ಲಂಡನ್ನ || Southend plane ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನ..!

ಲಂಡನ್ನ || Southend plane ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನ..!

ಲಂಡನ್ : ಲಂಡನ್ನ ಸೌತ್ಎಂಡ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಸಣ್ಣ ವಿಮಾನವೊಂದು ಪತನಗೊಂಡಿದೆ. ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಿಂದ ಕಪ್ಪು ಹೊಗೆ ಮೇಲೇರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇಲ್ಲಿಯವರೆಗೆ ಯಾವುದೇ ಸಾವುನೋವುಗಳ ವರದಿಯಾಗಿಲ್ಲ. ಸ್ಥಳೀಯ ಸಮಯ ಸಂಜೆ 4 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪಘಾತಕ್ಕೀಡಾದ ವಿಮಾನವು ಬೀಚ್ ಬಿ200 ಸೂಪರ್ ಕಿಂಗ್ ಏರ್ ಆಗಿದ್ದು, ಇದು ಡ್ಯುಯಲ್  ಎಂಜಿನ್ ಹೊಂದಿರುವ ಟರ್ಬೊಪ್ರೊಪ್ ಜೆಟ್ ಆಗಿದ್ದು, ನೆದರ್ಲ್ಯಾಂಡ್ಸ್ನ ಲೆಲಿಸ್ಟಾಡ್ಗೆ ತೆರಳುತ್ತಿತ್ತು.ವಿಮಾನದಲ್ಲಿ ಎಷ್ಟು ಜನರಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇತ್ತೀಚೆಗಷ್ಟೇ ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 270 ಮಂದಿ ಪ್ರಾಣ ಕಳೆದುಕೊಂಡಿದ್ದರು.

Leave a Reply

Your email address will not be published. Required fields are marked *