ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಎಸ್ ಬಿದರೆ ಗ್ರಾಮದಲ್ಲಿ ಕುಮಾರ್ ಎನ್ನುವವರ ಭೀಕರ ಕೊಲೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ದರ್ಶನ್ ಹೆಸರಿನ ವ್ಯಕ್ತಿ, ಕೆಳಗೆ ಬಿದ್ದಿದ್ದ ಎಳನೀರನ್ನು ಮುಟ್ಟಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳು ಕುಮಾರ್ ಮೇಲೆ ಮನವಂದಂತೆ ಹಲ್ಲೆ ನಡೆಸಿ ಕುರಿಯನ್ನು ಕುಯ್ಯುವಂತೆ ಅವರ ಕೈಕಾಲುಗಳನ್ನು ಕಡಿದಿದ್ದಾರೆ.
ಯಾರೋ ವಿಷಯ ತಿಳಿಸಿದ ಬಳಿಕ ಗ್ರಾಮಸ್ಥರು ಅಲ್ಲಿಗೆ ಧಾವಿಸಿದಾಗ ಕುಮಾರ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಯಾರಿಗೂ ಗೊತ್ತಾಗಬಾರದೆನ್ನುವ ಕಾರಣಕ್ಕೆ ಒಂದು ಹಳ್ಳದಲ್ಲಿ ಎಳೆದು ಹಾಕಲಾಗಿತ್ತು. ಒಂದು ಅಂಬ್ಯುಲೆನ್ಸ್ ತರಿಸಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಕುಮಾರ್ ಉಳಿಯಲಿಲ್ಲ ಎಂದು ದರ್ಶನ್ ಹೇಳುತ್ತಾರೆ.
For More Updates Join our WhatsApp Group :