3 ಬಿಎಚ್ಕೆ ಸಿನಿಮಾ ಮಧ್ಯಮ ವರ್ಗದ ಕುಟುಂಬವೊಂದರ ಕತೆಯನ್ನು ಒಳಗೊಂಡಿದ್ದು, ಸಿನಿಮಾನಲ್ಲಿ ಕನ್ನಡತಿ ಚೈತ್ರಾ ಆಚಾರ್ ನಾಯಕಿ. ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದ ಮಂದಿ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾದ ನೋಡಿದ ಬಹುತೇಕ ಎಲ್ಲರೂ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೊ’, ‘ಟೋಬಿ’ ಇನ್ನೂ ಹಲವು ಉತ್ತಮ ಕನ್ನಡ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿರುವ ನಟಿ ಚೈತ್ರಾ ಆಚಾರ್ ಮೊದಲ ಬಾರಿಗೆ ತಮಿಳು ಸಿನಿಮಾ ಒಂದರಲ್ಲಿ ನಟಿಸಿದ್ದಾರೆ. ಖ್ಯಾತ ನಟ ಸಿದ್ಧಾರ್ಥ್ ಎದುರು ನಾಯಕಿಯಾಗಿ ಚೈತ್ರಾ ಆಚಾರ್ ನಟಿಸಿದ್ದು, ಸಿನಿಮಾದ ಹೆಸರು ‘3 ಬಿಎಚ್ಕೆ’. ಮಧ್ಯಮ ವರ್ಗದ ಕುಟುಂಬವೊಂದರ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾನಲ್ಲಿ ಚೈತ್ರಾ ಆಚಾರ್ ನಾಯಕಿ. ಇಂದು (ಜುಲೈ 3) ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದ ಮಂದಿ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾದ ನೋಡಿದ ಬಹುತೇಕ ಎಲ್ಲರೂ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.
ಖ್ಯಾತ ನಟ, ನಿರ್ಮಾಪಕ ಸಿಂಭು ಕೆಲ ದಿನಗಳ ಮುಂಚೆಯೇ ‘3 ಬಿಎಚ್ಕೆ’ ಸಿನಿಮಾ ನೋಡಿದ್ದು, ಸಿನಿಮಾ ಅದ್ಬುತವಾಗಿದೆ ಎಂದಿದ್ದಾರೆ. ನಟ ಸಿದ್ಧಾರ್ಥ್, ಶರತ್ಕುಮಾರ್ ಮತ್ತು ನಿರ್ದೇಶಕ ಶ್ರೀಗಣೇಶ್ ಅವರನ್ನು ಕೊಂಡಾಡಿದ್ದಾರೆ. ಇದೊಂದು ಸುಂದರವಾದ ಸಿನಿಮಾ, ನಿಮ್ಮನ್ನು ಭಾವುಕ ಪ್ರಪಂಚದ ಒಳಕ್ಕೆ ಇದು ಕರೆದೊಯ್ಯುತ್ತದೆ. ಅದ್ಭುತವಾದ ಸಿನಿಮಾ ನೀಡಿದ್ದಕ್ಕೆ ಚಿತ್ರತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ.