ಬೆಂಗಳೂರು: ನಾಳೆ ಗೌರಿ ಗಣೇಶ ಹಬ್ಬ, ಸ್ವರ್ಣ ಗೌರಿ ವ್ರತಕ್ಕೆ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ. ಹಬ್ಬ ಬಂತು ಅಂತಾದರೆ ನಗರದ ಕೆಆರ್ ಮಾರ್ಕೆಟ್ ಗ್ರಾಹಕರಿಂದ ಕಿಕ್ಕಿರಿದಂತೆ ನೆರೆದುಬಿಡುತ್ತದೆ. ಹೂವು-ಹಣ್ಣು ಮತ್ತು ತರಕಾರಿಗಳ ಖರೀದಿಗೆ ಗೃಹಿಣಿಯರೇ ಆಗಬೇಕು.
ಎಂದಿನಂತೆ ಹಬ್ಬಗಳ ಸೀಸನಲ್ಲಿ ಹೂವು-ಹಣ್ಣುಗಳ ಬೆಲೆ ಮುಗಿಲು ಮುಟ್ಟಿದೆ. ಖರೀದಿಗೆ ಬಂದಿರುವ ಮಹಿಳೆಯರು ಸುಗಂಧಭರಿತ ಹೂವುಗಳ ಬೆಲೆ ತುಂಬಾ ಜಾಸ್ತಿಯೆಂದು ಲಕ್ಷ್ಮಿ ಹೆಸರಿನ ಗೃಹಿಣಿ ಹೇಳುತ್ತಾರೆ. ವ್ಯಾಪಾರಸ್ಥರೊಂದಿಗೆ ಚೌಕಾಶಿ ಮಾಡುವಂತೆಯೇ ಇಲ್ಲ, ಅವರು ಹೇಳಿದಷ್ಟು ದುಡ್ಡು ಕೊಡಬೇಕು ಎಂದು ಅವರು ಹೇಳುತ್ತಾರೆ.
For More Updates Join our WhatsApp Group :