ಬೆಂಗಳೂರು: ಕಬ್ಬನ್ ಪಾರ್ಕ್ ಸಿಲಿಕಾನ್ ಸಿಟಿ ಜನರ ನೆಚ್ಚಿನ ತಾಣಗಳಲ್ಲಿ ಒಂದು. ಅದರಲ್ಲೂ ವಾಯು ವಿಹಾರಿಗಳಿಗೆ, ಪರಿಸರ ಪ್ರಿಯರಿಗೆ, ಪ್ರೇಮಿಗಳಿಗೆ ನೆಚ್ಚಿನ ಸ್ಪಾಟ್. ಐತಿಹಾಸಿಕ ಹಿನ್ನೆಲೆ ಇರುವ ಕಬ್ಬನ್ ಪಾರ್ಕ್ ಇದೀಗ ಡೇಟಿಂಗ್ ಸ್ಪಾಟ್ ಆಗುತ್ತಿದೆಯಾ ಎಂಬ ಅನುಮಾಗಳು ಹುಟ್ಟಿಕೊಂಡಿವೆ. ಏಕೆಂದರೆ ಬುಕ್ ಮೈ ಶೋನಲ್ಲಿ ಕಬ್ಬನ್ ಪಾರ್ಕ್ನಲ್ಲಿ ಯುವಕ-ಯುವತಿಯರ ಬ್ಲೈಂಡ್ ಡೇಟ್ಗೆ ಅವಕಾಶ ಕಲ್ಪಿಸಿಲಾಗಿದೆ. ಸದ್ಯ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಬ್ಲೈಂಡ್ ಡೇಟಿಂಗ್ಗೆ ಸಾವಿರಾರು ರೂ
ಬ್ಲೈಂಡ್ ಡೇಟಿಂಗ್ ಬಗ್ಗೆ ಬುಕ್ ಮೈ ಶೋನ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಗಿದೆ. ಆಗಸ್ಟ್ 31ರವರೆಗೆ ನೋಂದಣಿಗೆ ಅವಕಾಶ ನೀಡಲಾಗಿದೆ. ಡೇಟಿಂಗ್ ಮಾಡಲು ಹುಡಗಿಯರಿಗೆ 199 ರೂ ಪ್ರವೇಶ ಶುಲ್ಕ ನಿಗದಿಪಡಿಸಿದ್ದರೆ, ಪುರಷರಿಗೆ 999 ದರ ನಿಗದಿ ಮಾಡಲಾಗಿದೆ. ಈ ಡೇಟಿಂಗ್ಗೆ ಈಗಾಗಲೇ ಸಾವಿರಕ್ಕೂ ಹೆಚ್ಚು ಜನರು ಲೈಕ್ ನೀಡಿದ್ದಾರೆ.
ಸದ್ಯ ಇಲಾಖೆಯ ಅನುಮತಿ ಇಲ್ಲದೇ ಡೇಟಿಂಗ್ ನಡೆಯುತ್ತಿದೆಯಾ ಎಂಬ ಅನುಮಾಗಳು ಹುಟ್ಟಿಕೊಂಡಿವೆ. ಏಕೆಂದರೆ ಈ ಸುದ್ದಿ ಕೇಳಿ ತೋಟಗಾರಿಕೆಯ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಡೇಟಿಂಗ್ಗೆ ಅವಕಾಶ ನೀಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಕೂಡ ಆಕ್ರೋಶ ವ್ಯಕ್ತವಾಗಿದೆ.
ಡೇಟಿಂಗ್ ಎಂಬುವುದು ಖಾಸಗಿ ಸಂಗತಿಯಾಗಿದ್ದು, ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಅವಕಾಶ ನೀಡುತ್ತಿರುವುದು ದೊಡ್ಡ ಚರ್ಚೆಗೂ ಕಾರಣವಾಗಿದೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಓದುಗರಿಗೆ ನೆಚ್ಚಿನ ತಾಣ ಕಬ್ಬನ್ ಪಾರ್ಕ್ ಡೇಟಿಂಗ್ ಸ್ಪಾಟ್ ಮಾಡಲು ಯತ್ನಿಸಲಾಗುತ್ತಿದ್ದು, ತೋಟಗಾರಿಕೆ ಇಲಾಖೆ ಕಾನೂನು ಹೋರಾಟಕ್ಕೂ ಮುಂದಾಗಿದೆ.