ಮಹೇಶ್ ಬಾಬು, ತಾವಾಯ್ತು ತಮ್ಮ ಕೆಲಸವಾಯ್ತು ಎಂದು ಇರುವ ನಟ. ಸಿನಿಮಾ, ಕುಟುಂಬದ ಹೊರತಾಗಿ ಯಾವುದೇ ವಿವಾದಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ ಮಹೇಶ್ ಬಾಬು. ಆದರೆ ಈಗ ಮಹೇಶ್ ಬಾಬು ಅವರನ್ನು ವಿವಾದವೊಂದು ತಾನಾಗಿಯೇ ಹುಡುಕಿಕೊಂಡು ಬಂದಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಬಾಬುಗೆ ನೊಟೀಸ್ ನೀಡಲಾಗಿದೆ.

ನಟ ಮಹೇಶ್ ಬಾಬು ವಿವಾದಗಳಿಂದ ದೂರವೇ ಇರುವ ನಟ. ಅವರು ಮಾತ್ರವಲ್ಲ, ಅವರ ಅಭಿಮಾನಿಗಳು ಸಹ ಯಾರೊಂದಿಗೂ ಜಗಳಕ್ಕೆ ನಿಲ್ಲುವುದಿಲ್ಲ. ತಾವಾಯ್ತು, ತಮ್ಮ ಸಿನಿಮಾ ಆಯ್ತು, ತಮ್ಮ ಕುಟುಂಬವಾಯ್ತು ಎಂದು ಆರಾಮವಾಗಿದ್ದಾರೆ. ಆದರೆ ಕೆಲವೊಮ್ಮೆ ವಿವಾದಗಳೇ ಮಹೇಶ್ ಬಾಬು ಅವರನ್ನು ಹುಡುಕಿಕೊಂಡು ಬರುವುದು ಉಂಟು. ಈಗ ಹಾಗೆಯೇ ಆಗಿದೆ. ಮಹೇಶ್ ಬಾಬು ಅವರ ವಿರುದ್ಧ ವಂಚನೆ ಆರೋಪ ಬಂದಿದ್ದು, ನೊಟೀಸ್ ಸಹ ನೀಡಲಾಗಿದೆ.