ಮತ್ತಿಹಳ್ಳಿ ಗ್ರಾಮದಲ್ಲಿ ಭಕ್ತಿಯ ಮಹೋತ್ಸವ – ವಿಮಾನ ಗೋಪುರ ಲೋಕಾರ್ಪಣೆ.

ಮತ್ತಿಹಳ್ಳಿ ಗ್ರಾಮದಲ್ಲಿ ಭಕ್ತಿಯ ಮಹೋತ್ಸವ – ವಿಮಾನ ಗೋಪುರ ಲೋಕಾರ್ಪಣೆ.

ತಿಪಟೂರು : ತಿಪಟೂರು ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಬಿದರಾಂಬಿಕ ದೇವಿ ದೇವಸ್ಥಾನದಲ್ಲಿ ಭಾನುವಾರ ನಡೆದ ವಿಮಾನ ಗೋಪುರ ಉದ್ಘಾಟನಾ ಸಮಾರಂಭವು ಭಕ್ತಿಭಾವದಿಂದ ಕಂಗೊಳಿಸಿತು. ನೂರಾರು ಭಕ್ತರು, ಊರಿನ ಹಿರಿಯರು, ನೂರಾರು ಗ್ರಾಮಗಳಿಂದ ಬಂದ ಸಾವಿರಾರು ಭಕ್ತರ ಮಧ್ಯೆ ನಂಬಿಕೆ ಹಾಗೂ ಶ್ರದ್ಧೆಯ ಲೋಕಾರ್ಪಣೆಗೊಂಡಿತು.

ಧಾರ್ಮಿಕ ಸಂಸ್ಕೃತಿ ಹಾಗೂ ಗ್ರಾಮೀಣ ಏಕತೆಗಾಗಿ ಮಾದರಿಯಾದ ಈ ಮಹೋತ್ಸವು ಭಕ್ತರ ಸಂಭ್ರಮದಿAದ ಕೂಡಿದ್ದು, ಈ ಮಹೋತ್ಸವಕ್ಕೆ ಕೆರೆಗೋಡಿ ರಂಗಾಪುರ ಸುಕ್ಷೇತ್ರದಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮಿಜಿ ಹಾಗೂ ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದು, ವಿಮಾನ ಗೋಪುರಕ್ಕೆ ಕಳಸವನ್ನು ಹಸ್ತಾಂತರಿಸಿದರು. ಅಲ್ಲದೆ ಕರೀಕೆರೆ ಬ್ರಹ್ಮಲಿಂಗೇಶ್ವರ ಸ್ವಾಮಿ, ಬೆಳಗುಂಬ ವೀರಭದ್ರೇಶ್ವರ, ರಾಮನಹಳ್ಳಿ ಮಲ್ಲಿಕಾರ್ಜುನಸ್ವಾಮಿ, ಅಮ್ಮನಹಟ್ಟಿ ಮಾಳಮ್ಮದೇವಿ, ಮತ್ತಿಹಳ್ಳಿ ಯಲ್ಲಮ್ಮದೇವಿ ಹಾಗೂ ಮಡೆನೂರು ಗೌಡನಕಟ್ಟೆ ಬಿದರಾಂಬಿಕ ದೇವಿಯ ಪವಿತ್ರ ಪ್ರತಿಮೆಗಳ ಮೆರವಣಿಗೆ ಗ್ರಾಮಕ್ಕೆ ಆಗಮಿಸಿ, ಉತ್ಸವಕ್ಕೆ ಧಾರ್ಮಿಕ ಘನತೆ ನೀಡಿದವು.

ಬೆಳಗ್ಗಿನ ಜಾವದಿಂದಲೇ ದೇವಾಲಯದ ಆವರಣದಲ್ಲಿ ವೇದಮಂತ್ರಗಳ ಘೋಷ, ಹೂವಿನ ಸುವಾಸನೆ ಇವೆಲ್ಲವು ಹಳ್ಳಿಯ ಗಾಳಿಯಲ್ಲೇ ಭಕ್ತಿ ತುಂಬಿಸಿತು. ವಿಶೇಷ ಪೂಜೆ, ಹೋಮ-ಹವನ, ಅಭಿಷೇಕದೊಂದಿಗೆ ವಿಮಾನ ಗೋಪುರ ಉದ್ಘಾಟನೆ ನೆರವೇರಿತು. ಗೋಪುರದ ಹೊಸ ಕಂಗೊಳಿನ ದೃಶ್ಯವನ್ನು ನೋಡಿ ಹಿರಿಯರ ಆನಂದವು ಇಮ್ಮಡಿಗೊಂಡಿತ್ತು. “ನಮ್ಮ ಹಳ್ಳಿಯ ದೇವರಿಗೆ ಇಷ್ಟು ಶೋಭೆ ತಂದಿರುವುದು ತಲೆಮಾರುಗಳ ಹಾರೈಕೆ” ಎಂಬ ಭಾವನೆ ಪ್ರತಿಯೊಬ್ಬರ ಹೃದಯದಲ್ಲೂ ಉಕ್ಕಿ ಹರಿಯಿತು.

ಮತ್ತಿಹಳ್ಳಿ ಗ್ರಾಮದಲ್ಲಿ ಭಕ್ತಿಯ ಮಹೋತ್ಸವ – ವಿಮಾನ ಗೋಪುರ ಲೋಕಾರ್ಪಣೆ.

ನಂದಿ ದ್ವಜಾರೋಹಣ, ನಂದಿ ಧ್ವಜ ಕುಣಿತ, ಹೋಮ ಹವನ, ಕಳಸ ಪೂಜೆ, ಮಣೇವು ಮುಂತಾದ ವಿಧಿವಿಧಾನಗಳು ವಿದ್ವಾನ್‌ಗಳ ವೇದಮಂಟಪದಲ್ಲಿ ಪೌರೋಹಿತ್ಯದಡಿ ನಿಷ್ಠೆಯಿಂದ ನೆರವೇರಿಸಿ ಭಕ್ತರು ಧಾರ್ಮಿಕ ವಾತಾವರಣವನ್ನು ಅನುಭವಿಸಿದರು.

ಕಾರ್ಯಕ್ರಮದ ಅಂಗವಾಗಿ ದೇವರ ನೂರಕ್ಕೂ ಹೆಚ್ಚು ಗ್ರಾಮಗಳಿಗೆ ತೆರಳಿ ಆಹ್ವಾನಿಸಿ, ಭಿಕ್ಷಾಟನೆ ನಡೆದು, ಭಕ್ತರು ಮನಮೆಚ್ಚಿ ಕಾಣಿಕೆ ಸಲ್ಲಿಸಿದರು. ಶನಿವಾರದ ಸಂಜೆಯಿAದ ಮಹಾಪ್ರಸಾದ ವಿತರಣೆ ನಡೆಯಿತು. “ದೇವಾಲಯವು ಕೇವಲ ಆರಾಧನೆಯ ಸ್ಥಳವಲ್ಲ; ಅದು ನಮ್ಮ ಸಂಸ್ಕೃತಿ, ಒಗ್ಗಟ್ಟು, ಮತ್ತು ಹಳ್ಳಿಯ ಹೃದಯ” ಎಂದು ಗ್ರಾಮಸ್ಥರು ಹೆಮ್ಮೆಯಿಂದ ಹೇಳಿದರು.

ಈ ಗೋಪುರ ಉದ್ಘಾಟನೆ ಮತ್ತಿಹಳ್ಳಿಯ ಧಾರ್ಮಿಕ ಇತಿಹಾಸದಲ್ಲಿ ಚಿರಸ್ಮರಣೀಯ ಪುಟವನ್ನು ಬರೆಯಿತು. ಭಕ್ತಿ, ಭಾವನೆ, ಮತ್ತು ಹಳ್ಳಿಯ ಒಗ್ಗಟ್ಟಿಗೆ ಇದು ಸಾಕ್ಷಿಯಾಯಿತು.

ಮಹೋತ್ಸವದ ಅಂಗವಾಗಿ ಗ್ರಾಮಸ್ಥರು ಹಾಗೂ ಭಕ್ತರ ಸಹಭಾಗಿತ್ವದಲ್ಲಿ ಶನಿವಾರ ಸಂಜೆ ಯಿಂದ ಬೂಂದಿ ಪಾಯಸ ಪಲ್ಯ ಮಜ್ಜಿಗೆ, ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಭಕ್ತರು ಸತ್ಕಾರವನ್ನು ಸ್ವೀಕರಿಸಿದರು. ಧಾರ್ಮಿಕ ಸಮಿತಿಗಳ ಸಹಯೋಗದಿಂದ ಎಲ್ಲ ಕಾರ್ಯಕ್ರಮಗಳು ಶಿಸ್ತುಬದ್ಧವಾಗಿ, ಸಾಂಪ್ರದಾಯಿಕ ಶೋಭೆಯಿಂದ ನೆರವೇರಿದವು.

ದೇವಾಲಯದ ಅಭಿವೃದ್ಧಿ ಹಾಗೂ ಧಾರ್ಮಿಕ ಸಂಸ್ಕೃತಿಯ ಉಳಿವಿಗೆ ಗ್ರಾಮಸ್ಥರ ಸಹಕಾರದಿಂದ ನೆರವೇರಿದ್ದು. ಈ ಮಹೋತ್ಸವವು ಮತ್ತಿಹಳ್ಳಿ ಮಾತ್ರವಲ್ಲದೆ ಸುತ್ತಮುತ್ತಲಿನ ನೂರಕ್ಕೂ ಹೆಚ್ಚು ಗ್ರಾಮಗಳಿಂದ ಭಕ್ತರು ಆಗಮಿಸಿ ಧಾರ್ಮಿಕ ಏಕತೆ ಹಾಗೂ ಭಕ್ತಿಭಾವದ ಸಂಕೇತವಾಗಿ ಇತಿಹಾಸದಲ್ಲಿ ಗುರುತಿಸಿಕೊಳ್ಳುವಂತಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *