ಚಿತ್ರದುರ್ಗ: ಚಿತ್ರದುರ್ಗದ ಪ್ರಥಮ ವರ್ಷ ಪದವಿ ವಿದ್ಯಾರ್ಥಿನಿ 19-ವರ್ಷದ ವರ್ಷಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮತ್ತಷ್ಟು ಸುಳಿವುಗಳು ಸಿಕ್ಕಿವೆ. ಚೇತನ್ ಎಂಬ ಯುವಕನನ್ನು ನಿನ್ನೆಯೇ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು ಅವನು ಕೊಲೆ ಮಾಡಿರೋದನ್ನು ಒಪ್ಪಿಕೊಂಡಿದ್ದಾನೆ.
ಆಗಸ್ಟ್ 14 ರಂದು ವರ್ಷಿತಾ ಮತ್ತು ಚೇತನ್ ರಸ್ತೆಯ ಮೇಲೆ ನಡೆದು ಹೋಗುತ್ತಿರುವುದು ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ. ಮುಂದೆ ನಡೆದು ಹೋಗುತ್ತಿರುವವನೇ ಚೇತನ್ ಮತ್ತು ಅವನನ್ನು ವರ್ಷಿತಾ ಹಿಂಬಾಲಿಸುತ್ತಿದ್ದಾಳೆ. ಅವರಿಬ್ಬರು ದ್ವಿಚಕ್ರವಾಹನವೊಂದಕ್ಕೆ ಪೆಟ್ರೋಲ್ ಬಂಕೊಂದರಲ್ಲಿ ಇಂಧನ ತುಂಬಿಸಿಕೊಂಡಿರುವ ದೃಶ್ಯ ಕೂಡ ಅಲ್ಲಿನ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಚೇತನ್ನ ಪೂರ್ವನಿಯೋಜಿತ ಸಂಚಿಗೆ ವರ್ಷಿತಾ ಬಲಿಯಾಗಿರುವಳೆಂದು ಹೇಳಲಾಗುತ್ತಿದೆ.
For More Updates Join our WhatsApp Group :