ಬೆಂಗಳೂರು: ಕಿಚ್ಚ ಸುದೀಪ್ ಅವರ 47ನೇ ಸಿನಿಮಾ ‘ಮಾರ್ಕ್ ಶೀರ್ಷಿಕೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸುದೀಪ್ ಬರ್ತ್‌ಡೇ ಪ್ರಯುಕ್ತ ಟೈಟಲ್ ರಿವೀಲ್ ಆದರೂ, ಇದೀಗ ಟೈಟಲ್ ಹಕ್ಕು ಕುರಿತಾಗಿ ಗೊಂದಲ ಉಂಟಾಗಿದೆ.
ಟೈಟಲ್ ಗೊಂದಲ: ಕೆಆರ್ಜಿ ಸ್ಟುಡಿಯೋ: ಎರಡು ವರ್ಷಗಳ ಹಿಂದೆ ‘ಮಾರ್ಕ್’ ಟೈಟಲ್ ನೋಂದಣಿ ಮಾಡಿಸಿಕೊಂಡಿತ್ತು. ನಂತರ ಸುದೀಪ್‌ಗಾಗಿ ಶೀರ್ಷಿಕೆಯನ್ನು ಬಿಟ್ಟುಕೊಟ್ಟಿತು. ಸತ್ಯ ಜ್ಯೋತಿ ಫಿಲ್ಮ್ಸ್: ಪ್ರಸ್ತುತ ಸುದೀಪ್ ನಟಿಸುತ್ತಿರುವ ಚಿತ್ರ ಇದೇ ಸಂಸ್ಥೆಯ ಅಡಿಯಲ್ಲಿ ಬರುತ್ತಿದೆ. ಗೌರವ್ ಫಿಲ್ಮ್ಸ್: ಇದೇ ವರ್ಷದ ಮೇ 19ರಂದು ‘ಮಾರ್ಕ್’ ಟೈಟಲ್ ಅನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಮಾಡಿಕೊಂಡಿದೆ.
ಹೀಗಾಗಿ, ಟೈಟಲ್ ನಮ್ಮದೇ ಎಂದು ಗೌರವ್ ಫಿಲ್ಮ್ಸ್ ಹೇಳುತ್ತಿದೆ. ಆದರೆ ಕೆಆರ್ಜಿ ಮೊದಲು ನೋಂದಣಿ ಮಾಡಿರುವುದರಿಂದ ‘ಮಾರ್ಕ್’ ಟೈಟಲ್ ಸುದೀಪ್ ತಂಡಕ್ಕೆ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ರಿಲೀಸ್ ಪ್ಲಾನ್ : ಸಿನಿಮಾದ ಶೂಟಿಂಗ್ ಈಗಾಗಲೇ 60% ಪೂರ್ಣಗೊಂಡಿದೆ, ಡಿಸೆಂಬರ್ 25 ರಂದು ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ.
For More Updates Join our WhatsApp Group :