ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಒಂದು ಒಂಟಿ ಕಾಡಾನೆವಾಹನ ಸವಾರರಿಗೆ ಕಾಟ ಕೊಡುತ್ತಿದೆ. ವಿಶೇಷವಾಗಿ ತರಕಾರಿ, ಕಬ್ಬು, ಬಾಳೆ ಲಾರಿಗಳನ್ನೇ ಗುರಿಯಾಗಿಸಿ, ವಾಹನಗಳನ್ನು ತಡೆದು ಪರಿಶೀಲನೆ ನಡೆಸುತ್ತಿರುವಂತೆಯೇ ವರ್ತಿಸುತ್ತಿದೆ.
ಟಾರ್ಪಲ್ ಹಾಕಿದ ಲಾರಿಗಳನ್ನೂ ಬಿಡದೆ ತಪಾಸಣೆ ಮಾಡುವ ಈ ಆನೆ, ವಾಹನ ಸವಾರರನ್ನು ಹಾಗೂ ಲಾರಿ ಚಾಲಕರನ್ನು ಭೀತಿಗೊಳಿಸಿದೆ. ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ಓಡಿಸಲು ಪ್ರಯತ್ನಿಸಿದರೂ, ಆನೆ ತರಕಾರಿ ಲಾರಿಗಳನ್ನು ಹುಡುಕುವುದನ್ನು ನಿಲ್ಲಿಸುತ್ತಿಲ್ಲ. ಇತ್ತೀಚಿನ ಘಟನೆಯಲ್ಲಿ, ಕಾಡಾನೆ ರಸ್ತೆಯ ಮಧ್ಯೆ ಲಾರಿಯನ್ನು ತಡೆದು “ಸಂಕ್” ಬೇಡುವಂತೆಯೇ ತರಕಾರಿಗಳನ್ನು ದಾಳಿ ನಡೆಸಿದೆ. ಈ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆ.
For More Updates Join our WhatsApp Group :