ಬಿಜ್ನೋರ್ : ಮಹಿಳೆಯೊಬ್ಬಳು ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯ ಮುಖದ ಮೇಲೆ ಕಾಲಿಟ್ಟು, ಕೋಲಿನಿಂದ ಥಳಿಸಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ನಡೆದಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಿಳೆಯೊಬ್ಬರು ಮುಖಕ್ಕೆ ದುಪಟ್ಟಾ ಮುಚ್ಚಿಕೊಂಡು ವ್ಯಕ್ತಿಯೊಬ್ಬನಿಗೆ ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಕೆಯೊಂದಿಗೆ ಬೇರೊಬ್ಬ ವ್ಯಕ್ತಿ ಕೂಡ ಇದ್ದಾನೆ.
ಆ ಮಹಿಳೆಯನ್ನು ಜ್ಯೋತಿ ಎಂದು ಗುರುತಿಸಲಾಗಿದ್ದು, ಆ ವ್ಯಕ್ತಿಯ ಹೆಸರು ಅಮಿತ್ ಆರ್ಯ.ಇಬ್ಬರೂ ಇನ್ಸ್ಟಾಗ್ರಾಮ್ನಲ್ಲಿ ಸ್ನೇಹಿತರಾಗಿದ್ದರು. ಜ್ಯೋತಿ ಮೀರತ್ನಿಂದ ಅಮಿತ್ನನ್ನು ಬಿಜ್ನೋರ್ಗೆ ಬರಲು ಹೇಳಿದ್ದಳು. ಬಳಿಕ ಆಕೆ ನಾಲ್ವರು ಸ್ನೇಹಿತರ ಜತೆ ಸೇರಿ ಆತನಿಗೆ ಹಿಂಸೆ ನೀಡಿದ್ದಾಳೆ.
For More Updates Join our WhatsApp Group :
