ಯಶ್ ತಾಯಿ ಪುಷ್ಪಾ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ ಆಗಸ್ಟ್ 1ರಂದು ತೆರೆ ಕಂಡಿತು. ‘ಸು ಫ್ರಮ್ ಸೋ’ ಸಿನಿಮಾ ಎದುರು ಬಿಡುಗಡೆ ಆಯಿತು. ರಾಜ್ ಬಿ. ಶೆಟ್ಟಿ ಸಿನಿಮಾ ಈಗ ಮೂರನೇ ವಾರಕ್ಕೆ ಕಾಲಿಟ್ಟಿದೆ. ಅಲ್ಲದೆ, ಕೆಲವು ಪರಭಾಷಾ ಸಿನಿಮಾಗಳು ಅಷ್ಟಾಗಿ ಮೆಚ್ಚುಗೆ ಪಡೆದಿಲ್ಲ. ಇದು ‘ಕೊತ್ತಲವಾಡಿ’ ಚಿತ್ರಕ್ಕೆ ಸಹಕಾರಿ ಆಗುವ ನಿರೀಕ್ಷೆ ಇದೆ. ಈ ಸಿನಿಮಾ ಈ ವಾರ ಯಾವ ರೀತಿಯಲ್ಲಿ ಕಲೆಕ್ಷನ್ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಯಶ್ ತಾಯಿ ಸಿನಿಮಾ ಎಂಬ ಕಾರಣಕ್ಕೆ ‘ಕೊತ್ತಲವಾಡಿ’ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿತ್ತು.ಕೆಲವರು ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಸಿನಿಮಾದ ನಿರೂಪಣೆಯನ್ನು ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಎಂದು ಕೆಲವರು ಹೇಳಿದ್ದಾರೆ.
‘ಕೊತ್ತಲವಾಡಿ’ ಸಿನಿಮಾ ಗಳಿಕೆ ಸ್ವಲ್ಪ ಕಡಿಮೆಯೇ ಇದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ sacnilk ವರದಿ ಮಾಡಿದೆ. ಆದರೆ, ಪುಷ್ಪ ಅವರ ಸಿನಿಮಾಗೆ ಟಿವಿ ಹಾಗೂ ಒಟಿಟಿ ಹಕ್ಕು ಒಳ್ಳೆಯ ರೀತಿಗೆ ಸೇಲ್ ಆಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಅವರು ಲಾಭದಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿದೆ.
For More Updates Join our WhatsApp Group :