ವಿದೇಶಿಗರಿಗೆ ಭಾರತವೆಂದರೆ ಅದೇನೋ ಸೆಳೆತ. ಭಾರತಕ್ಕೆ ಭೇಟಿ ನೀಡುವ ವಿದೇಶಿಗರು ಇಲ್ಲಿನ ಆಚಾರ ವಿಚಾರ, ಆಹಾರ ರುಚಿ, ಸಂಪ್ರದಾಯಗಳಿಗೆ ಮನಸೋಲುತ್ತಾರೆ. ಕೆಲವರು ಗಟ್ಟಿ ಮನಸ್ಸು ಮಾಡಿ ಇಲ್ಲಿಯೇ ನೆಲೆಸುತ್ತಾರೆ. ಆದರೆ ಇದೀಗ ಅಮೆರಿಕಾದ ಮಹಿಳೆಯೊಬ್ಬಳು ಐಷಾರಾಮಿ ಜೀವನವನ್ನು ತ್ಯಜಿಸಿ ಭಾರತದಲ್ಲಿ ಜೀವನ ಸಾಗಿಸುತ್ತಿದ್ದಾಳೆ. ಕಳೆದ ಕೆಲವು ವರ್ಷಗಳ ಹಿಂದೆ ತಾನು ತೆಗೆದುಕೊಂಡ ನಿರ್ಧಾರದ ಬಗ್ಗೆ ಹೇಳಿಕೊಂಡಿದ್ದಾಳೆ. ಈ ಕಠಿಣ ನಿರ್ಧಾರದ ಹಿಂದಿನ ಕಾರಣ ತಿಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ.

ಭಾರತವು ವೈವಿಧ್ಯತೆಯಿಂದ ಕೂಡಿದ ದೇಶ. ಇಲ್ಲಿ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಆಚಾರ ವಿಚಾರಗಳು, ಸಂಪ್ರದಾಯಗಳು, ಉಡುಗೆ ತೊಡುಗೆ, ಆಹಾರ ಪದ್ಧತಿಗಳಿವೆ. ಆದರೆ ವಿದೇಶಿಗರಿಗೆ ಭಾರತದ ಆಚಾರ ವಿಚಾರ, ಉಡುಗೆ ತೊಡುಗೆಗಳೆಂದರೆ ಬಲು ಇಷ್ಟ. ಹೀಗಾಗಿ ಇಂಡಿಯಾಗೆ ಭೇಟಿಕೊಟ್ಟರೆ ಇಲ್ಲಿನ ಉಡುಗೆ ತೊಡುಗೆಗಳನ್ನು ಇಷ್ಟ ಪಟ್ಟು ಧರಿಸುವುದು ಹಾಗೂ ಆಹಾರಗಳನ್ನು ಸವಿದು ಖುಷಿ ಪಡುತ್ತಾರೆ. ಆದರೆ ಇಲ್ಲೊಬ್ಬ ಅಮೆರಿಕನ್ ಮಹಿಳೆಯು ಕಳೆದ ನಾಲ್ಕು ವರ್ಷಗಳ ಹಿಂದೆ ತನ್ನ ಹುಟ್ಟೂರನ್ನು ತೊರೆದು ಭಾರತಕ್ಕೆ ಬಂದು ನೆಲೆಸಿರುವುದಾಗಿ ಹೇಳಿಕೊಂಡಿದ್ದಾಳೆ. ಈ ಮಹಿಳೆಯ ಹೆಸರು ಕ್ರಿಸ್ಟನ್ ಫಿಷರ್ ತನಗೆ ಭಾರತದ ಯಾಕೆ ಇಷ್ಟ ಎನ್ನುವುದನ್ನು ತಿಳಿಸಿದ್ದು ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾರತ ಇಷ್ಟ ಎನ್ನಲು ವಿದೇಶಿ ಮಹಿಳೆ ಕೊಟ್ಟ ಕಾರಣವಿದು
kristenfischer3 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕ್ರಿಸ್ಟನ್ ಫಿಷರ್ ಈ ವಿಡಿಯೋದಲ್ಲಿ ತಾನು ಭಾರತದಲ್ಲಿ ಅತ್ಯದ್ಭುತವಾಗಿ ಜೀವಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಈ ವಿಡಿಯೋದೊಂದಿಗೆ ನಾನು ಹಾಗೂ ನನ್ನ ಕುಟುಂಬವು ಕಳೆದ ನಾಲ್ಕು ವರ್ಷಗಳ ಹಿಂದೆ ಭಾರತಕ್ಕೆ ಬಂದು ನೆಲೆಸಿದ್ದೇವೆ. ನಾಲ್ಕು ವರ್ಷಗಳಲ್ಲಿ ನಾನು ಇಲ್ಲಿ ಅದ್ಭುತ ಜನರನ್ನು ಭೇಟಿ ಮಾಡಿದ್ದೇನೆ, ಅದ್ಭುತ ಸ್ಥಳಗಳಿಗೆ ಭೇಟಿ ನೀಡಿದ್ದು ಕಣ್ತುಂಬಿಸಿಕೊಂಡಿದ್ದೇನೆ. ಇಲ್ಲಿನ ವಿವಿಧ ಆಹಾರ ಹಾಗೂ ಸವಿರುಚಿಯನ್ನು ಸವಿದ್ದಿದ್ದೇನೆ. ಭಾರತ ನನ್ನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದೆ ಎಂದಿದ್ದಾಳೆ.