ಬೆಂಗಳೂರು: ನಾಳೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆಯಬೇಕಿದ್ದ ಪ್ರತಿಭಟನಾ ಸಮಾವೇಶ 8ನೇ ತಾರೀಖಿನವರರೆಗೆ ಮುಂದೂಡುವಂತಾಗಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿಷಾದ ವ್ಯಕ್ತಪಡಿಸಿದರು. ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ಅವರು, ಜಾರ್ಖಂಡ್ ಮುಕ್ತಿ ಮೋರ್ಚಾದ ಸಂಸ್ಥಾಪಕ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳಲು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ನಾಳೆ ತೆರಳುತ್ತಿರುವುದರಿಂದ 5 ನೇ ತಾರೀಖು ನಿಗದಿಯಾಗಿದ್ದ ಪ್ರತಿಭಟನಾ ಸಮಾವೇಶವನ್ನು ಮುಂದೂಡುವುದು ಅನಿವಾರ್ಯವಾಗಿದೆ.
ಸೊರೇನ್ ಇಂಡಿಯ ಬ್ಲಾಕ್ನ ಪ್ರಮುಖ ಸದಸ್ಯರಾಗಿದ್ದರು, ಕಾಂಗ್ರೆಸ್ ನೊಂದಿಗೆ ಅವರ ಬಾಂಧವ್ಯಕ್ಕೆ ದಶಕಗಳ ಇತಿಹಾಸವಿದೆ, ಕಾಂಗ್ರೆಸ್ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಅನಾನುಕೂಲವಾಗಿದೆ, ಅದರೆ ಸ್ಥಿತಿಯ ಬೇಡಿಕೆ ಹಾಗಿದೆ, ಬೇರೇನೂ ಮಾಡಲಾಗಲ್ಲ ಎಂದು ಶಿವಕುಮಾರ್ ಹೇಳಿದರು.
For More Updates Join our WhatsApp Group :