ಅಫ್ಘಾನಿಸ್ತಾನ: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಈಗಾಗಲೇ 1,411 ಮಂದಿ ಮೃತಪಟ್ಟಿದ್ದು, 3,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜೊತೆಗೆ 5,000ಕ್ಕೂ ಹೆಚ್ಚು ಮನೆಗಳು ಧ್ವಂಸಗೊಂಡಿವೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ತಿಳಿಸಿದ್ದಾರೆ.
ಭಾನುವಾರ ತೀವ್ರತೆ 6.0 ರಿಕ್ಟರ್ ಮಾಪಕದ ಭೂಕಂಪ ಬಡಿದಿದ್ದು, ಪರ್ವತ ಪ್ರದೇಶಗಳು ಗಂಭೀರ ಹಾನಿಗೊಳಗಾಗಿವೆ. ರಕ್ಷಣಾ ಪಡೆಗಳು ನೆಲಸಮವಾದ ಗ್ರಾಮಗಳಿಗೆ ತಲುಪಲು ಹರಸಾಹಸ ಪಡುತ್ತಿವೆ.
ಸಂಪೂರ್ಣ ಗ್ರಾಮಗಳ ಮನೆಗಳು ಮಣ್ಣು ಮತ್ತು ಮರದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು, ಬದುಕುಳಿದವರ ಶೋಧ ಕಾರ್ಯ ಇನ್ನೂ ಮುಂದುವರಿದಿದೆ. 2021ರಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಇದು ಮೂರನೇ ಭೀಕರ ಭೂಕಂಪ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
For More Updates Join our WhatsApp Group :



