ಕೊಪ್ಪಳ : ನಿನ್ನೆ ರಾತ್ರಿ 8 ಗಂಟೆಗೆ ಸುಮಾರಿಗೆ ನಗರದ ವಾರ್ಡ್ ನಂಬರ್ ಮೂರರಲ್ಲಿ ಗವಿಸಿದ್ದಪ್ಪ ನಾಯಕ್ ಹೆಸರಿನ 26-ವರ್ಷ ವಯಸ್ಸಿನ ಯುವಕನ ಕೊಲೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮ್ ಎಲ್ ಅರಸಿದ್ದಿ ಹೇಳಿದರು.
ಸಾದಿಖ್ ಹುಸ್ಸೇನ್ ಎಂಬುವವನು ಎರಡು ಲಾಂಗ್ಗಳನ್ನು ಬಳಸಿ ಕೊಲೆ ಮಾಡಿದ್ದಾನೆ, ಹತ್ಯೆಗೆ ಬಳಸಿದ ಆಯುಧ ಮತ್ತು ಕೊಲೆಗಾರನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದ ಎಸ್ಪಿ ಇದು ಕೇವಲ ವೈಯಕ್ತಿಕ ಕಾರಣಗಳಿಗೆ ಆಗಿರುವ ಕೊಲೆ, ಜನ ವಿಪರೀತ ಅರ್ಥಗಳನ್ನು ಕಲ್ಪಿಸಬಾರದು ಎಂದು ಹೇಳುತ್ತಾರೆ. ಪೊಲೀಸರು ಸಿಟಿ ರೌಂಡ್ಸ್ ಮಾಡುತ್ತಿದ್ದು ಪರಿಸ್ಥಿತಿ ಹದಗೆಡದಂತೆ ನಿಗಾ ವಹಿಸಲಾಗಿದೆ ಎಂದು ಅವರು ಹೇಳಿದರು.
For More Updates Join our WhatsApp Group :