ಬೆಂಗಳೂರು: ಭ್ರಷ್ಟಾಚಾರ ಆರೋಪಗಳಿಂದ ಸುತ್ತುವರಿಯಲ್ಪಟ್ಟಿದ್ದ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
ಭೋವಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವೆಂಕಟೇಶ್ ಮೌರ್ಯ ಭ್ರಷ್ಟಾಚಾರ ಕುರಿತು ಗಂಭೀರ ಆರೋಪ ಮಾಡಿದ್ದು, ಪ್ರತಿಪಕ್ಷ ಬಿಜೆಪಿ ಸಹ ಸರ್ಕಾರದ ವಿರುದ್ಧ ಧ್ವನಿ ಎತ್ತಿತ್ತು. ಪ್ರಕರಣ ರಾಜಕೀಯ ತೀವ್ರತೆ ಪಡೆದ ಹಿನ್ನೆಲೆಯಲ್ಲಿ ಸಿಎಂ ಸ್ವತಃ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದರು.
ನಿಗಮದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ:
* 2024ರ ಆಗಸ್ಟ್‌ನಲ್ಲಿ ಸಿಐಡಿ ಭೋವಿ ನಿಗಮ ಕಚೇರಿಯಲ್ಲಿ ದಾಳಿ ನಡೆಸಿತ್ತು.
* 2021-22ರಲ್ಲಿ ಸಾಲ ಮಂಜೂರಾತಿ ವೇಳೆ ದಾಖಲೆ ದುರ್ಬಳಕೆ ಹಾಗೂ 10 ಕೋಟಿ ರೂ. ಅಕ್ರಮ ವರ್ಗಾವಣೆ ಆರೋಪ.
* ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಸಹಭಾಗಿತ್ವದಲ್ಲಿ 85 ಕೋಟಿ ರೂ. ಭ್ರಷ್ಟಾಚಾರ ನಡೆದಿತ್ತು ಎಂದು ಆರೋಪ.
ರವಿಕುಮಾರ್ ವಿರುದ್ಧ ಹೊಸ ಆರೋಪ:
* ಫಲಾನುಭವಿಗಳಿಗೆ ಸೌಲಭ್ಯ ನೀಡಲು ಶೇಕಡಾ 60% ಲಂಚ ಕೇಳಲಾಗಿದೆ ಎಂದು ವೆಂಕಟೇಶ್ ಮೌರ್ಯ ಆರೋಪ.
* ಇದೇ ವಿಚಾರದಲ್ಲಿ ರಾಜಕೀಯ ಕುತಂತ್ರ ಹೆಚ್ಚಾಗಿದ್ದು, ಬಿಜೆಪಿ ನಾಯಕ ಆರ್. ಅಶೋಕ್ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ರಾಜೀನಾಮೆಯ ಬೆಳವಣಿಗೆ ವಿಪಕ್ಷಗಳಿಗೆ ದೊಡ್ಡ ಬೂಸ್ಟ್ ಆಗಿದ್ದು, ಸರ್ಕಾರ ಮತ್ತಷ್ಟು ಒತ್ತಡಕ್ಕೆ ಒಳಗಾಗಿದೆ.
For More Updates Join our WhatsApp Group: