ದರ್ಶನ್ ಫ್ಯಾನ್ ಪೇಜ್ಗಳ ಮೇಲೆ ಸಾಕಷ್ಟು ಆರೋಪಗಳು ಬಂದಿವೆ. ಅವರು ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ವಿಚಾರ ಸಾಕಷ್ಟು ಸುದ್ದಿ ಆಗಿದೆ. ಹೀಗಿರುವಾಗಲೇ ಲಾಯರ್ ಜಗದೀಶ್ ಅವರು ಒಂದಷ್ಟು ಆರೋಪ ಮಾಡಿದ್ದಾರೆ. ದರ್ಶನ್ ಫ್ಯಾನ್ ಪೇಜ್ಗಳ ನಿರ್ವಹಣೆಗೆ ಪ್ರತಿ ತಿಂಗಳು 25 ಲಕ್ಷ ರೂಪಾಯಿ ಪೂರೈಕೆ ಆಗುತ್ತಿದೆ ಎಂದು ಲಾಯರ್ ಜಗದೀಶ್ ಅವರು ಆರೋಪಿಸಿದ್ದಾರೆ.
ರಜನಿ ಎಕ್ಸ್ಪ್ರೆಸ್ ಎಂಬುವವರು ಈ ಗ್ರೂಪ್ನ ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಅವರನ್ನು ವಿಚಾರಣೆ ನಡೆಸಿ ಎಲ್ಲಾ ಮಾಹಿತಿ ಹೊರ ತೆಗೆಯಬೇಕು ಎಂದು ಆಗ್ರಹಿಸಿದ್ದಾರೆ.