ಮೈಸೂರು: ಮೈಸೂರು-ಕೊಡಗು ಬಿಜೆಪಿ ಸಂಸದ ಯದುವೀರ್ ಕೃಷ್ಣ್ದತ್ ಒಡೆಯರ್ ದ್ವಂದ್ವ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದಾರೆ. ಈಗಾಗಲೇ ವರದಿಯಾಗಿರುವಂತೆ, ಸಾಹಿತಿ ಬಾನು ಮುಷ್ತಾಕ್ ಅವರು ದಸರಾ ಉತ್ಸವ ಉದ್ಘಾಟಿಸುವುದನ್ನು ಅವರು ಸ್ವಾಗತಿಸಿದ್ದರು ಮತ್ತು ಷರತ್ತು ವಿಧಿಸಿರಲಿಲ್ಲ.
ಅದರೆ ಈಗ ಅವರು, 2023 ರಲ್ಲಿ ಕನ್ನಡ ವೇದಿಕೆಯೊಂದರಲ್ಲಿ ಬಾನು ಮುಷ್ತಾಕ್ ಕನ್ನಡಾಂಬೆಯ ಕುರಿತು ನೀಡಿದ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣ ನೀಡಲಿ ಇಲ್ಲವೇ ಅಗಿನ ಹೇಳಿಕೆಯನ್ನು ವಾಪಸ್ಸು ಪಡೆಯಲಿ, ಇವರೆಡಲ್ಲಿ ಯಾವುದಾದರೂ ಒಂದನ್ನು ಅವರು ಮಾಡಿದರೆ ಅವರು ದಸರಾ ಮಹೋತ್ಸವ ಉದ್ಘಾಟಿಸಲು ಅಭ್ಯಂತರವಿಲ್ಲ ಎಂದು ಯದುವೀರ್ ಹೇಳಿದರು. ದಸರಾ ಉತ್ಸವವು ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳ ವೇದಿಕೆಯಾಗಿದೆ ಎಂದು ಅವರು ಹೇಳಿದರು.
For More Updates Join our WhatsApp Group :