ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸುವ ಪ್ರಸ್ತಾವನೆಗೆ ಸಿದ್ದರಾಮಯ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಂಡಿದ್ದು, ರಾಜ್ಯ ಚುನಾವಣಾ ಆಯೋಗದ ನೇತೃತ್ವದಲ್ಲಿ ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿಸುವುದಕ್ಕೂ ಒಪ್ಪಿಗೆ ನೀಡಲಾಗಿದೆ.
ಇದರ ಹಿನ್ನೆಲೆ: ಇವಿಎಂ ಬಗ್ಗೆ ಮತದಾನ ದುರಸ್ತಿಯ ಆರೋಪ**ವನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೇಶವ್ಯಾಪಿ ಹೋರಾಟದ ಮೂಲಕ ಎತ್ತಿಹಿಡಿದಿದ್ದಾರೆ.ಇದಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಒಲವು ತೋರಿಸಿದೆ.ಸಚಿವ ಸಂಪುಟ ಈಗಾಗಲೇ ಶಿಫಾರಸು ಮಾಡಿದರೂ, ಅಂತಿಮ ತೀರ್ಮಾನವನ್ನು ರಾಜ್ಯ ಚುನಾವಣಾ ಆಯೋಗವೇ ಕೈಗೊಳ್ಳಬೇಕು.
ಚುನಾವಣಾ ಆಯೋಗದ ನಿಲುವು :
ರಾಜ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಸ್ಪಷ್ಟನೆ ನೀಡಿದ್ದು ಹೀಗಿದೆ: ಸರ್ಕಾರ ಶಿಫಾರಸು ಮಾಡಿದರೂ, ಆಯೋಗ ಸ್ವತಂತ್ರ ಸಂಸ್ಥೆ ಆಗಿರುವುದರಿಂದ ನಿಯಮಾನುಸಾರವೇ ತೀರ್ಮಾನ ಕೈಗೊಳ್ಳಲಾಗುವುದು.ರಾಜ್ಯ ಸರ್ಕಾರ ರೂಪಿಸುವ ಕಾನೂನುಗಳನ್ನು ಪಾಲನೆ ಮಾಡಬೇಕಾಗುತ್ತದೆ. ಆದರೆ, ಅಗತ್ಯವಿದ್ದಲ್ಲಿ ಆಯೋಗ ತಿರಸ್ಕರಿಸುವ ಹಕ್ಕು ಕೂಡ ಹೊಂದಿದೆ.ಹೀಗಾಗಿ, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವ ವಿಷಯ ಇನ್ನೂ ಅಂತಿಮವಾಗಿಲ್ಲ.
For More Updates Join our WhatsApp Group :