಾಕಿಸ್ತಾನವು ಉನ್ನತ ಮಟ್ಟದ ಸಭೆಯನ್ನು ಕರೆದಿದೆ. ಪ್ರಧಾನಿ ಶೆಹಬಾಜ್ ಷರೀಫ್ ಸೋಮವಾರ (ಜೂನ್ 23) ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆಯನ್ನು ಕರೆದಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದು ಅತ್ಯುನ್ನತ ನಾಗರಿಕ-ಮಿಲಿಟರಿ ಸಮಿತಿಯಾಗಿದ್ದು, ಇಸ್ರೇಲ್-ಇರಾನ್ ಸಂಘರ್ಷಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲಾಗುವುದು.