ಹಾಲು ಮತ್ತು ಮೊಸರು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ತಿಳಿದಿರುವ ವಿಚಾರ. ಆದರೆ ಅವುಗಳನ್ನು ಸೇವಿಸಲು ಕೂಡ ಸರಿಯಾದ ಸಮಯವಿದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಎಷ್ಟೇ ಆರೋಗ್ಯಕರ ಪದಾರ್ಥವಾದರೂ ಸಹ ಅದರ ಸೇವನೆ ಮಾಡುವುದಕ್ಕೆ ಒಂದು ಸಮಯವಿರುತ್ತದೆ. ಅದರ ಹೊರತಾಗಿ, ನಮ್ಮ ಮನಸ್ಸಿಗೆ ಕಂಡಾಗ ಸೇವನೆ ಮಾಡಿದರೆ ಅದರಿಂದ ಸಿಗುವ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗಿರುತ್ತದೆ. ಅದರಲ್ಲಿಯೂ ವಿಶೇಷವಾಗಿ ಬೆಳಗಿನ ಸಮಯದಲ್ಲಿ ಹಾಲು ಮತ್ತು ಮೊಸರು ಸೇವಿಸುವುದು ತುಂಬಾ ಅಪಾಯಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಏಕೆಂದರೆ ಈ ಸಮಯದಲ್ಲಿ ಸೇವನೆ ಮಾಡುವುದರಿಂದ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾದರೆ ಹಾಲು ಮತ್ತು ಮೊಸರು ಸೇವನೆ ಮಾಡುವುದಕ್ಕೆ ಸರಿಯಾದ ಸಮಯ ಯಾವುದು? ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಏನಾಗುತ್ತೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಅನೇಕ ಜನರು ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ಹಾಲನ್ನು ಕುಡಿಯುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಮಾತ್ರವಲ್ಲ, ಕೆಲವರು ಖಾಲಿ ಹೊಟ್ಟೆಯಲ್ಲಿ ಮೊಸರನ್ನು ಕೂಡ ಸೇವನೆ ಮಾಡುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದು ಅಥವಾ ಮೊಸರನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ, ಖಾಲಿ ಹೊಟ್ಟೆಯಲ್ಲಿ ಹಾಲು ಅಥವಾ ಮೊಸರು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಆದರೆ ಇದಕ್ಕೂ ಕಾರಣವಿದೆ. ಆರೋಗ್ಯಕ್ಕೆ ಅಮೃತವಾದರೂ ಸಹ ಇದರ ಸೇವನೆಯನ್ನು ಖಾಲಿ ಹೊಟ್ಟೆಯಲ್ಲಿ ಮಾಡಬಾರದು.
For More Updates Join our WhatsApp Group :