ಸುಂದರವಾಗಿ ಕಾಣಬೇಕೆಂಬ ಒತ್ತಡದಿಂದ ಜೀವ ಕಳೆದುಕೊಳ್ಳಬೇಡಿ, ಎಚ್ಚರಿಕೆ ನೀಡಿದ doctor.

ಸುಂದರವಾಗಿ ಕಾಣಬೇಕೆಂಬ ಒತ್ತಡದಿಂದ ಜೀವ ಕಳೆದುಕೊಳ್ಳಬೇಡಿ, ಎಚ್ಚರಿಕೆ ನೀಡಿದ doctor.

ನಟಿ ಶಫಾಲಿ ಝರಿವಾಲ ಅವರ ಸಾವಿನ ಬಗ್ಗೆ ಅನೇಕ ಚರ್ಚೆಗಳು ನಡೆದಿತ್ತು. ಅವರು ಹೃದಯಾಘಾತದಿಂ ಮರಣ ಹೊಂದಿದ್ದು ಎಂಬ ಸುದ್ದಿಗಳು ಹರಡಿತ್ತು. ಆದರೆ ಇದೀಗ ಪೊಲೀಸರ ತನಿಖೆಯಲ್ಲಿ ಮಹತ್ವದ ವಿಚಾರವೊಂದು ಹೊರ ಬಿದ್ದಿದೆ. ಅವರು ತೆಗೆದುಕೊಂಡ ಒಂದು ಇಂಜೆಕ್ಷನ್ನಿಂದ ಅವರ ಜೀವವೇ ಹೋಯಿತು ಎಂದು ಹೇಳಲಾಗಿದೆ. ತನ್ನ ಸೌಂದರ್ಯ ಹೆಚ್ಚಿಸಬೇಕು ಎಂಬ ಒತ್ತಡದಿಂದ, ತಮ್ಮ ಜೀವವನ್ನು ತಾವೇ ನಾಶ ಮಾಡಿಕೊಂಡಿದ್ದಾರೆ. ಆದರೆ ಇಂತಹ ತಪ್ಪುಗಳನ್ನು ನೀವು ಮಾಡಬೇಡಿ ಎಂದು ಮನೋವೈದ್ಯೆ ಡಾ. ರಿಯಾ ಗುಪ್ತಾ ಹೇಳಿದ್ದಾರೆ.

ನಟಿ ಶಫಾಲಿ ಝರಿವಾಲ ಜೂನ್ 27ರಂದು ಸಾವನ್ನಪ್ಪಿದರು. ಈ ಸಾವಿಗೆ ಹಲವು ಕಥೆ ಕಟ್ಟಲಾಗುತ್ತಿದೆ. ನಟಿಯ ಸಾವು ಹೃದಯಾಘಾತದಿಂದ ಸಂಭವಿಸಿದೆಯೆಂದೂ  ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರು ಕೂಡ ತನಿಖೆಯನ್ನು ನಡೆಸಿದ್ದಾರೆ.  ಇದೀಗ ಪೊಲೀಸರ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯಿಂದ ಅಘಾತದ ಸುದ್ದಿ ತಿಳಿದು ಬಂದಿದೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಈ ನಟಿ ನಿಧನ ಹೊಂದುವ ದಿನದಂದು ಕೆಲವು ಮಾತ್ರೆಗಳನ್ನು ತೆಗೆದುಕೊಂಡಿದ್ದರಂತೆ. ಅದೇ ದಿನ ಮಧ್ಯಾಹ್ನ ಅವರು ಆಂಟಿ ಏಜಿಂಗ್ ಡ್ರಗ್ (ವಯಸ್ಸು ಕಡಿಮೆ ಆಗಿರುವಂತೆ ಕಾಣಲು ನೀಡುವ ಔಷಧ) ಇಂಜೆಕ್ಷನ್ ತೆಗೆದುಕೊಂಡಿದ್ದರು ಎಂದು ಹೇಳಲಾಗಿದೆ. ಹಾಗಾದರೆ ಇಂತಹ ಇಂಜೆಕ್ಷನ್ ತೆಗೆದುಕೊಳ್ಳುವುದು ಎಷ್ಟು ಸರಿ? ಇದಕ್ಕೆ ವೈದ್ಯಕೀಯ ಲೋಕದಲ್ಲಿ ಹೇಳೋದೇನು? ಈ ಬಗ್ಗೆ ಫೋರ್ಟಿಸ್ ಆಸ್ಪತ್ರೆಯ ಮನೋವೈದ್ಯೆ ಡಾ. ರಿಯಾ ಗುಪ್ತಾ ಅವರು ಎನ್ಡಿಟಿವಿ ಜತೆಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ಡಾ. ರಿಯಾ ಗುಪ್ತಾ ಅವರು ಹೇಳುವ ಪ್ರಕಾರ, ಸುಂದರವಾಗಿ ಕಾಣಲು ತೆಗೆದುಕೊಳ್ಳುವ ಇಂತಹ ಇಂಜೆಕ್ಷನ್ ಆರೋಗ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು ಒಳ್ಳೆಯದು, ಒಂದು ವೇಳೆ ಸುಂದರವಾಗಿ ಕಾಣಲು ನಮ್ಮ ಜೀವನಶೈಲಿಯನ್ನು ಹೇಗೆ ಸಮತೋಲನಗೊಳಿಸಬಹುದು ಎಂಬುದನ್ನು ಅವರು ತಿಳಿಸಿದ್ದಾರೆ. ಇಂದಿನ ವೇಗದ ಜೀವನದಲ್ಲಿ, ಸಮತೋಲಿತ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮುಖ್ಯ, ಆದರೆ ಇದಕ್ಕಾಗಿ ಹೆಚ್ಚು ಒತ್ತಡ ತೆಗೆದುಕೊಳ್ಳುವ ಅಗತ್ಯ ಇಲ್ಲ. ಮಾನಸಿಕತೆ ಮತ್ತು ಆಲೋಚನೆಯು ನಮ್ಮ ದೈಹಿಕ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಹತಾಶೆ, ಒತ್ತಡ ಅಥವಾ ಆತಂಕದಲ್ಲಿದ್ದಾಗ, ಕಾರ್ಟಿಸೋಲ್ನಂತಹ ಒತ್ತಡದ ಹಾರ್ಮೋನುಗಳು ದೇಹದಲ್ಲಿ ಭಾರವನ್ನು ಹೆಚ್ಚು ಮಾಡುತ್ತದೆ. ಇದು ಹೃದಯ, ಜೀರ್ಣಕ್ರಿಯೆ ಮತ್ತು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ.

Leave a Reply

Your email address will not be published. Required fields are marked *